ದಾವಣಗೆರೆ: ನಗರದ ನಿಟುವಳ್ಳಿಯ ದುರ್ಗಾಂಬಿಕಾ ಹೈಸ್ಕೂಲ್ ಸಮೀಪದ ಪವರ್ ಫಿಟ್ನೆಸ್ ಜಿಮ್ ನಲ್ಲಿ ಹಿಂದೂ ಯುವತಿಯರು, ಮಹಿಳೆಯರ ಜೊತೆ ರಾಸಲೀಲೆ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಜಿಮ್ ಮಾಲೀಕ ಅಂಡ್ ಟ್ರೈನರ್ ಇಸ್ಮಾಯಿಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಫಿಟ್ನೆಸ್ ಗಾಗಿ ಜಿಮ್ ಗೆ ಬರುವ ಮಹಿಳೆಯರ ಸುರಕ್ಷತೆಗೆ ಮಹಿಳಾ ಟ್ರೈನರ್ ಕಡ್ಡಾಯಗೊಳಿಸಬೇಕು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡ ಸತೀಶ್ ಪೂಜಾರಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಮಾಯಿಲ್ ನಂಥ ವಿಕೃತಿಗಳ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಮನೆತನದವರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಈತನ ಕೃತ್ಯ ಕೇಳಿದರೆ ಬೆಚ್ಚಿ ಬೀಳುವಂತಿದೆ. ಹಾಗಾಗಿ, ಪ್ರತಿ ಜಿಮ್ ಗಳಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳಾ ತರಬೇತುದಾರರ ನೇಮಕ ಮಾಡಿಕೊಳ್ಳಬೇಕು. ಸರ್ಟಿಫಿಕೆಟ್ ಇಲ್ಲದವರ ಜಿಮ್ ಗಳಿಗೆ ಬೀಗ ಜಡಿಯಬೇಕು ಎಂದು ಒತ್ತಾಯಿಸಿದರು.
ಜಿಮ್ ಜಿಹಾದಿಗಳಿಗೆ ಭಯವೇ ಇಲ್ಲ:
ದಾವಣಗೆರೆಯಲ್ಲಿ ಜಿಮ್ ಜಿಹಾದಿಗಳಿಗೆ ಭಯವೇ ಇಲ್ಲದಂತಾಗಿದೆ. ಮಣಿ ಸರ್ಕಾರ್ ಮಾತನಾಡಿ ಇಂತಹ ವಿಕೃತ ಕೃತ್ಯಗಳಿಂದ ನಗರದಲ್ಲಿ ಸೌಹಾರ್ದತೆ ಮತ್ತು ಕೋಮು ಸಹವರ್ಧನೆಗೆ ಧಕ್ಕೆ ಬರುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ನಗರದ ಎಲ್ಲಾ ಜಿಮ್ ಮಾಲೀಕರ ಸಭೆ ಕರೆಯಬೇಕು. ಪ್ರತಿ ಜಿಮ್‌ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಟ್ರೈನರ್ (ತರಬೇತುದಾರರನ್ನು) ಕಡ್ಡಾಯಗೊಳಿಸಬೇಕು ಅವರಿಗೆ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಕಡ್ಡಾಯ ಮಾಡಬೇಕು. ಇಂತಹ ಕೃತ್ಯ ಎಸಗುವ ಮಾಲೀಕರು ಮತ್ತು ಟ್ರೈನರ್‌ಗಳನ್ನು ತಕ್ಷಣವೇ ಜಿಮ್‌ಗಳಿಂದ ದೂರವಿಟ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕೋಮು ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಕೋಲಾರ, ಮಂಗಳೂರು ಸೇರಿದಂತೆ ಹಲವೆಡೆ ಜಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಹುಬ್ಬಳ್ಳಿ -ಧಾರವಾಡದಲ್ಲಿಯೂ ಇಂಥ ಘಟನೆ ನಡೆದಿವೆ. ಇಲ್ಲಿ ಜಿಮ್ ನಲ್ಲಿ ಹಿಂದೂ ಮಹಿಳೆಯರು
ಮತ್ತು ಯುವತಿಯರ ಟಾರ್ಗೆಟ್ ಮಾಡಿ ಲವ್ ಜಿಹಾದ್ ನಡೆಸಲು ಮುಂದಾದವನಿಗೆ ತಕ್ಕ ಪಾಠ ಕಲಿಸಲಾಗಿದೆ. ಜಿಮ್ ಗೆ ನುಗ್ಗಿ ಕಾಮುಕನಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಸತೀಶ್ ಪೂಜಾರಿ ಮಾತನಾಡಿ, ದಾವಣಗೆರೆಯಲ್ಲಿ ಲೋಕಸಭಾ ಸದಸ್ಯರು ಮಹಿಳೆಯರು. ಮಹಿಳೆಯರ ಘನತೆ, ಹಿತ ಕಾಪಾಡುವ ಸಲುವಾಗಿ ಜಿಮ್ ಜಿಹಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೋಮುಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿರುವ ಇಸ್ಮಾಯಿಲ್ ನಂಥವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಹಿಂದೂ ಪರ ಸಂಘಟನೆಗಳ ಮೇಲೆ ವಿನಾಕಾರಣ ಕೇಸ್ ದಾಖಲಿಸುವ ಕಾಂಗ್ರೆಸ್ ಸರ್ಕಾರವು ಇಂಥ ಜಿಹಾದಿಗಳ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಆರೋಪಿ ಇಸ್ಮಾಯಿಲ್ ಹಿಂದೂ ಮಹಿಳೆಯರು ಮತ್ತು ಯುವತಿಯರ ಜೊತೆ ಪ್ರೀತಿ ನಾಟಕವಾಡಿದ್ದಾನೆ. ಹಿಂದೂ ದೇವರ ದಾರ, ಕೊರಳಲ್ಲಿ ಸರ ಸೇರಿದಂತೆ ಹಿಂದೂನಂತೆ ನಟಿಸಿ ಈ ಕೃತ್ಯ ಎಸಗಿದ್ದಾನೆ. ಪ್ರತಿ ಜಿಮ್ ನಲ್ಲಿಯೂ ಮಹಿಳಾ ಟ್ರೈನರ್ ಗಳ ನೇಮಿಸಬೇಕು.ಪೋಷಕರು ಹಾಗೂ ಜಿಮ್ ಗಳಿಗೆ ಕಳುಹಿಸುವ ಗಂಡಂದಿರು, ತಂದೆ ತಾಯಂದಿರು ಅಲ್ಲಿಗೆ ಭೇಟಿ ನೀಡಿ ನಿಗಾ ವಹಿಸಬೇಕು. ಇಲ್ಲದಿದ್ದರೆ ಜಿಹಾದಿಗಳಿಗೆ ಕಡಿವಾಣ ಹಾಕುವುದು ಕಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಶ್ರೀರಾಮಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ವಕ್ತಾರ ಆಲೂರು ರಾಜಶೇಖರ್, ಜಿಲ್ಲಾ ಉಸ್ತುವಾರಿ ಶ್ರೀಧರ್ ಕಮ್ಮಾಸ್, ಮಾಧ್ಯಮ ಪ್ರಮುಖ್ ವಿನೋದ್ ರಾಜ್,
ಜಿಲ್ಲಾ ಖಜಾಂಚಿ ಶಿವಕುಮಾರ್ ಪೂಜಾರ್, ನಗರ ಉಪಾಧ್ಯಕ್ಷ ವಿನೋದ್ ರಾಜ್, ಉತ್ತರ ಅಧ್ಯಕ್ಷ ಮಧು, ದಕ್ಷಿಣ ಅಧ್ಯಕ್ಷ ಮಂಜುನಾಥ್, ರಾಘು, ಪಳನಿ, ಯಶವಂತ್, ಅವಿನಾಶ್, ಶ್ರೀಕಾಂತ್, ಶಶಿ, ಸುನೀಲ್, ರುದ್ರೇಶ್, ಚಂದ್ರು, ಅರುಣ್ ಮತ್ತಿತರರು ಹಾಜರಿದ್ದರು.
- Davanagere crime news
- Davanagere Gym Controversy
- Gym Jihad Row Karnataka
- Mandatory Female Gym Trainers
- Mani Sarkar Sriramasene
- Power Fitness Gym Ismail
- Satish Poojari VHP
- Women Safety in Gym
- ಜಿಮ್ ಜಿಹಾದ್ ಆಕ್ರೋಶ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಜಿಮ್ ವಿವಾದ
- ಪವರ್ ಫಿಟ್ನೆಸ್ ಜಿಮ್ ಇಸ್ಮಾಯಿಲ್
- ಮಣಿ ಸರ್ಕಾರ್ ಶ್ರೀರಾಮಸೇನೆ
- ಮಹಿಳಾ ಟ್ರೈನರ್ ಕಡ್ಡಾಯ
- ಮಹಿಳಾ ಸುರಕ್ಷತೆ
- ಸತೀಶ್ ಪೂಜಾರಿ ವಿಎಚ್ಪಿ





Leave a comment