ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತೋಟವೊಂದರಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಅಡಗಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಭಾರಿ ಕಾರ್ಯಾಚರಣೆ ಕೈಗೊಂಡಿವೆ. ಕ್ಯಾಮೆರಾದಲ್ಲಿ ಉಗ್ರರ ಚಲನವಲನ ಪತ್ತೆಯಾದ ಬೆನ್ನಲ್ಲೇ ಈ ಜಂಟಿ ಕಾರ್ಯಾಚರಣೆ ಆರಂಭವಾಗಿದೆ.
ನಾಲ್ಕು ಹಳ್ಳಿಗಳು ಖಾಲಿ:
ಸ್ಥಳೀಯವಾಗಿ ತೀವ್ರ ನಿಗಾ ಇರಿಸಲಾಗಿದ್ದು, ಸೇನೆ, ಸ್ಥಳೀಯ ಪೊಲೀಸ್ ಮತ್ತು ಸಿಆರ್‌ಪಿಎಫ್ (CRPF) ಜಂಟಿ ತಂಡವು ಇಡೀ ಪ್ರದೇಶವನ್ನು ಸುತ್ತುವರಿದಿದೆ. ಸುತ್ತಮುತ್ತಲಿನ ಏಳು ಹಳ್ಳಿಗಳ ಪೈಕಿ ಈಗಾಗಲೇ ನಾಲ್ಕು ಹಳ್ಳಿಗಳನ್ನು ಸುರಕ್ಷಿತವಾಗಿ ಖಾಲಿ ಮಾಡಿಸಲಾಗಿದೆ.
ಗುಂಡಿನ ಚಕಮಕಿ:
ಸಿಕ್ಕಿಬಿದ್ದಿರುವ ಉಗ್ರರನ್ನು ಕುಲ್ಗಾಮ್ ಜಿಲ್ಲೆಯ ನಿವಾಸಿಗಳಾದ ಜಕೀರ್ ಮತ್ತು ಲತೀಫ್ ಎಂದು ಗುರುತಿಸಲಾಗಿದೆ. ಭದ್ರತಾ ಪಡೆಗಳ ಮೇಲೆ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಸೈನಿಕರು ನಡೆಸಿದ ದಾಳಿಯಿಂದಾಗಿ ತೀವ್ರ ಗುಂಡಿನ ಚಕಮಕಿ ಮುಂದುವರಿದಿದೆ. ಉಗ್ರರು ತೋಟದಿಂದ ತಪ್ಪಿಸಿಕೊಳ್ಳದಂತೆ ಎಲ್ಲಾ ನಿರ್ಗಮನ ಮಾರ್ಗಗಳನ್ನು ಯೋಧರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.





Leave a comment