Home ಕ್ರೈಂ ನ್ಯೂಸ್ ನಾಸಿಕ್‌ನ “ಸ್ವಯಂಘೋಷಿತ ದೇವಮಾನವ”, “ರಾಸಲೀಲೆ ವೀರ” ಲೆಕ್ಕಪ್ಪನ ಅಡ್ಡೆಗಳ ಮೇಲೆ ಇಡಿ ದಾಳಿ: 3 ನಗರಗಳ 11 ಕಡೆಗಳಲ್ಲಿ ಮಹತ್ವದ ದಾಖಲೆಗಳ ಜಪ್ತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಾಣಿಜ್ಯ

ನಾಸಿಕ್‌ನ “ಸ್ವಯಂಘೋಷಿತ ದೇವಮಾನವ”, “ರಾಸಲೀಲೆ ವೀರ” ಲೆಕ್ಕಪ್ಪನ ಅಡ್ಡೆಗಳ ಮೇಲೆ ಇಡಿ ದಾಳಿ: 3 ನಗರಗಳ 11 ಕಡೆಗಳಲ್ಲಿ ಮಹತ್ವದ ದಾಖಲೆಗಳ ಜಪ್ತಿ!

Share
ನಾಸಿಕ್‌
Share

ಮುಂಬೈ: ಮಹಾರಾಷ್ಟ್ರದ ಸ್ವಯಂಘೋಷಿತ ದೇವಮಾನವ ಅಶೋಕ್ ಖಾರಾತ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಮರ ಸಾರಿದೆ.

ಲೈಂಗಿಕ ಶೋಷಣೆ, ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಸಿಕ್, ಪುಣೆ ಮತ್ತು ಶಿರಡಿಯ ಒಟ್ಟು 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ದಿವ್ಯ ಶಕ್ತಿಯ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸಿ, ನಕಲಿ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪ ಖಾರಾತ್ ಮೇಲಿದೆ.

ಈತ ಸಮಾಜದ ಸಾಮಾನ್ಯ ವಸ್ತುಗಳನ್ನು ‘ಆಶೀರ್ವದಿಸಿದ ವಸ್ತು’ಗಳೆಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ ಎನ್ನಲಾಗಿದೆ.

ದಾಳಿ ನಡೆದ ಸ್ಥಳಗಳು:

ನಾಸಿಕ್ (5), ಪುಣೆ (3), ಶಿರಡಿ (3).

ಹಿಂದಿನ ವೃತ್ತಿ:

ಅಶೋಕ್ ಖಾರಾತ್ ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ.

ಆರೋಪಗಳು:

ಮಹಿಳೆಯರ ಮೇಲೆ ಅತ್ಯಾಚಾರ, ಗರ್ಭಪಾತಕ್ಕೆ ಪ್ರಚೋದನೆ, ಮಾಟ-ಮಂತ್ರದ ಹೆಸರಿನಲ್ಲಿ ವಂಚನೆ.

ಆರ್ಥಿಕ ವಂಚನೆ: ಚಾರ್ಟರ್ಡ್ ಅಕೌಂಟೆಂಟ್ ಪ್ರಕಾಶ್ ಪೋಫಾಲೆ ಸಹಾಯದೊಂದಿಗೆ ಬೆನಾಮಿ ಖಾತೆಗಳ ಮೂಲಕ ಹಣವನ್ನು ಭೂಮಿಯ ಮೇಲೆ ಹೂಡಿಕೆ ಮಾಡಲಾಗಿದೆ.

Share

Leave a comment

Leave a Reply

Your email address will not be published. Required fields are marked *