Home ದಾವಣಗೆರೆ ಸಿರಿಗೆರೆ– ಸಾಣೇಹಳ್ಳಿ ಶ್ರೀಗಳ ಭೇಟಿ: ಆಶೀರ್ವಾದ ಪಡೆದು ಜನಸೇವೆಗೆ ಬದ್ಧತೆ ವ್ಯಕ್ತಪಡಿಸಿದ ಸಮರ್ಥ್ ಶಾಮನೂರು
ದಾವಣಗೆರೆಬೆಂಗಳೂರು

ಸಿರಿಗೆರೆ– ಸಾಣೇಹಳ್ಳಿ ಶ್ರೀಗಳ ಭೇಟಿ: ಆಶೀರ್ವಾದ ಪಡೆದು ಜನಸೇವೆಗೆ ಬದ್ಧತೆ ವ್ಯಕ್ತಪಡಿಸಿದ ಸಮರ್ಥ್ ಶಾಮನೂರು

Share
ಸಿರಿಗೆರೆ
Share

ದಾವಣಗೆರೆ: ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ದಾವಾಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭೇಟಿ ನೀಡಿ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

ಸಿರಿಗೆರೆ

ನಂತರ ಸಾಣೆಹಳ್ಳಿಯ ಶ್ರೀ ತರಳಬಾಳು ಶಾಖಾಮಠಕ್ಕೆ ಭೇಟಿ ನೀಡಿದ ಸಮರ್ಥ್ ಶಾಮನೂರು ಅವರು ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉಭಯ ಸ್ವಾಮೀಜಿಯವರು ಉತ್ತಮ ಜನಪ್ರತಿನಿಧಿಯಾಗಿ ಜನಸೇವೆ ಮಾಡಬೇಕು ಎಂದು ಆಶೀರ್ವಾದ ಮಾಡಿದರು.

ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಸಬಾವಿ ಸರ್ಕಲ್ ನಿಂದ ಅಖ್ತರ ಸರ್ಕಲ್ ವರೆಗೆ ರೋಡ್ ಶೋ ಮುಖಾಂತರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ನಾನು ಅಜ್ಜನ ನೆರಳಲ್ಲಿ ಬೆಳೆದವನು. ಹಳೆಯ ಬೇರಿನ ಹೊಸ ಚಿಗುರು ನಾನು. ಅಜಾತಶತ್ರುವಾಗಿ ಎಲ್ಲರೊಂದಿಗೂ ಸ್ನೇಹಭಾವದಿಂದ ಕೆಲಸ ಮಾಡಬೇಕೆಂಬುದು ನನ್ನ ಆಶಯವಾಗಿದೆ. ಕೋವಿಡ್ ಸಮಯದಲ್ಲಿ ಅಪ್ಪಾಜಿ ಅವರು ಸುಮಾರು 6 ಕೋಟಿ ರೂ. ಖರ್ಚು ಮಾಡಿ ಲಸಿಕೆ ತರಿಸಿ ಜನರ ಜೀವ ಉಳಿಸಿದ್ದಾರೆಂದರು.

ಕ್ಷೇತ್ರದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ತಮ್ಮ ಕರ್ತವ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *