ದಾವಣಗೆರೆ: ಜಗಳೂರು ಉಪವಿಭಾಗದ ಬೆಸ್ಕಾಂ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 22, ಮೇ 25 ಹಾಗೂ ಮೇ 26 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳ ಗ್ರಾಹಕರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಮೇ22ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಕಾಡಜ್ಜಿ ಉಪಕೇಂದ್ರದ ವ್ಯಾಪ್ತಿಗೆ ಒಳಪಡುವ ಎಫ್-01-ರೆಡ್ಡಿ ಕ್ಯಾಂಪ್, ಎಫ್-02 ಪುಟುಗನಾಳು, ಎಫ್-04 ಎನ್ ಜೆ ಶ್ರೀರಾಮ್, ಎಫ್-06 ಕಾಡಜ್ಜಿ, ಎಫ್-07 ಬಸವನಾಳು, ಎಫ್-08 ನಾಗರಕಟ್ಟೆ ಮತ್ತು ಎಫ್-09 ರಾಂಪುರ ಐ.ಪಿ 11 ಕೆ.ವಿ. ಮಾರ್ಗಗಳ ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಬಸವನಾಳು, ಬಸವನಾಳು ಗೊಲ್ಲರಹಟ್ಟಿ, ಬೇತೂರು, ಪುಟುಗನಾಳು, ರೆಡ್ಡಿ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.





Leave a comment