ಬೆಂಗಳೂರು: ಡಿಜಿಟಲ್ ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಹಾಗೂ ಬ್ಲ್ಯಾಕ್‌ಮೇಲಿಂಗ್ ದಂದೆಗೆ ಬ್ರೇಕ್ ಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಹೆಜ್ಜೆಯೊಂದನ್ನು ಇಟ್ಟಿದೆ.
ಸಂತ್ರಸ್ತರ ಒಪ್ಪಿಗೆಯಿಲ್ಲದೆ ಅವರ ಇಂಟಿಮೇಟ್ (ಖಾಸಗಿ) ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಪ್ರಸಾರ ಮಾಡುವುದು ಅಥವಾ ಬ್ಲ್ಯಾಕ್‌ಮೇಲ್ ಮಾಡುವುದರ (ರೆವೆಂಜ್ ಪೋರ್ನ್ ಮತ್ತು ಸೆಕ್ಸ್ಟಾರ್ಷನ್) ವಿರುದ್ಧ ಎಫ್‌ಐಆರ್ (FIR) ದಾಖಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊಸ ‘ಸ್ಟ್ಯಾಂಡಿಂಗ್ ಆರ್ಡರ್’ (Standing Order) ಹೊರಡಿಸಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಖಾಸಗಿ ಚಿತ್ರ ಅಥವಾ ವಿಡಿಯೋಗಳನ್ನು ರೆಕಾರ್ಡ್ ಮಾಡಲು ನೀಡುವ ಒಪ್ಪಿಗೆಯನ್ನು, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ನೀಡಿದ ಒಪ್ಪಿಗೆ ಎಂದು ಅರ್ಥೈಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಆದೇಶದಲ್ಲಿ ಏನಿದೆ?
ಒಪ್ಪಿಗೆಯ ನೆಪ ಹೇಳುವಂತಿಲ್ಲ: ವಿಡಿಯೋ ಅಥವಾ ಫೋಟೋ ಮಾಡುವಾಗ ಸಂತ್ರಸ್ತರು ಒಪ್ಪಿಗೆ ನೀಡಿದ್ದರು ಎಂಬ ಒಂದೇ ಕಾರಣಕ್ಕೆ ದೂರು ಸ್ವೀಕರಿಸಲು ಅಥವಾ FIR ದಾಖಲಿಸಲು ವಿಳಂಬ ಮಾಡುವಂತಿಲ್ಲ. ಒಪ್ಪಿಗೆಯೊಂದಿಗೆ ಚಿತ್ರೀಕರಿಸಿದ್ದರೂ, ಅದನ್ನು ಬೇರೆಯವರಿಗೆ ಕಳುಹಿಸುವುದು ಪ್ರತ್ಯೇಕ ಅಪರಾಧವಾಗುತ್ತದೆ.
ಶಿಸ್ತು ಕ್ರಮದ ಎಚ್ಚರಿಕೆ: ಒಂದು ವೇಳೆ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ರೀತಿಯ ದೂರುಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಅಥವಾ ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಜೀರೋ ಎಫ್‌ಐಆರ್ (Zero FIR): ವ್ಯಾಪ್ತಿಯ ಗೊಂದಲವಿದ್ದರೆ ತಕ್ಷಣವೇ ‘ಜೀರೋ ಎಫ್‌ಐಆರ್’ ದಾಖಲಿಸಿಕೊಂಡು, ನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಬೇಕು.
ವಿಡಿಯೋ ಡಿಲೀಟ್ ಮಾಡಲು ಕ್ರಮ: ದೂರು ದಾಖಲಾದ ತಕ್ಷಣ ಇಂಟರ್ನೆಟ್‌ನಿಂದ ಆಕ್ಷೇಪಾರ್ಹ ದೃಶ್ಯಗಳನ್ನು ಬ್ಲಾಕ್ ಮಾಡಲು ಅಥವಾ ಡಿಲೀಟ್ ಮಾಡಲು ಸೈಬರ್ ಕ್ರೈಂ ಮತ್ತು ಸಿಐಡಿ ವಿಭಾಗದೊಂದಿಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಬೇಕು.
ಯಾವ ಕಾನೂನಿನಡಿ ಕ್ರಮ?
ಹೊಸ ಆದೇಶದ ಪ್ರಕಾರ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 77 (ಅಪರೂಪದ ದೃಶ್ಯಗಳ ವೀಕ್ಷಣೆ/ಅಪರಾಧ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000 ರ ಸೆಕ್ಷನ್ 66E (ಗೌಪ್ಯತೆ ಉಲ್ಲಂಘನೆ), 67 ಮತ್ತು 67A ಗಳ ಅಡಿಯಲ್ಲಿ ಕಡ್ಡಾಯವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಮಹಿಳೆಯರ ದೂರುಗಳನ್ನು ಮಹಿಳಾ ಅಧಿಕಾರಿಗಳೇ ದಾಖಲಿಸಿಕೊಳ್ಳಬೇಕು ಹಾಗೂ ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡಬೇಕು ಎಂದು ಆದೇಶಿಸಲಾಗಿದೆ.
- BNS Section 77 voyeurism
- digital privacy protection Karnataka
- IT Act 66E privacy violation
- Karnataka mandatory FIR revenge porn
- Karnataka police cyber crime rules
- non consensual intimate media laws India
- Priyank Kharge standing order
- revenge pornography legal action
- sextortion cases Karnataka
- Zero FIR Karnataka police
- ಐಟಿ ಆಕ್ಟ್ 66E
- ಕರ್ನಾಟಕ ಪೊಲೀಸ್ ಹೊಸ ಆದೇಶ
- ಕರ್ನಾಟಕ ಸೈಬರ್ ಕ್ರೈಂ ರೂಲ್ಸ್
- ಖಾಸಗಿ ವಿಡಿಯೋ ಲೀಕ್ ಅಪರಾಧ
- ಜೀರೋ ಎಫ್‌ಐಆರ್ ಕರ್ನಾಟಕ
- ಪ್ರಿಯಾಂಕ್ ಖರ್ಗೆ ಗೃಹ ಇಲಾಖೆ
- ಪ್ರಿಯಾಂಕ್ ಖರ್ಗೆ ಟ್ವೀಟ್
- ಬಿಎನ್ಎಸ್ ಸೆಕ್ಷನ್ 77
- ಮಂಡಟರಿ ಎಫ್‌ಐಆರ್ ಕರ್ನಾಟಕ
- ರೆವೆಂಜ್ ಪೋರ್ನ್ ಎಫ್‌ಐಆರ್ ಕಡ್ಡಾಯ
- ಸೆಕ್ಸ್ಟಾರ್ಷನ್ ಕೇಸ್ ಕರ್ನಾಟಕ
- ಸೈಬರ್ ಅಪರಾಧ ತಡೆ





Leave a comment