Home ದಾವಣಗೆರೆ ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿ!

Share
ನಮಾಜ್
Share

ನವದೆಹಲಿ: ಉತ್ತರ ಪ್ರದೇಶದ ಮೂಲದ ಮೌಲ್ವಿ ಮೌಲಾನಾ ಜರ್ಜಿಸ್ ಅನ್ಸಾರಿ ಎಂಬಾತ ಶ್ರೀಕೃಷ್ಣ ಮುಸ್ಲಿಂ ಆಗಿದ್ದ ಮತ್ತು ಆತ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ ಎಂದು ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಮೌಲ್ವಿಯನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿವೆ.

ಜೂನ್ 23 ರಂದು ಜಾರ್ಖಂಡ್‌ನಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಮೌಲ್ವಿ ಈ ಭಾಷಣ ಮಾಡಿದ್ದು, ಸದ್ಯ ಕೃಷ್ಣ ಜನ್ಮಭೂಮಿ ವಿವಾದದ ನಡುವೆ ಈ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ.

ಭಗವದ್ಗೀತೆ ಶ್ಲೋಕವನ್ನು ತಿರುಚಿದ ಮೌಲ್ವಿ:

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮೌಲ್ವಿ ಜರ್ಜಿಸ್ ಅನ್ಸಾರಿ ಭಗವದ್ಗೀತೆಯ 6ನೇ ಅಧ್ಯಾಯದ 10ನೇ ಶ್ಲೋಕವನ್ನು (“ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ…”) ಉಲ್ಲೇಖಿಸಿದ್ದಾನೆ. “ಹಿಂದೂ ಸಹೋದರರು ಬೇಸರ ಮಾಡಿಕೊಳ್ಳದಿದ್ದರೆ ಒಂದು ಮಾತು ಹೇಳುತ್ತೇನೆ, ಶ್ರೀಕೃಷ್ಣ ಕೂಡ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ. ನಂಬಿಕೆಯಿಲ್ಲದಿದ್ದರೆ ಭಗವದ್ಗೀತೆಯ ಈ ಶ್ಲೋಕ ನೋಡಿ” ಎಂದು ಹೇಳಿ ತಪ್ಪು ವ್ಯಾಖ್ಯಾನ ನೀಡಿದ್ದಾನೆ. ಇಷ್ಟೇ ಅಲ್ಲದೆ, ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರೂ ಇಸ್ಲಾಂ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ್ದರು ಎಂದು ಪ್ರತಿಪಾದಿಸಿದ್ದಾನೆ.

ನೈಜ ಅರ್ಥವೇನು?:

ಆದರೆ, ಭಗವದ್ಗೀತೆಯ ಈ ಶ್ಲೋಕಕ್ಕೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ. ಇದರ ನೈಜ ಅರ್ಥ: “ಧ್ಯಾನ ಮಾಡುವ ಯೋಗಿಯು ಏಕಾಂತದಲ್ಲಿ ಕುಳಿತು, ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು, ಯಾವುದೇ ಆಸೆ ಅಥವಾ ಮೋಹವಿಲ್ಲದೆ ನಿರಂತರವಾಗಿ ಆತ್ಮಚಿಂತನೆಯಲ್ಲಿ ತೊಡಗಿರಬೇಕು” ಎಂಬುದಾಗಿದೆ.

ಹಲವು ವಿವಾದಗಳ ಹಿನ್ನೆಲೆ:

ಈ ಮೌಲ್ವಿ ಜರ್ಜಿಸ್ ಅನ್ಸಾರಿ ಈ ಹಿಂದೆಯೂ ಇಂತಹದ್ದೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದನು. 2022 ರಲ್ಲಿ ಮಹಿಳೆಯರ ಕುರಿತು ಅತ್ಯಂತ ಅಸಭ್ಯ ಹೇಳಿಕೆ ನೀಡಿ ಸುದ್ದಿಯಾಗಿದ್ದನು. ಅಷ್ಟೇ ಅಲ್ಲದೆ, 2016 ರ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 2022 ರ ಸೆಪ್ಟೆಂಬರ್‌ನಲ್ಲಿ ವಾರಣಾಸಿಯ ನ್ಯಾಯಾಲಯವು ಈತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸದ್ಯ ಈತನ ಹಳೆಯ ವಿಡಿಯೋ ಭಾರಿ ಕಿಡಿ ಹೊತ್ತಿಸಿದೆ.

Share

Leave a comment

Leave a Reply

Your email address will not be published. Required fields are marked *