ದಾವಣಗೆರೆ: ಕೇಂದ್ರ ಚುನಾವಣಾ ಆಯೋಗವು ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದು, ಇಂಥ ವೇಳೆಯಲ್ಲಿ ಕಾರ್ಯಕರ್ತರು, ಮುಖಂಡರ ಗಮನಕ್ಕೆ ಬಾರದೇ ಏಕಾಏಕಿಯಾಗಿ ದಾವಣಗೆರೆ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೂತನ ಪಟ್ಟಿ ಘೋಷಿಸಿರುವುದು ಸರಿಯಲ್ಲ. ಈಗಾಗಲೇ ಬಿಜೆಪಿ ಪಕ್ಷದ ಕಾರ್ಯಸೂಚನೆಯಂತೆ ಮತ ಪರಿಷ್ಕರಣೆ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿರುವ ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿರುವ ಔಚಿತ್ಯವೇನು? ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.
ನೂತನ ಪದಾಧಿಕಾರಿಗಳ ನೇಮಕದ ಬಗ್ಗೆ ಕೂಲಕಂಷವಾಗಿ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಹಿರಿಯ ಮುಖಂಡರ ಸಮ್ಮುಖದಲ್ಲಿ ಬದಲಾವಣೆ ನಡೆದಿದ್ದರೆ ಸರಿಯಿತ್ತು. ಆದರೆ ಕಾರ್ಯಕರ್ತರ ಈ ಪಕ್ಷ ಯಾವ ದಿಕ್ಕಿನತ್ತ ತೆಗೆದಕೊಂಡುತ್ತಿದ್ದೀರೋ ತಿಳಿಯದಂತಾಗಿದೆ. ಈ ಹಿಂದೆ ಇದ್ದ ಜಿಲ್ಲಾಧ್ಯಕ್ಷರು ಹಾಗೂ ಹಾಲಿ ಜಿಲ್ಲಾ ಪದಾಧಿಕಾರಿಗಳ ಗಮನಕ್ಕೂ ಬಾರದೇ ತರಾತುರಿಯಲ್ಲಿ ಪಟ್ಟಿ ಬಿಡುಗಡೆ ಮಾಡಿರುವುದನ್ನು ಗಮನಿಸಿದರೆ ಇದರಲ್ಲಿ ಕಾಣದ ಕೈಗಳ ಪ್ರಭಾವಕ್ಕೆ ಒಳಗಾಗಿ ಪಕ್ಷವನ್ನೇ ಮುಳುಗಿಸುವ ಹುನ್ನಾರ ನಡೆದಿದೆಯೇನೋ ಎಂದೆನಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಏಕಪಕ್ಷೀಯ ನಿರ್ಧಾರ ಪಕ್ಷ ನಿಷ್ಠರಾದ ನಮಗೆ ಅತೀವ ನೋವುಂಟಾಗಿದೆ. ಈ ಪ್ರಕ್ರಿಯೆಯು ಎಸ್ಐಆರ್ ನಂತರದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ನಡೆದಿದ್ದರೆ ಯಾವ ಆಕ್ಷೇಪಣೆಯೂ ಇರುತ್ತಿರಲಿಲ್ಲ. ಆದ್ದರಿಂದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ, ಎಸ್ಐಆರ್ ನಡೆಯುತ್ತಿರುವ ಸಂದರ್ಭದಲ್ಲಿ ನೇಮಕ ಮಾಡಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ರಾಜ್ಯಾಧ್ಯಕ್ಷರು ತಿಳಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಪಕ್ಷಕ್ಕೆ ಆಗಿರುವ ಹಾಗೂ ಮುಂದೆ ಆಗಲಿರುವ ಅನಾಹುತಕ್ಕೆ ಎಡೆಮಾಡಿಕೊಡದೇ ಮುಂದಿನ ಎಲ್ಲಾ ಕಾರ್ಯಕರ್ತರ ಚುನಾವಣೆಗೆ ತೊಂದರೆಯಾಗದ ರೀತಿಯಲ್ಲಿ ಸದೃಢ ಪಕ್ಷಕ್ಕೆ ಸದೃಢವಾಗುವ ರೀತಿಯಲ್ಲಿ ನಿಲುವು ತೆಗೆದುಕೊಂಡು ನಿರ್ಣಯ ಕೈಗೊಳ್ಳಬೇಕು ಎಂದು ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿರುವ ಮುಖಂಡರು, ಎಸ್ ಐಆರ್ ನೆಪವಾಗಿಟ್ಟುಕೊಂಡು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆಗಳನ್ನು ಸಿಎಂ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದೂಡುತ್ತಿದೆ. ಕಾರ್ಯಕರ್ತರ ಬಲಿಷ್ಠ ಸೈನ್ಯ ಹೊಂದಿರುವ ಬಿಜೆಪಿಯು ಸಜ್ಜಾಗಬೇಕು. ಇಂಥ ಹೊತ್ತಿನಲ್ಲಿ ಗೊಂದಲಕ್ಕೆ ಎಡೆಮಾಡಿಕೊಡದೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಮುಖಂಡರು ಹಾಗೂ ಬಿಜೆಪಿ ನಾಯಕ ಬಿ. ಎಂ. ಷಣ್ಮುಖಯ್ಯ ಆವರಗೊಳ್ಳ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಹಾಗೂ ಪಾಲಿಕೆ ಮಾಜಿ ಸದಸ್ಯ ಎಂ. ಪಿ. ಕೃಷ್ಣಮೂರ್ತಿ ಪವಾರ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಕೆ ಮಾಜಿ ಸದಸ್ಯ ಹೆಚ್. ಎಸ್. ಲಿಂಗರಾಜ್, ಬಿಜೆಪಿಯ ಮಾಜಿ ಕಾರ್ಯಾಲಯ ಕಾರ್ಯದರ್ಶಿ ಗೌಳಿ ಲಿಂಗರಾಜ್, ಬಿಜೆಪಿ ಮುಖಂಡರಾದ ಕೆ. ಶಿವಶಂಕರಪ್ಪ. ರಾಮಚಂದ್ರ ವದೋನಿ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
- BJP State President
- BM Shanmukhayya
- DAVANAGERE BJP
- District Office Bearers List
- Internal Dissension
- Karnataka Local Body Elections
- MP Krishnamurthy Pawar
- One-Sided Decision
- Party Rift
- Voter List Revision
- ಆಂತರಿಕ ಅಸಮಾಧಾನ
- ಎಂ ಪಿ ಕೃಷ್ಣಮೂರ್ತಿ ಪವಾರ್
- ಏಕಪಕ್ಷೀಯ ನಿರ್ಧಾರ
- ಜಿಲ್ಲಾ ಪದಾಧಿಕಾರಿಗಳ ಪಟ್ಟಿ
- ದಾವಣಗೆರೆ ಬಿಜೆಪಿ
- ಪಕ್ಷದ ಭಿನ್ನಮತ
- ಬಿ ಎಂ ಷಣ್ಮುಖಯ್ಯ
- ಬಿಜೆಪಿ ರಾಜ್ಯಾಧ್ಯಕ್ಷರು
- ಮತದಾರರ ಪಟ್ಟಿ ಪರಿಷ್ಕರಣೆ
- ಸ್ಥಳೀಯ ಸಂಸ್ಥೆಗಳ ಚುನಾವಣೆ





Leave a comment