ನವದೆಹಲಿ: ತಮ್ಮ ಆಧಾರ್ ಕಾರ್ಡ್‌ನಲ್ಲಿ ದಾಖಲೆಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ದೇಶದ ನಾಗರಿಕರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಮತ್ತೊಂದು ಬಂಪರ್ ಕೊಡುಗೆ ನೀಡಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಉಚಿತವಾಗಿ ದಾಖಲೆಗಳನ್ನು ನವೀಕರಿಸುವ ಗಡುವನ್ನು ಮುಂದಿನ ಒಂದು ವರ್ಷದವರೆಗೆ, ಅಂದರೆ ಜೂನ್ 14, 2027 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಈ ಸೌಲಭ್ಯವು ಜೂನ್ 16, 2026 ಕ್ಕೆ ಕೊನೆಗೊಳ್ಳಬೇಕಿತ್ತು.
ಆನ್‌ಲೈನ್‌ನಲ್ಲಿ ಮಾತ್ರ ಉಚಿತ ಸೇವೆ:
UIDAI ತಿಳಿಸಿರುವಂತೆ, ಈ ಉಚಿತ ಸೌಲಭ್ಯವು ಕೇವಲ ಮೈಆಧಾರ್ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಮಾಡುವ ಅಪ್‌ಡೇಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಗಳಿಗೆ (Aadhaar Enrolment Centre) ಭೇಟಿ ನೀಡಿ ದಾಖಲೆ ನವೀಕರಿಸಿದರೆ ಎಂದಿನಂತೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಇದುವರೆಗೆ ಒಮ್ಮೆಯೂ ದಾಖಲೆ ನವೀಕರಿಸದವರು ಕಡ್ಡಾಯವಾಗಿ ತಮ್ಮ ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆಗಳನ್ನು (POA) ಅಪ್‌ಡೇಟ್ ಮಾಡುವಂತೆ UIDAI ಸಲಹೆ ನೀಡಿದೆ.
ಗಮನಿಸಬೇಕಾದ ಪ್ರಮುಖ ಅಂಶಗಳು:
ಬಯೋಮೆಟ್ರಿಕ್ಸ್‌ಗೆ ವಿನಾಯಿತಿ ಇಲ್ಲ: ಹೆಸರು, ಮೊಬೈಲ್ ಸಂಖ್ಯೆ, ಲಿಂಗ, ಹುಟ್ಟಿದ ದಿನಾಂಕ ಅಥವಾ ಬಯೋಮೆಟ್ರಿಕ್ಸ್ (ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಮತ್ತು ಫೋಟೋ) ಬದಲಾವಣೆಗಳಿಗಾಗಿ ಕಡ್ಡಾಯವಾಗಿ ಆಧಾರ್ ಕೇಂದ್ರಕ್ಕೇ ಭೇಟಿ ನೀಡಬೇಕು. ಇವು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿರುವುದಿಲ್ಲ.
ಫೈಲ್ ಸೈಜ್: ಅಪ್‌ಡೇಟ್ ಮಾಡಲು ಅಪ್‌ಲೋಡ್ ಮಾಡುವ ದಾಖಲೆಗಳ ಫೈಲ್ ಗಾತ್ರವು 2 MB ಗಿಂತ ಕಡಿಮೆ ಇರಬೇಕು ಹಾಗೂ ಅದು JPEG, PNG ಅಥವಾ PDF ಫಾರ್ಮ್ಯಾಟ್‌ನಲ್ಲಿರಬೇಕು.
ಹೊಸ ಆಧಾರ್ ಆಪ್: ಹಳೆಯ ‘mAadhaar’ ಅಪ್ಲಿಕೇಶನ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದ್ದು, ನಾಗರಿಕರು ಹೊಸ ವೈಶಿಷ್ಟ್ಯಗಳಿರುವ ಅಧಿಕೃತ ‘Aadhaar App’ ಬಳಸಲು ಸೂಚಿಸಲಾಗಿದೆ.





Leave a comment