ದಾವಣಗೆರೆ: ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಡ್ಯಾಂಗೆ (Bhadra Reservoir) ನೀರಿನ ಒಳಹರಿವು ಮುಂದುವರಿದಿದೆ. ಜುಲೈ 24, 2026ರ ಬೆಳಿಗ್ಗೆ 6.00 ಗಂಟೆಯ ವರದಿಯಂತೆ ಜಲಾಶಯದ ನೀರಿನ ಮಟ್ಟ 151.5 ಅಡಿ ತಲುಪಿದೆ.
ಜಲಾಶಯದ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹ ವಿವರ:
ಗರಿಷ್ಠ ಮಟ್ಟ (FRL): 186.00 ಅಡಿಗಳು (2158.0 MSL)
ಪ್ರಸ್ತುತ ನೀರಿನ ಮಟ್ಟ: 151’5″ ಅಡಿಗಳು (2123.41 MSL)
ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
ಇಂದಿನ ನೀರು ಸಂಗ್ರಹ: 35.438 TMC
ಇಂದಿನ ಒಳಹರಿವು (Inflow): 5,661 ಕ್ಯೂಸೆಕ್ಸ್
ಇಂದಿನ ಒಟ್ಟು ಹೊರಹರಿವು (Outflow): 175 ಕ್ಯೂಸೆಕ್ಸ್
ಹೊರಹರಿವಿನ ವಿವರ (Outflow Breakup):
ಬಲದಂಡೆ ನಾಲೆ (RBC): 0 ಕ್ಯೂಸೆಕ್ಸ್
ಎಡದಂಡೆ ನಾಲೆ (LBC): 50 ಕ್ಯೂಸೆಕ್ಸ್
ರಿವರ್ ಸ್ಲೂಸ್ (River Sluice): 50 ಕ್ಯೂಸೆಕ್ಸ್
ಆವಿ ಪ್ರಮಾಣ (Evaporation): 75 ಕ್ಯೂಸೆಕ್ಸ್
ಕಳೆದ ವರ್ಷದ ಸ್ಥಿತಿಗೆ ಹೋಲಿಕೆ (24.07.2025):
ಕಳೆದ ವರ್ಷ ಇದೇ ದಿನಾಂಕಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಿದೆ.
ಕಳೆದ ವರ್ಷದ ನೀರಿನ ಮಟ್ಟ: 179’8″ ಅಡಿಗಳು
ಕಳೆದ ವರ್ಷದ ನೀರು ಸಂಗ್ರಹ: 63.587 TMC
ಕಳೆದ ವರ್ಷದ ಒಳಹರಿವು: 10,731 ಕ್ಯೂಸೆಕ್ಸ್
ಕಳೆದ ವರ್ಷದ ಹೊರಹರಿವು: 8,451 ಕ್ಯೂಸೆಕ್ಸ್
ಗುರುವಾರಕ್ಕೆ ಹೋಲಿಸಿದರೆ ಇಂದು ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೂ 34.5 ಅಡಿ ನೀರು ಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ತುಂಬಾನೇ ಕಡಿಮೆ ಇದೆ.
ಭದ್ರಾ ಜಲಾನಯನ ಪ್ರದೇಶ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿ ಬೊಬ್ಬಿರಿದರೆ ಮಾತ್ರ ಭದ್ರಾ ಡ್ಯಾಂ ತುಂಬಲಿದೆ. ಇಲ್ಲದಿದ್ದರೆ ಕಷ್ಟವಾಗಲಿದೆ. ಭದ್ರಾ ಡ್ಯಾಂ ನೀರು ನೆಚ್ಚಿಕೊಂಡು ಬೆಳೆ ಬೆಳೆಯುವ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ. ವರುಣನ ಕೃಪೆಗೆ ರೈತರು ಪ್ರಾರ್ಥಿಸತೊಡಗಿದ್ದಾರೆ.
- Bhadra Dam inflow outflow July 24 2026
- Bhadra Dam storage TMC
- Bhadra Dam water report
- Bhadra Reservoir water level today
- Karnataka reservoir water levels 2026
- Lakkavalli Bhadra Dam capacity
- ಕರ್ನಾಟಕ ಜಲಾಶಯಗಳ ನೀರಿನ ಮಟ್ಟ
- ಭದ್ರಾ ಜಲಾಶಯ ನೀರು ಸಂಗ್ರಹ
- ಭದ್ರಾ ಜಲಾಶಯದ ನೀರಿನ ಮಟ್ಟ
- ಭದ್ರಾ ಡ್ಯಾಮ್ ಇಂದಿನ ನೀರಿನ ಮಟ್ಟ ಜುಲೈ 24
- ಭದ್ರಾ ನದಿ ನೀರು
- ಲಕ್ಕವಳ್ಳಿ ಭದ್ರಾ ಡ್ಯಾಂ ಒಳಹರಿವು





Leave a comment