Home ಕ್ರೈಂ ನ್ಯೂಸ್ ಗಂಡನನ್ನು ಬಿಟ್ಟು ಸ್ವಂತ ಮಾವನನ್ನೇ ಮದುವೆಯಾದ ಸೊಸೆ! ಅಸಲಿ ಟ್ವಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗಂಡನನ್ನು ಬಿಟ್ಟು ಸ್ವಂತ ಮಾವನನ್ನೇ ಮದುವೆಯಾದ ಸೊಸೆ! ಅಸಲಿ ಟ್ವಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು!

Share
ಗಂಡ
Share

ಉತ್ತರ ಪ್ರದೇಶ: ಮಗನನ್ನ ಬಿಟ್ಟು ಸ್ವಂತ ಮಾವನನ್ನೇ ಮದುವೆಯಾದ ಸೊಸೆ! ಕೊನೆಯಲ್ಲಿ ಟ್ವಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು!. ಹೌದು. ಕೌಟುಂಬಿಕ ಸಂಬಂಧಗಳಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆಯಲು ಸಾಧ್ಯವೇ? ಕೇಳಿದ್ರೆ ಅಕ್ಷರಶಃ ತಲೆ ತಿರುಗುತ್ತೆ! ಹೆಂಡತಿ ನಾಪತ್ತೆಯಾಗಿದ್ದಾಳೆ ಅಂತ ವರ್ಷಗಟ್ಟಲೆ ಹುಡುಕಾಡಿದ ಗಂಡನಿಗೆ ಕೊನೆಯಲ್ಲಿ ಸಿಕ್ಕಿದ್ದು ಘೋರ ಶಾಕ್.

ನಡೆದಿದ್ದೇನು?

ಉತ್ತರ ಪ್ರದೇಶದಲ್ಲಿ 2016ರಲ್ಲಿ ಮದುವೆಯಾಗಿದ್ದ ಯುವತಿಯೊಬ್ಬಳು, ಕೇವಲ ಒಂದು ವರ್ಷದ ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಗಂಡ ಹಗಲು-ರಾತ್ರಿ ಎನ್ನದೆ ಎಲ್ಲೆಡೆ ಹುಡುಕಾಡಿದರೂ ಹೆಂಡತಿಯ ಸುಳಿವು ಸಿಕ್ಕಿರಲಿಲ್ಲ. ಆದರೆ, ಕೊನೆಗೆ ಆಕೆ ಪತ್ತೆಯಾಗಿದ್ದು ಎಲ್ಲಿ ಗೊತ್ತಾ? ತನ್ನದೇ ಸ್ವಂತ ಮಾವನ (ಗಂಡನ ತಂದೆಯ) ಜೊತೆ!

ಪೊಲೀಸರೇ ಕಂಗಾಲು!

ಹೆಂಡತಿಯ ಸುಳಿವು ಸಿಗುತ್ತಿದ್ದಂತೆ ಗಂಡ ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾನೆ. ಆದರೆ, ಪೊಲೀಸರು ವಿಚಾರಣೆಗೆಂದು ಆ ಮಾವ ಮತ್ತು ಸೊಸೆಯನ್ನು ಠಾಣೆಗೆ ಕರೆಸಿದಾಗ ಅಲ್ಲಿ ಕಾಯುತ್ತಿತ್ತು ಅಸಲಿ ಟ್ವಿಸ್ಟ್! ಅವರು ಯಾವುದೇ ಅಂಜಿಕೆಯಿಲ್ಲದೆ, ತಾವಿಬ್ಬರೂ ಕಾನೂನುಬದ್ಧವಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿರುವ ಅಸಲಿ ದಾಖಲೆಗಳನ್ನೇ ಪೊಲೀಸರ ಮುಂದಿಟ್ಟಿದ್ದಾರೆ. ಇದನ್ನು ನೋಡಿ ಖಾಕಿ ಪಡೆಯೇ ಒಂದು ಕ್ಷಣ ಕಂಗಾಲಾಗಿದೆ.

ಮಾವನನ್ನೇ ಮದುವೆಯಾಗಲು ಕಾರಣವೇನು?

ಪೊಲೀಸರ ಹಾಗೂ ಗಂಡನ ಪ್ರಶ್ನೆಗಳಿಗೆ ಆ ಯುವತಿ ನೀಡಿದ ಉತ್ತರ ಎಲ್ಲರನ್ನೂ ಚಕಿತಗೊಳಿಸಿದೆ. “ನನಗೆ ಮೊದಲ ಮದುವೆ ಆದಾಗ ನನ್ನ ಗಂಡ ಇನ್ನೂ ಮೈನರ್ (ಅಪ್ರಾಪ್ತ) ಆಗಿದ್ದ. ಕಾನೂನುಬದ್ಧವಾಗಿ ಆತು ಇನ್ನು ಮದುವೆ ವಯಸ್ಸಿಗೆ ಬಂದಿರಲಿಲ್ಲ. ಆತನ ಜೊತೆ ಬಾಳಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ನನ್ನ ಮಾವನನ್ನೇ ಇಷ್ಟಪಟ್ಟು ಮದುವೆಯಾಗಿದ್ದೇನೆ” ಎಂದು ಧೈರ್ಯವಾಗಿ ಹೇಳಿಕೆ ನೀಡಿದ್ದಾಳೆ.

ಸದ್ಯ ಈ ವಿಚಿತ್ರ ಪ್ರೇಮ ಹಾಗೂ ಮದುವೆ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *