Home ಕ್ರೈಂ ನ್ಯೂಸ್ ಜಯಂ ರವಿ ಆರೋಪಕ್ಕೆ ಆರ್ತಿ ತಾಯಿ ಸುಜಾತಾ ಗರಂ: ‘ಯಾರು ಮಣಿಕಟ್ಟು ಕುಯ್ದುಕೊಂಡಿದ್ದರು ಅನ್ನೋದು ಹಳೇ ಮ್ಯಾಗಜೀನ್‌ನಲ್ಲಿದೆ!’
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

ಜಯಂ ರವಿ ಆರೋಪಕ್ಕೆ ಆರ್ತಿ ತಾಯಿ ಸುಜಾತಾ ಗರಂ: ‘ಯಾರು ಮಣಿಕಟ್ಟು ಕುಯ್ದುಕೊಂಡಿದ್ದರು ಅನ್ನೋದು ಹಳೇ ಮ್ಯಾಗಜೀನ್‌ನಲ್ಲಿದೆ!’

Share
ಜಯಂ ರವಿ
Share

ಚೆನ್ನೈ: ಕಾಲಿವುಡ್ ನಟ ಜಯಂ ರವಿ (Ravi Mohan) ಮತ್ತು ಅವರ ಪತ್ನಿ ಆರ್ತಿ ನಡುವಿನ ವೈವಾಹಿಕ ಜಗಳ ಇದೀಗ ಮತ್ತಷ್ಟು ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಜಯಂ ರವಿ ಪತ್ರಿಕಾಗೋಷ್ಠಿ ನಡೆಸಿ ತಮಗೆ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಮತ್ತು ಈ ಹಿಂದೆ ತಾವು ಮಣಿಕಟ್ಟು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕಣ್ಣೀರು ಹಾಕಿದ್ದರು. ಈ ಶಾಕಿಂಗ್ ಆರೋಪಗಳಿಗೆ ಇದೀಗ ಆರ್ತಿ ಅವರ ತಾಯಿ, ಖ್ಯಾತ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಮಾಧ್ಯಮಗಳ ಮುಂದೆ ಬಂದು ಖಡಕ್ ತಿರುಗೇಟು ನೀಡಿದ್ದಾರೆ.

ಹಳೇ ಮ್ಯಾಗಜೀನ್ ನೋಡಿ, ಸತ್ಯ ತಿಳಿಯುತ್ತೆ: ಜಯಂ ರವಿ ಅವರ ಆತ್ಮಹತ್ಯೆ ಯತ್ನ ಹಾಗೂ ಬ್ಲ್ಯಾಕ್‌ಮೇಲ್ ಆರೋಪದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಸುಜಾತಾ, “ಅವರ ಮದುವೆಯ ಸಂದರ್ಭದಲ್ಲಿ ಏನಾಗಿತ್ತು ಎಂದು ನಾನು ಹಳೆಯ ವಿಕಟನ್ ನಿಯತಕಾಲಿಕೆಯ (Magazine) ಸಂದರ್ಶನವೊಂದರಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಮದುವೆಗಾಗಿ ಯಾರು ಯಾರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು, ಯಾರು ಮಣಿಕಟ್ಟು ಕುಯ್ದುಕೊಂಡಿದ್ದರು ಎಂಬುದು ಆ ಹಳೇ ಸಂದರ್ಶನ ಓದಿದರೆ ಎಲ್ಲರಿಗೂ ಅರ್ಥವಾಗುತ್ತದೆ” ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.

ಮಕ್ಕಳನ್ನು ಭೇಟಿಯಾಗಲು ತಡೆದಿಲ್ಲ: ಜಯಂ ರವಿ ಅವರಿಗೆ ಮಕ್ಕಳಾದ ಆರವ್ ಮತ್ತು ಅಯಾನ್ ಅವರನ್ನು ನೋಡಲು ಬಿಡುತ್ತಿಲ್ಲ ಎಂಬ ಆರೋಪವನ್ನು ಸುಜಾತಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಮಗನಿಗೆ ಸದ್ಯ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಈ ಸಮಯದಲ್ಲಿ ಈ ರೀತಿಯ ಸಾರ್ವಜನಿಕ ರಂಪಾಟದಿಂದ ಮಗುವಿಗೆ ಮಾನಸಿಕ ಒತ್ತಡ ಉಂಟಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಆಸ್ಪತ್ರೆಯ ಬಿಲ್ ವಿಚಾರವಾಗಿ ಮಾತನಾಡಿದ ಅವರು, “ರವಿ ಯಾವುದೇ ಹಣ ಪಾವತಿಸಿಲ್ಲ, ಒಂದು ವೇಳೆ ಪಾವತಿಸಿದ್ದರೂ ಅದು ಅಳಿಯನಾಗಿ ಅವರ ಕರ್ತವ್ಯ” ಎಂದಿದ್ದಾರೆ. ಕೊನೆಯಲ್ಲಿ, “ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಹೆಚ್ಚು ಮಾತನಾಡುವುದಿಲ್ಲ. ನನಗೆ ಕಾನೂನಿನ ಮೇಲೆ ಸಂಪೂರ್ಣ ಭರವಸೆ ಇದೆ” ಎಂದು ಸುಜಾತಾ ವಿಜಯಕುಮಾರ್ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles