Home ಕ್ರೈಂ ನ್ಯೂಸ್ ಚನ್ನಗಿರಿ ತಾಲೂಕಿನ ಯಲ್ಲದನಹಳ್ಳಿಯ ಬಾಳೆತೋಟದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಹತ್ತು ಆರೋಪಿಗಳು ಯಾರು ಗೊತ್ತಾ?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚನ್ನಗಿರಿ ತಾಲೂಕಿನ ಯಲ್ಲದನಹಳ್ಳಿಯ ಬಾಳೆತೋಟದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಹತ್ತು ಆರೋಪಿಗಳು ಯಾರು ಗೊತ್ತಾ?

Share
ಚನ್ನಗಿರಿ
Share

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಯಲ್ಲದನಹಳ್ಳಿ ಬಾಳೇತೋಟದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿರುವ ಆರೋಪಿಗಳ ಹೆಸರು ಗೊತ್ತಾಗಿದೆ.

ಬಸವಾಪಟ್ಟಣ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಹಳ್ಳಿಯವರಾದ ಮಾರುತಿ, ನಾಗರಾಜ್, ಮಧು, ಪ್ರಜ್ವಲ್, ಪ್ರದೀಪ್, ಅರ್ಜುನ್, ಸುನೀಲ್, ಮನು, ಬಸವರಾಜ್ ಎಂಬುವವರೇ ಬಂಧಿತ ಕಾಮುಕರು.

ಜೂನ್ 3ರಂದು ಏನಾಗಿತ್ತು?

ಜೂನ್ 3 ರಂದು ಮಹಿಳೆಯ ಪುಸಲಾಯಿಸಿ ಆರೋಪಿಗಳು ಕರೆದುಕೊಂಡು ಹೋಗಿದ್ದಾರೆ. ಯಲ್ಲದನಹಳ್ಳಿಯ ಬಾಳೆತೋಟಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಹಿಳೆಗೆ ವಿಪರೀತ ಕುಡಿಸಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆ ವಾಹನದಿಂದ ಇಳಿಯುವ, ಹೋಗುವ ವಿಡಿಯೋಗಳನ್ನು ಮಾಡಿಕೊಂಡಿದ್ದ ಆರೋಪಿಗಳು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ವಿಡಿಯೋ ವೈರಲ್ ಬೆದರಿಕೆ:

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಮತ್ತೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಆದರೆ ಇದಕ್ಕೆ ಮಹಿಳೆ ಸೊಪ್ಪು ಹಾಕಿಲ್ಲ. ಹಾಗಾಗಿ, ಮಹಿಳೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬಸವಾಪಟ್ಟಣದ ಜನರಿಗೆ ಈ ವಿಡಿಯೋ ನೋಡಿ ಶಾಕ್ ಆಗಿದೆ. ಬಳಿಕ ಮಹಿಳೆಯು ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರಿಂದ ತಕ್ಷಣದ ಕಾರ್ಯಾಚರಣೆ, 10 ಮಂದಿ ಬಂಧನ:

ಪೊಲೀಸರು ಸಹ ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಘಟನೆ ಕುರಿತಂತೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿರುವ ಬಸವಾಪಟ್ಟಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳ ಹಿನ್ನೆಲೆ ಏನು? ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರಾ? ಇದೇ ರೀತಿಯಲ್ಲಿ ಬೇರೆ ಏನಾದರೂ ಅಪರಾಧ ಕೃತ್ಯ ನಡೆಸಿದ್ದರಾ ಎಂಬ ಕುರಿತಂತೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಹಿಳೆ ಮತ್ತು ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಮಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles