ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ವಿಶ್ವದ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಬಂದ್ ಆಗುವ ಭೀತಿ ಎದುರಾಗಿದೆ.
ಒಂದು ವೇಳೆ ಈ ಮಾರ್ಗ ಸಂಪೂರ್ಣವಾಗಿ ಸ್ಥಗಿತಗೊಂಡರೆ, ಭಾರತದ ಬಳಿಯಿರುವ ಸುಮಾರು 100 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ದಾಸ್ತಾನು ಕೇವಲ 40 ರಿಂದ 45 ದಿನಗಳವರೆಗೆ ಮಾತ್ರ ಪೂರೈಕೆಯಾಗಬಲ್ಲದು ಎಂದು ಅಂದಾಜಿಸಲಾಗಿದೆ.
ತೈಲ ಅವಲಂಬನೆ:
ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅಗತ್ಯದ ಶೇ. 88ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ತೈಲ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ.
ದಾಸ್ತಾನು ಎಲ್ಲಿದೆ?:
ಈ 100 ಮಿಲಿಯನ್ ಬ್ಯಾರೆಲ್ ತೈಲವು ಕೇವಲ ಒಂದೇ ಕಡೆ ಇಲ್ಲ. ಇದು ಭೂಗತ ಆಯಕಟ್ಟಿನ ಮೀಸಲು ಕೇಂದ್ರಗಳು (SPR), ತೈಲ ಕಂಪನಿಗಳ ಸ್ಟೋರೇಜ್ ಟ್ಯಾಂಕ್‌ಗಳು ಮತ್ತು ಈಗಾಗಲೇ ಸಮುದ್ರ ಮಾರ್ಗದಲ್ಲಿ ಭಾರತದತ್ತ ಬರುತ್ತಿರುವ ಹಡಗುಗಳಲ್ಲಿ ಅಡಕವಾಗಿದೆ.
ಪರ್ಯಾಯ ಮಾರ್ಗಗಳು:
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಮುಂದುವರಿದರೆ, ಭಾರತವು ರಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಅಮೆರಿಕದಂತಹ ದೇಶಗಳಿಂದ ಹೆಚ್ಚಿನ ತೈಲ ಖರೀದಿಸಲು ಮುಂದಾಗಬಹುದು.
ಬೆಲೆ ಏರಿಕೆ ಭೀತಿ:
ಪೂರೈಕೆಯಲ್ಲಿ ವ್ಯತ್ಯಯವಾದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಸಾಧ್ಯತೆಯಿದೆ.





Leave a comment