ರಾಮನಗರ: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ರಾಮನಗರ ಜಿಲ್ಲಾ ನ್ಯಾಯಾಲಯವು (Ramanagara District Court) ಸಿಹಿ ಸುದ್ದಿ ನೀಡಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಟೈಪಿಸ್ಟ್, ಬೆರಳಚ್ಚುಗಾರ-ನಕಲುಗಾರ, ಆಜ್ಞಾಪತ್ರ ಜಾರಿಕಾರ (Process Server) ಹಾಗೂ ಸೇವಕ (Peon) ಸೇರಿದಂತೆ ಒಟ್ಟು 55 ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 30, 2026 ರಿಂದ ಆಗಸ್ಟ್ 31, 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
1. ಟೈಪಿಸ್ಟ್ (Typist) – 10 ಹುದ್ದೆಗಳು
ಅರ್ಹತೆ: 2nd PUC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ/ಕಿರಿಯ ಶ್ರೇಣಿ ಬೆರಳಚ್ಚು (Typing) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ: ₹34,100 – ₹67,600/-
2. ಬೆರಳಚ್ಚುಗಾರ – ನಕಲುಗಾರ (Typist-cum-Copyist) – 01 ಹುದ್ದೆ
ಅರ್ಹತೆ: 2nd PUC ತೇರ್ಗಡೆ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: ₹34,100 – ₹67,600/-
3. ಆಜ್ಞಾಪತ್ರ ಜಾರಿಕಾರ (Process Server) – 10 ಹುದ್ದೆಗಳು
ಅರ್ಹತೆ: 10ನೇ ತರಗತಿ (SSLC) ಪಾಸಾಗಿರಬೇಕು ಹಾಗೂ ಕನ್ನಡ ಓದಲು-ಬರೆಯಲು ಬರಬೇಕು.
ವೇತನ ಶ್ರೇಣಿ: ₹31,775 – ₹61,300/-
4. ಸೇವಕರು (Peon / Servant) – 34 ಹುದ್ದೆಗಳು (30 ಹೊಸ ಹುದ್ದೆಗಳು + 4 ಬ್ಯಾಕ್‌ಲಾಗ್)
ಅರ್ಹತೆ: 10ನೇ ತರಗತಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ: ₹27,000 – ₹46,675/-
ವಯೋಮಿತಿ ವಿವರ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ
ಪ್ರವರ್ಗ 2A, 2B, 3A, 3B: ಗರಿಷ್ಠ 38 ವರ್ಷ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1: ಗರಿಷ್ಠ 40 ವರ್ಷ (ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ).
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ: ₹200/-
ಪ್ರವರ್ಗ 2A, 2B, 3A, 3B: ₹100/-
SC, ST, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (ಉಚಿತ).
ಪಾವತಿ ವಿಧಾನ: ಆನ್‌ಲೈನ್ (ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ).
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 30 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026 (ರಾತ್ರಿ 11:59 ರವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 01 ಸೆಪ್ಟೆಂಬರ್ 2026
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಮನಗರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ramanagara.dcourts.gov.in
‘Online Recruitment’ ವಿಭಾಗವನ್ನು ಆಯ್ಕೆ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ ಆನ್‌ಲೈನ್ ಅರ್ಜಿ ಸಬ್ಮಿಟ್ ಮಾಡಿ.
ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತಗೊಂಡು ಇಟ್ಟುಕೊಳ್ಳಿ.
- District Court Typist Jobs
- Karnataka Govt Jobs 2026
- Karnataka Job Alert 2026
- PUC ಸರ್ಕಾರಿ ಉದ್ಯೋಗ
- Ramanagara District Court Recruitment 2026
- Ramanagara eCourt Online Application Link
- Ramanagara eCourt Vacancy 2026
- Ramanagara Peon Servant Recruitment
- SSLC Pass Govt Jobs Karnataka
- SSLC ಸರ್ಕಾರಿ ಕೆಲಸ
- ಕರ್ನಾಟಕ ಸರ್ಕಾರಿ ಕೆಲಸಗಳು 2026
- ಟೈಪಿಸ್ಟ್ ಹುದ್ದೆಗಳ ನೇಮಕಾತಿ
- ರಾಮನಗರ ಇ-ಕೋರ್ಟ್ ಉದ್ಯೋಗಗಳು
- ರಾಮನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
- ರಾಮನಗರ ನ್ಯಾಯಾಲಯ ಅರ್ಜಿ ಲಿಂಕ್
- ಸೇವಕರ ಹುದ್ದೆಗಳು





Leave a comment