ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಭಾರಿ ಬಿರುಗಾಳಿ ಎದ್ದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದನ್ನು ವಿರೋಧಿಸಿ, ಜಿಲ್ಲೆಯ ನಿಷ್ಠಾವಂತ ಮುಖಂಡರು ಹೋರಾಟದ ಹಾದಿ ಹಿಡಿದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಹೆಚ್. ಎಸ್. ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಮುಖ ಅಂಶಗಳು:
ಅಸಮಾಧಾನದ ಕಿಚ್ಚು:
ಚುನಾವಣೆಗೂ ಎರಡು ವರ್ಷ ಮೊದಲೇ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದು ರಾಷ್ಟ್ರೀಯ ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಹೊನ್ನಾಳಿಯ ಶಾಂತರಾಜ್ ಪಾಟೀಲ್, ಜಗಳೂರಿನ ಹೆಚ್.ಪಿ. ರಾಜೇಶ್, ಚನ್ನಗಿರಿಯ ಹೆಚ್.ಎಸ್. ಶಿವಕುಮಾರ್ ಸೇರಿದಂತೆ ಅನೇಕ ಆಕಾಂಕ್ಷಿಗಳು ಈ ನಡೆಯನ್ನು ಖಂಡಿಸಿದ್ದಾರೆ.
ಪ್ರಾದೇಶಿಕ ಪಕ್ಷದಂತೆ ವರ್ತನೆ:
“ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಇಲ್ಲಿ ಅಭ್ಯರ್ಥಿಗಳನ್ನು ಕೇಂದ್ರ ಚುನಾವಣಾ ಮಂಡಳಿ ನಿರ್ಧರಿಸಬೇಕು. ಆದರೆ ಬಿಎಸ್ ವೈ ಮತ್ತು ವಿಜೇಂದ್ರ ಹೋದಲ್ಲೆಲ್ಲಾ ಹೆಸರು ಘೋಷಿಸುತ್ತಿರುವುದು ಇದು ಬಿಜೆಪಿ ಪಾರ್ಟಿಯೋ ಅಥವಾ ಅವರ ಪ್ರಾದೇಶಿಕ ಪಕ್ಷವೋ ಎಂಬ ಅನುಮಾನ ಮೂಡಿಸುತ್ತಿದೆ” ಎಂದು ಮುಖಂಡರು ಕಿಡಿಕಾರಿದ್ದಾರೆ.
ಜಿಲ್ಲಾ ನಾಯಕರ ಗೈರು:
ತರಗನಹಳ್ಳಿಯ ವಿ.ಬಿ.ಜಿ. ರಾಮ್‌ಜೀ ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರಮುಖ ನಾಯಕರಾದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ. ಹರೀಶ್ ಗೈರಾಗಿರುವುದು ಪಕ್ಷದಲ್ಲಿನ ‘ಮನೆಯೊಂದು ಮೂರು ಬಾಗಿಲು’ ಸ್ಥಿತಿಯನ್ನು
ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- B. P. HARISH
- B. Y. Vijayendra
- B.S. Yediyurappa
- BJP Internal Rift
- Candidate Announcement Protest
- DAVANAGERE BJP
- G.M. Siddeshwar
- Honnali BJP
- Jagalur BJP News.
- Karnataka Politics
- Shantraj Patil
- ಅಭ್ಯರ್ಥಿಗಳ ಘೋಷಣೆ
- ಕರ್ನಾಟಕ ರಾಜಕೀಯ ಸುದ್ದಿ
- ಜಗಳೂರು ಬಿಜೆಪಿ.
- ಜಿ.ಎಂ. ಸಿದ್ದೇಶ್ವರ್
- ದಾವಣಗೆರೆ ಬಿಜೆಪಿ
- ಬಿ. ಪಿ. ಹರೀಶ್
- ಬಿ.ಎಸ್. ಯಡಿಯೂರಪ್ಪ
- ಬಿ.ವೈ. ವಿಜೇಂದ್ರ
- ಬಿಜೆಪಿ ಬಂಡಾಯ
- ಶಾಂತರಾಜ್ ಪಾಟೀಲ್
- ಹೊನ್ನಾಳಿ ಬಿಜೆಪಿ





Leave a comment