ಬೆಂಗಳೂರು: ಕರ್ನಾಟಕ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಅರಣ್ಯ ಇಲಾಖೆಯು (KFD) ಖಾಲಿ ಇರುವ 750 ‘ಫಾರೆಸ್ಟ್ ಅಬ್ಸರ್ವರ್’ (ಅರಣ್ಯ ವೀಕ್ಷಕರು – Group D) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ (KFD)
ಹುದ್ದೆಯ ಹೆಸರು: ಫಾರೆಸ್ಟ್ ಅಬ್ಸರ್ವರ್ / ಅರಣ್ಯ ವೀಕ್ಷಕರು
ಮೊತ್ತ ಹುದ್ದೆಗಳು: 750
ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ (13 ಅರಣ್ಯ ವೃತ್ತಗಳು)
ವೃತ್ತವಾರು ಖಾಲಿ ಹುದ್ದೆಗಳ ಪಟ್ಟಿ:
ಚಾಮರಾಜನಗರ – 169, ಮೈಸೂರು – 120, ಬೆಂಗಳೂರು – 70, ಬಳ್ಳಾರಿ – 62, ಕೆನರಾ (ಉತ್ತರ ಕನ್ನಡ) – 60, ಚಿಕ್ಕಬಳ್ಳಾಪುರ – 56, ಮಂಗಳೂರು – 54, ಬೆಳಗಾವಿ – 42, ಶಿವಮೊಗ್ಗ – 38, ಕೊಡಗು – 32, ಹಾಸನ – 30, ಧಾರವಾಡ – 12, ಹಾಗೂ ಕಲ್ಬುರ್ಗಿ – 04.
ಶೈಕ್ಷಣಿಕ ಅರ್ಹತೆ & ವಯೋಮಿತಿ:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು.
ವಯೋಮಿತಿ: ಸಾಮಾನ್ಯ ವರ್ಗಕ್ಕೆ 18 ರಿಂದ 30 ವರ್ಷ. ಹಿಂದುಳಿದ ವರ್ಗಗಳಿಗೆ (2A/2B/3A/3B) 33 ವರ್ಷ ಹಾಗೂ SC/ST/Cat-1 ಅಭ್ಯರ್ಥಿಗಳಿಗೆ 35 ವರ್ಷದವರೆಗೆ ವಯೋಮಿತಿ ಸಡಲಿಿಕೆ ಇರಲಿದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಇರುವುದಿಲ್ಲ. SSLC ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ದೈಹಿಕ ಪರೀಕ್ಷೆ (Physical Test) ಮತ್ತು ವೈದ್ಯಕೀಯ ಪರೀಕ್ಷೆ (Medical Test) ನಡೆಸಿ ಆಯ್ಕೆ ಮಾಡಲಾಗುತ್ತದೆ.
ಮುಖ್ಯ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 01 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026
ಅಧಿಕೃತ ವೆಬ್‌ಸೈಟ್: aranya.gov.in
- 10th ಪಾಸಾದವರಿಗೆ ಸರ್ಕಾರಿ ಕೆಲಸ
- 750 Forest Watcher Vacancies
- aranya.gov.in recruitment
- aranya.gov.in ಆನ್‌ಲೈನ್ ಅರ್ಜಿ
- Forest Observer Selection Process
- Karnataka Forest Department Forest Observer Recruitment
- Karnataka Govt Jobs 2026
- KFD Online Application 2026
- KFD Recruitment 2026
- SSLC Pass Govt Jobs Karnataka
- ಅರಣ್ಯ ವೀಕ್ಷಕರ ನೇಮಕಾತಿ
- ಎಸ್ಎಸ್ಎಲ್ಸಿ ಮೆರಿಟ್ ನೇಮಕಾತಿ
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026
- ಕರ್ನಾಟಕ ಸರ್ಕಾರಿ ಉದ್ಯೋಗ 2026
- ಕೆಎಫ್ಡಿ ಫಾರೆಸ್ಟ್ ಅಬ್ಸರ್ವರ್ ಹುದ್ದೆಗಳು





Leave a comment