Home ಕ್ರೈಂ ನ್ಯೂಸ್ ಹರಿಯಾಣ ಎನ್‌ಕೌಂಟರ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಮೋಸ್ಟ್‌ ವಾಂಟೆಡ್ ಶೂಟರ್‌ಗಳು ಪೊಲೀಸ್ ಗುಂಡಿಗೆ ಬಲಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹರಿಯಾಣ ಎನ್‌ಕೌಂಟರ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಮೋಸ್ಟ್‌ ವಾಂಟೆಡ್ ಶೂಟರ್‌ಗಳು ಪೊಲೀಸ್ ಗುಂಡಿಗೆ ಬಲಿ!

Share
ಲಾರೆನ್ಸ್ ಬಿಷ್ಣೋಯ್
Share

ಬಹದ್ದೂರ್‌ಗಢ್ (ಹರಿಯಾಣ): ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್ ಗ್ಯಾಂಗ್‌ನ ಇಬ್ಬರು ಸಕ್ರಿಯ ಶೂಟರ್‌ಗಳನ್ನು ಹರಿಯಾಣದ ಬಹದ್ದೂರ್‌ಗಢ್‌ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಹತರಾದ ಇಬ್ಬರು ಆರೋಪಿಗಳ ತಲೆಗೆ ತಲಾ 1 ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. ಈ ಗುಂಡಿನ ಚಕಮಕಿಯಲ್ಲಿ ದೆಹಲಿ ಪೊಲೀಸರ ಕಾನ್‌ಸ್ಟೆಬಲ್ ಒಬ್ಬರಿಗೂ ಗಾಯಗಳಾಗಿವೆ.

ಜಿಮ್ ಮಾಲೀಕನ ಹತ್ಯೆ ಮಾಡಿದ್ದ ಹಂತಕರು:

ಹತರಾದ ಶೂಟರ್‌ಗಳನ್ನು ಹಿಸಾರ್ ಮೂಲದ ಪ್ರವೇಶ್ ಮತ್ತು ಹಿಮಾಂಶು ಎಂದು ಗುರುತಿಸಲಾಗಿದೆ. ಕಳೆದ ಜೂನ್ 11 ರಂದು ಹನ್ಸಿಯಲ್ಲಿ ನಡೆದ ಜಿಮ್ ಮಾಲೀಕ ಕಪಿಲ್ ಎಂಬಾತನ ಹಗಲು ದರೋಡೆ ಮಾದರಿಯ ಸನ್ಸೇಷನಲ್ ಕೊಲೆ ಪ್ರಕರಣದಲ್ಲಿ ಇವರಿಬ್ಬರು ಭಾಗಿಯಾಗಿದ್ದರು. ಈ ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಅಂದಿನಿಂದ ತಲೆಮರೆಸಿಕೊಂಡಿದ್ದ ಈ ಇಬ್ಬರ ಪತ್ತೆಗೆ ಹರಿಯಾಣ ಪೊಲೀಸರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

ಪೊಲೀಸರ ಮೇಲೆ ಗುಂಡಿನ ದಾಳಿ:

ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಬಹದ್ದೂರ್‌ಗಢ್ ಪ್ರದೇಶದಲ್ಲಿ ಮತ್ತೊಂದು ದೊಡ್ಡ ಅಪರಾಧ ಎಸಗಲು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ದೆಹಲಿ ಪೊಲೀಸ್ ವಿಶೇಷ ಘಟಕ (Special Cell) ಮತ್ತು ಹರಿಯಾಣ ಎಸ್‌ಟಿಎಫ್ (STF) ತಂಡಕ್ಕೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಂಟಿ ಪೊಲೀಸ್ ತಂಡ ಆರೋಪಿಗಳನ್ನು ಸುತ್ತುವರಿದಿದೆ.

ಈ ವೇಳೆ ಶರಣಾಗುವಂತೆ ಪೊಲೀಸರು ಸೂಚಿಸಿದರೂ, ಹಂತಕರು ಪೊಲೀಸರ ಮೇಲೆಯೇ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರೂ ಆರೋಪಿಗಳಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಹರಿಯಾಣ ಎಸ್‌ಟಿಎಫ್ ಎಸ್‌ಪಿ ವಿಕ್ರಾಂತ್ ಭೂಷಣ್ ತಿಳಿಸಿದ್ದಾರೆ.

ಕಾನ್‌ಸ್ಟೆಬಲ್‌ಗೆ ಗಾಯ:

ಕಾರ್ಯಾಚರಣೆಯ ವೇಳೆ ದೆಹಲಿ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಕಾನ್‌ಸ್ಟೆಬಲ್ ಅಂಕಿತ್ ಅವರ ಕಾಲಿಗೆ ಗುಂಡು ತಗುಲಿದೆ. ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಹದ್ದೂರ್‌ಗಢ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಪ್ರಕರಣ ದಾಖಲಾಗಿದ್ದು, ಕಾನೂನು ಪ್ರಕ್ರಿಯೆಗಳ ಪ್ರಕಾರ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *