ದಾವಣಗೆರೆ: ದಾವಣಗೆರೆ ನಗರದ ಡಿಸಿಎಂ ಟೌನ್ ಶಿಪ್ ನಾಗರಿಕರ ಸಂಘ ಮತ್ತು ಆರ್ ವಿ ಗ್ಲೋಬಲ್ ರಿಯಾಲ್ಟಿ ಸಂಯುಕ್ತಾಶ್ರಯದಲ್ಲಿ ಮಾರ್ಚ್ 4 ರ ನಾಳೆ ಬಣ್ಣದ ಹೋಳಿ ಹಬ್ಬದ ಪ್ರಯುಕ್ತ ರಂಗ್ ಬರ್ಸೆ ಆಯೋಜಿಸಲಾಗಿದೆ.
ಡಿಸಿಎಂ ಟೌನ್ ಶಿಪ್ ನ ಹನುಮಂತಪ್ಪ ಪಾರ್ಕ್ ನಲ್ಲಿ ಬೆಳಗ್ಗೆ 8.30ಕ್ಕೆ ರಂಗ್ ಬರ್ಸೆ ಸಂಭ್ರಮ ಆರಂಭಗೊಳ್ಳಲಿದೆ. ಇದಕ್ಕಾಗಿ ವೇದಿಕೆ ಸಿದ್ದಪಡಿಸಲಾಗಿದೆ. ಆರ್. ವೈ. ಸೌಂಡ್ಸ್ ಡಿಜೆ ಕೂಡ ಇದ್ದು, ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರ್ ವಿ ಗ್ಲೋಬಲ್ ರಿಯಾಲ್ಟಿ ಮಾಲೀಕರಾದ ಜಿ. ಆರ್. ರಾಘವೇಂದ್ರ ಗೌಡರು, ವಿನಾಯಕ್ ಶಿರೋಳ್ ಅವರು ತಿಳಿಸಿದ್ದಾರೆ.
‘ರಂಗ್ ಬರ್ಸೆ’ ವೈಭವದ ಹೈಲೈಟ್ಸ್
ಸಂಗೀತ ಮತ್ತು ಡಿಜೆ (DJ): ಸ್ಥಳೀಯ ಕ್ಲಬ್‌ಗಳು ಮತ್ತು ಯುವಕರ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನ ಫೇಮಸ್ ಸಾಂಗ್‌ಗಳಿಗೆ ಡಿಜೆ ಮಸ್ತಿ ಇರಲಿದೆ.
ರೇನ್ ಡ್ಯಾನ್ಸ್ (Rain Dance): DCM ಟೌನ್‌ಶಿಪ್ ಮತ್ತು ಸುತ್ತಮುತ್ತಲಿನ ಓಪನ್ ಗ್ರೌಂಡ್‌ಗಳಲ್ಲಿ ಕೃತಕ ಮಳೆಯ ವ್ಯವಸ್ಥೆ ಮಾಡಿ ಯುವಜನತೆ ಕುಣಿದು ಕುಪ್ಪಳಿಸಲು ಅವಕಾಶವಿರುತ್ತದೆ.
ಸಾಂಪ್ರದಾಯಿಕ ಮೆರುಗು: ಕೇವಲ ಬಣ್ಣದಾಟ ಅಷ್ಟೇ ಅಲ್ಲದೆ, ಕೆಲವು ಕಡೆ ಸಾಂಪ್ರದಾಯಿಕ ‘ಹಲಗಿ’ (Halgi) ಬಾರಿಸುವ ಮೂಲಕ ದೇಸಿ ಶೈಲಿಯ ಹೋಳಿ ಆಚರಿಸಲಾಗುತ್ತದೆ.
ಈ ವರ್ಷ ವಿನೂತನ ರೀತಿಯಲ್ಲಿ ಬಣ್ಣ ಬಣ್ಣದ ಬಟ್ಟೆಗಳಿಂದ ಪಾರ್ಕ್ ನಲ್ಲಿ ಅಲಂಕಾರ ಮಾಡಲಾಗಿದ್ದು, ಇದಕ್ಕೆ ದೀಪಗಳನ್ನೂ ಅಳವಡಿಸಲಾಗಿದೆ. ಈಗಾಗಲೇ ಡಿಸಿಎಂ ಟೌನ್ ಶಿಪ್ ಜನರು ಹಬ್ಬವನ್ನು ಆಚರಣೆ ಮಾಡಲು ಖುಷಿಯಿಂದ ಸನ್ನದ್ಧರಾಗಿದ್ದಾರೆ. ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಅಲಂಕಾರದೊಂದಿಗೆ ಹಾಗೂ ಮಡಿಕೆ ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಡಿಸಿಎಂ ಟೌನ್ ಶಿಪ್ ನ ನಾಗಿರಕರ ಸಂಘದ ಗೌರವಾಧ್ಯಕ್ಷ ಟಿ. ಮೂಡಲಗಿರಿಯಪ್ಪ, ಅಧ್ಯಕ್ಷ ಕೆ. ಹೆಚ್. ಮಂಜುನಾಥ್ ರೆಡ್ಡಿ, ಕಾರ್ಯದರ್ಶಿಗಳಾದ ವಿ. ಜಗನ್ಮೋಹನ್, ಖಜಾಂಚಿ ಟಿ. ವೇದಮೂರ್ತಿ, ಚೌಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ನಾಗರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು.
ಮಕ್ಕಳು, ಯುವತಿಯರು, ಮಹಿಳೆಯರು, ಪುರುಷರು, ಯುವಕರು ಸೇರಿದಂತೆ ಎಲ್ಲರೂ ಈ ರಂಗ್ ಬರ್ಸೆ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಡಿಸಿಎಂ ನಾಗರಿಕ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ರಾಘವೇಂದ್ರ ಗೌಡ, ವಿನಾಯಕ ಶಿರೋಳ್ ಅವರು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಬಿಗಿ ಕ್ರಮಗಳು
ದಾವಣಗೆರೆ ಜಿಲ್ಲಾ ಪೊಲೀಸ್ ಈಗಾಗಲೇ ಸೂಚನೆ ನೀಡಿರುವಂತೆ, ಹಬ್ಬದ ಸಂಭ್ರಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ:
ತ್ರಿಪಲ್ ರೈಡಿಂಗ್ ನಿಷೇಧ: ಬೈಕ್‌ಗಳಲ್ಲಿ ಮೂವರು ಸಂಚರಿಸುವುದು ಮತ್ತು ವೀಲಿಂಗ್ ಮಾಡುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ.
ಸೈಲೆನ್ಸರ್ ಅಬ್ಬರ ಬೇಡ: ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರ್‌ಗಳನ್ನು ಬಳಸಿದರೆ ವಾಹನ ಜಪ್ತಿ ಮಾಡುವ ಎಚ್ಚರಿಕೆ ನೀಡಲಾಗಿದೆ.
ಸಮಯದ ಮಿತಿ: ಸಾಮಾನ್ಯವಾಗಿ ಮಧ್ಯಾಹ್ನ 2 ಅಥವಾ 3 ಗಂಟೆಯವರೆಗೆ ಮಾತ್ರ ಸಾರ್ವಜನಿಕವಾಗಿ ಬಣ್ಣದಾಟಕ್ಕೆ ಅವಕಾಶವಿರುತ್ತದೆ.
- Best Holi party in Davanagere.
- Davanagere Holi Celebration 2026
- Davanagere Police Holi Guidelines
- Davanagere Rain Dance
- DCM Township Rang Barse
- DCM ಟೌನ್‌ಶಿಪ್ ರಂಗ್ ಬರ್ಸೆ
- Holi Events in Davanagere
- March 4th Holi Festival
- ಕಾಮನಹಬ್ಬ 2026
- ದಾವಣಗೆರೆ ಬಣ್ಣದ ಹಬ್ಬ
- ದಾವಣಗೆರೆ ಲೇಟೆಸ್ಟ್ ನ್ಯೂಸ್
- ದಾವಣಗೆರೆ ಹೋಳಿ ಹಬ್ಬ 2026
- ರೇನ್ ಡ್ಯಾನ್ಸ್ ದಾವಣಗೆರೆ
- ಹೋಳಿ ಆಚರಣೆ ನಿಯಮಗಳು





Leave a comment