ಲಾಹೋರ್: ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಮೊಮ್ಮಗ ಮೊಹಮ್ಮದ್ ರಜಾ ದಾರ್, ಇಬ್ಬರು ವಿದೇಶಿ ಮಹಿಳೆಯರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಹಾಗೂ ಸುಲಿಗೆ ಮಾಡಿದ ಆರೋಪದ ಮೇಲೆ ಲಾಹೋರ್‌ನಲ್ಲಿ ಬಂಧನಕ್ಕೊಳಗಾಗಿದ್ದಾನೆ. ಈ ಹೈಪ್ರೊಫೈಲ್ ಪ್ರಕರಣವೀಗ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಪ್ರಕರಣದ ಹಿನ್ನೆಲೆ ಏನು?
ನೆದರ್ಲ್ಯಾಂಡ್ಸ್ ಮತ್ತು ವೆನೆಜುವೆಲಾ ದೇಶದ ಇಬ್ಬರು ಮಹಿಳೆಯರು ಜೂನ್ 29 ರಂದು ಪಾಕಿಸ್ತಾನದ ಲಾಹೋರ್‌ಗೆ ಆಗಮಿಸಿದ್ದರು. ಇವರು ಮುಖ್ಯ ಆರೋಪಿ ರಜಾ ದಾರ್‌ನನ್ನು 2025 ರಲ್ಲಿ ಸಿಂಗಾಪುರದಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ. ಇವರೆಲ್ಲರೂ ಸುಮಾರು 1.5 ಮಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ (Cryptocurrency) ಉದ್ಯಮದಲ್ಲಿ ಪಾಲುದಾರರಾಗಿದ್ದರು. ಉದ್ಯಮದ ನೆಪದಲ್ಲೇ ಆರೋಪಿ ರಜಾ ದಾರ್ ಇವರಿಗೆ ಬಿಸಿನೆಸ್ ವೀಸಾ ಕೊಡಿಸಿ ಪಾಕಿಸ್ತಾನಕ್ಕೆ ಕರೆಸಿಕೊಂಡಿದ್ದನು.
ಮಹಿಳೆಯರು ಲಾಹೋರ್ ತಲುಪುತ್ತಿದ್ದಂತೆ ರಜಾ ದಾರ್ ಮತ್ತು ಆತನ ಸಹಚರರು ಇವರನ್ನು ಅಪಹರಿಸಿ, ರೂಮೊಂದರಲ್ಲಿ ಕೂಡಿಹಾಕಿದ್ದಾರೆ. ಗನ್ ತೋರಿಸಿ ಬೆದರಿಸಿ, ಅವರ ಕ್ರಿಪ್ಟೋ ವ್ಯಾಲೆಟ್‌ಗಳ ಪಾಸ್‌ವರ್ಡ್ ನೀಡುವಂತೆ ಪೀಡಿಸಿದ್ದಾರೆ. ಮಹಿಳೆಯರು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿ, ಗ್ಯಾಂಗ್‌ರೇಪ್ ಎಸಗಿದ್ದಾರೆ. ಅಲ್ಲದೆ ಬಿಡುಗಡೆಗಾಗಿ 1 ಲಕ್ಷ ಯುಎಸ್ ಡಾಲರ್ (ಸುಮಾರು 83 ಲಕ್ಷ ರೂ.) ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಮ್ಯಾಜಿಸ್ಟ್ರೇಟ್ ಮುಂದೆ ನ್ಯಾಯಾಂಗ ಹೇಳಿಕೆ ನೀಡಿದ್ದಾರೆ.
ಸ್ಪೇನ್‌ನಿಂದ ಬಂದ ಕರೆ, ಪೊಲೀಸರ ದಾಳಿ:
ಸಂತ್ರಸ್ತ ಮಹಿಳೆಯೊಬ್ಬರ ತಂದೆ ಸ್ಪೇನ್‌ನಿಂದ ಪಾಕಿಸ್ತಾನಿ ಅಧಿಕಾರಿಗಳಿಗೆ ತುರ್ತು ಕರೆ ಮಾಡಿ ಮಾಹಿತಿ ನೀಡಿದ ಬಳಿಕ, ವಿದೇಶಿ ರಾಯಭಾರ ಕಚೇರಿಗಳ ಒತ್ತಡಕ್ಕೆ ಮಣಿದು ಲಾಹೋರ್ ಪೊಲೀಸರು ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಪ್ರಮುಖ ಆರೋಪಿ ರಜಾ ದಾರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ನ್ಯಾಯಾಲಯ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಐದನೇ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.
ಉಪ ಪ್ರಧಾನಿ ರಾಜೀನಾಮೆಗೆ ಹೆಚ್ಚಿದ ಒತ್ತಡ:
ಈ ಘಟನೆ ದೇಶಾದ್ಯಂತ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಪ್ರಭಾವಿ ಸೆನೆಟರ್ ಫೈಸಲ್ ವಾವ್ಡಾ ತೀವ್ರ ವಾಗ್ದಾಳಿ ನಡೆಸಿದ್ದು, “ಪಾಕಿಸ್ತಾನವನ್ನು ಒಂದು ಕೌಟುಂಬಿಕ ಕಾರ್ಪೊರೇಷನ್ ತರಹ ನಡೆಸಲಾಗುತ್ತಿದೆ. ಇಷ್ಟೊಂದು ಗಂಭೀರ ಆರೋಪ ಕೇಳಿಬಂದ ಮೇಲೆಯೂ ಇಶಾಕ್ ದಾರ್ ಅವರು ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವರಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಹೇಗೆ ಪ್ರತಿನಿಧಿಸಲು ಸಾಧ್ಯ? ದೇಶದ ಗೌರವ ಉಳಿಸಲು ಅವರು ತಕ್ಷಣ ರಾಜೀನಾಮೆ ನೀಡಬೇಕು,” ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಸರ್ಕಾರ ಮತ್ತು ಪಂಜಾಬ್ ಪ್ರಾಂತ್ಯದ ಆಡಳಿತವು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದು, ರೇಪ್ ಪ್ರಕರಣವನ್ನು ಕೇವಲ ‘ಸುಲಿಗೆ’ (Extortion) ಪ್ರಕರಣವನ್ನಾಗಿ ಬದಲಾಯಿಸಲು ಸಂಚು ರೂಪಿಸುತ್ತಿದೆ ಎಂದು ಸೆನೆಟರ್ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಯರು ತಮ್ಮ ಹೇಳಿಕೆ ದಾಖಲಿಸಿ ತಾಯ್ನಾಡಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
- Crypto Scam Pakistan
- Faisal Vawda
- Foreigners Abducted Lahore
- Grandson Raza Dar Arrested
- Ishaq Dar
- Lahore Gangrape Case
- Lahore Police Arrest.
- Pakistan Deputy PM
- Pakistan News Live
- Pakistan Political Crisis
- Raza Dar Crypto Case
- ಇಂಟರ್ನ್ಯಾಷನಲ್ ನ್ಯೂಸ್.
- ಇಶಾಕ್ ದಾರ್
- ಕ್ರಿಪ್ಟೋ ಉದ್ಯಮ ಪಾಕಿಸ್ತಾನ
- ಪಾಕಿಸ್ತಾನ ಉಪ ಪ್ರಧಾನಿ
- ಪಾಕಿಸ್ತಾನ ರಾಜಕೀಯ ಬಿರುಗಾಳಿ
- ಫೈಸಲ್ ವಾವ್ಡಾ
- ಮೊಮ್ಮಗ ರಜಾ ದಾರ್ ಬಂಧನ
- ಲಾಹೋರ್ ಗ್ಯಾಂಗ್‌ರೇಪ್ ಪ್ರಕರಣ
- ಲಾಹೋರ್ ಪೊಲೀಸ್ ಅರೆಸ್ಟ್
- ವಿದೇಶಿ ಮಹಿಳೆಯರ ಅತ್ಯಾಚಾರ





Leave a comment