ಮುಂಬೈ:ಚರ್ಮದ ಬಣ್ಣವನ್ನು ಬಿಳಿಯಾಗಿಸುವ ಭರವಸೆ ನೀಡುತ್ತಿದ್ದ ಪಾಕಿಸ್ತಾನ ಮೂಲದ ‘ಗೋರಿ ಬ್ಯೂಟಿ ಕ್ರೀಮ್’ (Goree Beauty Cream) ಮಾರಾಟ ಮತ್ತು ವಿತರಣೆಯನ್ನು ಮಹಾರಾಷ್ಟ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕ್ರೀಮ್‌ನಲ್ಲಿ ಅತ್ಯಂತ ಅಪಾಯಕಾರಿ ಮಟ್ಟದ ವಿಷಕಾರಿ ಪಾದರಸ (Mercury) ಪತ್ತೆಯಾಗಿದ್ದು, ಇದರ ಬಳಕೆಯಿಂದ ಹಲವರು ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ. ಘಟನೆಯ ವಿವರ:ಮಹಾರಾಷ್ಟ್ರದ ನಾಗ್ಪುರದಲ್ಲಿ ಕ್ರೀಮ್ ಬಳಸುತ್ತಿದ್ದ ಕೆಲವು ಮಹಿಳೆಯರಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಂಡ ಬೆನ್ನಲ್ಲೇ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ತನಿಖೆ ಕೈಗೊಂಡಿತ್ತು.
ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಈ ಕ್ರೀಮ್ ಖರೀದಿಸಿ ಸತತ 2 ವರ್ಷಗಳಿಂದ ಬಳಸುತ್ತಿದ್ದ ಗ್ರಾಹಕರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಲ್ಯಾಬ್ ಪರೀಕ್ಷೆಯಲ್ಲಿ ಈ ಉತ್ಪನ್ನದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ. ಅಲ್ಲದೆ, ಪ್ಯಾಕೆಟ್ ಮೇಲೆ ಯಾವುದೇ ‘ಎಕ್ಸ್‌ಪೈರಿ ಡೇಟ್’ (Expiry Date) ಅಥವಾ ಬ್ಯಾಚ್ ನಂಬರ್ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಸದ್ಯ ರಾಜ್ಯಾದ್ಯಂತ ಈ ಕ್ರೀಮ್ ವಶಪಡಿಸಿಕೊಳ್ಳಲು ಎಫ್‌ಡಿಎ ದಾಳಿ ನಡೆಸುತ್ತಿದ್ದು, ಆನ್‌ಲೈನ್‌ನಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ





Leave a comment