Home ದಾವಣಗೆರೆ ಗೆಳೆತನವೇ ಮದುವೆಯ ಸಪ್ತಪದಿ: ‘ಬೆಸ್ಟ್ ಫ್ರೆಂಡ್’ ಜೀವನ ಸಂಗಾತಿಯಾದಾಗ ಬದುಕು ಹೀಗಿರುತ್ತೆ!: ವಿಜಯ್ ದೇವರಕೊಂಡ ಪೋಸ್ಟ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಗೆಳೆತನವೇ ಮದುವೆಯ ಸಪ್ತಪದಿ: ‘ಬೆಸ್ಟ್ ಫ್ರೆಂಡ್’ ಜೀವನ ಸಂಗಾತಿಯಾದಾಗ ಬದುಕು ಹೀಗಿರುತ್ತೆ!: ವಿಜಯ್ ದೇವರಕೊಂಡ ಪೋಸ್ಟ್!

Share
ವಿಜಯ್ ದೇವರಕೊಂಡ
Share

ಬೆಂಗಳೂರು: ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿರುವವರು ಒಬ್ಬರಿರುತ್ತಾರೆ. ಆದರೆ ಆ ಗೆಳೆತನ ಪ್ರೀತಿಯಾಗಿ, ಆ ಪ್ರೀತಿ ದಾಂಪತ್ಯಕ್ಕೆ ನಾಂದಿ ಹಾಡಿದಾಗ ಸಿಗುವ ಸುಖವೇ ಬೇರೆ. ಇತ್ತೀಚೆಗೆ ಯುವಕನೊಬ್ಬ ತನ್ನ ಆಪ್ತ ಸ್ನೇಹಿತೆಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡ ಭಾವನಾತ್ಮಕ ಕ್ಷಣಗಳನ್ನು ಖ್ಯಾತ ನಟ ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ.

ಕೊಡಗಿನ ಕುವರಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿವಾಹವಾದ ಬಳಿಕ ಮೊದಲ ಪೋಸ್ಟ್ ಮಾಡಿರುವ ವಿಜಯ್ ದೇವರಕೊಂಡ ಅವರು ಮನದುಂಬಿ ಪೋಸ್ಟ್ ಹಾಕಿದ್ದಾರೆ. ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಊಟದ ಮೇಜಿನ ಬಳಿ ಆಕೆ ಕುಳಿತಿದ್ದರೆ ಆ ಊಟಕ್ಕೆ ಒಂದು ಅರ್ಥ ಸಿಗುತ್ತದೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಅವಳಿದ್ದರೆ ಶಿಕ್ಷೆಯಂತೆ ಕಾಣುವ ಕಸರತ್ತು ಕೂಡ ಸಂಭ್ರಮದಂತೆ ಭಾಸವಾಗುತ್ತದೆ” ಎಂದು ತನ್ನ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.

ದೂರವಿದ್ದಾಗ ಕಾಡುವ ಆ ಒಂಟಿತನ ಮತ್ತು ಜೊತೆಗಿದ್ದಾಗ ಸಿಗುವ ಆ ಮನೆಯಂತಹ ನೆಮ್ಮದಿಯೇ ತನ್ನ ಸ್ನೇಹಿತೆಯನ್ನು ಪತ್ನಿಯನ್ನಾಗಿ ಮಾಡಿಕೊಳ್ಳಲು ಪ್ರೇರಣೆ ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ.

ಕೇವಲ ಪ್ರೇಮಿಗಳಾಗುವುದಕ್ಕಿಂತ, ಪರಸ್ಪರ ಅರ್ಥಮಾಡಿಕೊಂಡ ಇಬ್ಬರು ಸ್ನೇಹಿತರು ದಂಪತಿಗಳಾದಾಗ ಜೀವನ ಹೆಚ್ಚು ಸೊಗಸಾಗಿರುತ್ತದೆ ಎಂಬುದಕ್ಕೆ ನಮ್ಮ ಜೋಡಿಯೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *