ಶಿವಮೊಗ್ಗ: ಭಾರತೀಯ ಸೇನಾ ಹಾಗೂ ಇತರ ಸಮವಸ್ತ್ರಧಾರಿ ಸೇವೆಗಳಿಗೆ ಸೇರಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕಾರವಾರದ ಮಾಜಾಳಿಯಲ್ಲಿರುವ ‘ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ’ಯಲ್ಲಿ ಈ ತರಬೇತಿ ನಡೆಯಲಿದ್ದು, ಆಸಕ್ತ ಬಾಲಕರು ಮೇ 28ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ ಮತ್ತು ವಯೋಮಿತಿ:
ಮೀಸಲಾತಿ: ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಹರು.
ವಿದ್ಯಾರ್ಹತೆ: 10ನೇ ತರಗತಿಯ ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕ ಹಾಗೂ ಒಟ್ಟಾರೆ ಶೇ. 45 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ವಯಸ್ಸು: 17 ರಿಂದ 20 ವರ್ಷದ ಒಳಗಿರಬೇಕು (28-05-2006 ರಿಂದ 28-05-2009ರ ನಡುವೆ ಜನಿಸಿರಬೇಕು).
ಆದಾಯ ಮಿತಿ: ಪ್ರವರ್ಗ-1 ಕ್ಕೆ ರೂ. 2.50 ಲಕ್ಷ ಹಾಗೂ ಉಳಿದ ಪ್ರವರ್ಗಗಳಿಗೆ ರೂ. 1.00 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿಯನ್ನು ಆಯಾ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿ ಮೇ 28ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು: ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ನೆಲಮಹಡಿ, ಕೊಠಡಿ ಸಂಖ್ಯೆ 01, ಕಾರವಾರ – 581301.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226588 ಅನ್ನು ಸಂಪರ್ಕಿಸಬಹುದು.





Leave a comment