ದಾವಣಗೆರೆ: ವಿಶ್ವ ಕೌಶಲ್ಯ ದಿನದ ಅಂಗವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜುಲೈ 15 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ (DC Office) ಆವರಣದಲ್ಲಿರುವ ಉದ್ಯೋಗ ವಿನಿಮಯ ಕೇಂದ್ರದ ಕೊಠಡಿ ಸಂಖ್ಯೆ-51 ರಲ್ಲಿ ಈ ಮೇಳ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ಪ್ರಮುಖ ಖಾಸಗಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿವೆ. SSLC, ಐ.ಟಿ.ಐ, ಡಿಪ್ಲೋಮಾ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ (PG) ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಮೇಳದ ಸದುಪಯೋಗ ಪಡಿಸಿಕೊಳ್ಳಬಹುದು.
ಭಾಗವಹಿಸಲು ಬೇಕಾಗುವ ದಾಖಲೆಗಳು: ಆಸಕ್ತ ಅಭ್ಯರ್ಥಿಗಳು ಕನಿಷ್ಠ 5 ಬಯೋಡಾಟಾ (Resume) ಪ್ರತಿಗಳು ಮತ್ತು ಆಧಾರ್ ಕಾರ್ಡ್‌ನೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕಾಗಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8105122556 (ಜಿಲ್ಲಾ ಉದ್ಯೋಗಾಧಿಕಾರಿಗಳು).
- Davanagere Job Fair 2026
- Davanagere Job Mela Address Contact Number
- District Employment Exchange Davanagere
- Jobs for SSLC ITI Diploma Degree in Karnataka
- Private Company Jobs in Davanagere
- World Youth Skills Day Job Fair
- ಉದ್ಯೋಗಾವಕಾಶ 2026
- ಖಾಸಗಿ ಕಂಪನಿ ಉದ್ಯೋಗಗಳು
- ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ
- ದಾವಣಗೆರೆ ಉದ್ಯೋಗ ಮೇಳ 2026
- ದಾವಣಗೆರೆಯಲ್ಲಿ ಕೆಲಸಗಳು
- ವಿಶ್ವ ಕೌಶಲ್ಯ ದಿನದ ಉದ್ಯೋಗ ಮೇಳ





Leave a comment