Home ದಾವಣಗೆರೆ ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ರಶ್ಮಿ ಹೆಚ್. ಎಸ್.ಗೆ 600ಕ್ಕೆ 591
ದಾವಣಗೆರೆಬೆಂಗಳೂರು

ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ರಶ್ಮಿ ಹೆಚ್. ಎಸ್.ಗೆ 600ಕ್ಕೆ 591

Share
ದಾವಣಗೆರೆ
Share

ದಾವಣಗೆರೆ: 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ರಶ್ಮಿ ಹೆಚ್.‌ ಎಸ್.‌ 600ಕ್ಕೆ 591 ಅಂಕಗಳನ್ನು ಗಳಿಸಿ ಶೇಕಡವಾರು 98.5% ಪಡೆದಿದ್ದಾರೆ.

ಬಾಲಕಿ ಸುರೇಶ್‌ ಹೆಚ್.‌ ಎಸ್.‌ ಮತ್ತು ಜ್ಯೋತಿ ಎನ್.‌ ಎಂ. ದಂಪತಿಗಳ ಪುತ್ರಿ. ಕನ್ನಡ 99, ಆಂಗ್ಲ 97, ಭೌತಶಾಸ್ತ್ರ 100, ರಸಾಯನಶಾಸ್ತ್ರ 98 ಗಣಿತ 100 ಮತ್ತು ಜೀವಶಾಸ್ತ್ರ 97 ಅಂಕಗಳನ್ನು ಗಳಿಸಿದ್ದಾಳೆ.

ಪ್ರಣವ್‌ ದಿಗ್ಗಾವಿ 587, ಚಂದನ ಎನ್.‌ 587 ದೀಪಾ ಬಿ.ಜೆ. 584, ಸರ್ವಮಂಗಳ 584, ಸಾತ್ವಿಕ್‌ ನಾಗಸಾಯಿ 584, ಸ್ಪೂರ್ತಿ ಪಿ.ಆರ್. 584 ಅಂಕಗಳನ್ನು ಪಡೆದಿದ್ದಾರೆ. 381 ಮಕ್ಕಳು ಅತ್ಯುನ್ನತ ಶ್ರೇಣಿ, 244 ಮಕ್ಕಳು ಪ್ರಥಮ ದರ್ಜೆ ಮತ್ತು 7 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡದಲ್ಲಿ 18, ಭೌತಶಾಸ್ತ್ರದಲ್ಲಿ 9, ಗಣಿತಶಾಸ್ತ್ರದಲ್ಲಿ 36, ಜೀವಶಾಸ್ತ್ರದಲ್ಲಿ 4, ಕಂಪ್ಯೂಟರ್‌ ಸೈನ್ಸ್‌ನಲ್ಲಿ 8 ಮಕ್ಕಳು ಒಟ್ಟು 75 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲ ಮಕ್ಕಳನ್ನು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿಯ ಪ್ರಶಾಂತ್‌ ಡಿ.ಎಸ್.‌, ಕಾರ್ಯದರ್ಶಿ ಹೇಮಂತ್‌ ಡಿ.ಎಸ್.‌, ಡಾ|| ಜಯಂತ್‌ ಡಿ.ಎಸ್.‌ ಮತ್ತು ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *