Home ದಾವಣಗೆರೆ ದಾಗಿನಕಟ್ಟೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ನೇರ ಪ್ರವೇಶಾತಿ ಆರಂಭ; ಮೇ 26 ರಿಂದ ಅವಕಾಶ
ದಾವಣಗೆರೆಬೆಂಗಳೂರು

ದಾಗಿನಕಟ್ಟೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ನೇರ ಪ್ರವೇಶಾತಿ ಆರಂಭ; ಮೇ 26 ರಿಂದ ಅವಕಾಶ

Share
ಪ್ರವೇಶಾತಿ
Share

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆಯ ಶ್ರೀ ಕೆಂಗಪ್ಪ ನಾಯಕ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2026-27 ನೇ ಸಾಲಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ , ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ.

ಮೊದಲ ಹಂತದ ಪ್ರವೇಶ ಪ್ರಕ್ರಿಯೆಯ ನಂತರ ವಿವಿಧ ವಿಭಾಗಗಳಲ್ಲಿ ಕೆಲವು ಸೀಟುಗಳು ಖಾಲಿ ಉಳಿದಿದ್ದು, ಅರ್ಹ ಅಭ್ಯರ್ಥಿಗಳಿಗೆ ಆಫ್‌ಲೈನ್ ಮುಖಾಂತರ ನೇರ ಪ್ರವೇಶ ಪಡೆಯಲು ಮೇ 26 ರಿಂದ ಅವಕಾಶ ಕಲ್ಪಿಸಲಾಗಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ವಿವರ ಹಾಗೂ ಪ್ರವೇಶಾತಿ ಮಾಹಿತಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು 08180-200547, 8861360348, 9964809796, 9844197172 ದೂರವಾಣಿ ಸಂಖ್ಯೆಗಳನ್ನು ಇ-ಮೇಲ್: gptbasavapatna@gmail.com ಸಂಪರ್ಕಿಸಲು ಪ್ರಾಂಶುಪಾಲರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *