ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಷ್ಟಪರಿಸ್ಥಿತಿಯಲ್ಲಿದ್ದು ಮಾಸಾಶನ ಪಡೆಯುತ್ತಿರುವ ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ತಮ್ಮ ಜೀವಿತಾವಧಿ ಪ್ರಮಾಣಪತ್ರವನ್ನು (Life Certificate) ಸಲ್ಲಿಸಲು ಗಡುವು ನೀಡಲಾಗಿದೆ.
ಅರ್ಹ ಫಲಾನುಭವಿಗಳು ಮಾರ್ಚ್ 31ರೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯವಿರುವ ದಾಖಲೆಗಳು:
ಬ್ಯಾಂಕ್ ಮ್ಯಾನೇಜರ್ ಸಹಿ ಇರುವ ಜೀವಿತಾವಧಿ ಪ್ರಮಾಣಪತ್ರ.
ಆಧಾರ್ ಕಾರ್ಡ್ ಪ್ರತಿ.
ಪಿಂಚಣಿ ಪುಸ್ತಕದ (Pension Book) ಪ್ರತಿ.
ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋ.
ಸಲ್ಲಿಕೆ ವಿಳಾಸ:
ಅರ್ಹರು ದಾಖಲೆಗಳನ್ನು “ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 27, ದಾವಣಗೆರೆ” ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ.





Leave a comment