Home ದಾವಣಗೆರೆ ದಾವಣಗೆರೆ ರೈಲ್ವೆ ಮತ್ತು ನೀರಾವರಿ ಅಭಿವೃದ್ಧಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲ್ಲಿಸಿದ ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ದಾವಣಗೆರೆ ರೈಲ್ವೆ ಮತ್ತು ನೀರಾವರಿ ಅಭಿವೃದ್ಧಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲ್ಲಿಸಿದ ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಸಮೀಪದ ತೋಳಹುಣಸೆ ರೈಲ್ವೆ ನಿಲ್ದಾಣದಲ್ಲಿ ಮೋಟಾರ್ ಟ್ರ್ಯಾಲಿ ಮೂಲಕ ದಾವಣಗೆರೆ–ತುಮಕೂರು ಹೊಸ ರೈಲ್ವೆ ಮಾರ್ಗದ ಜೊತೆಗೆ ತೋಳಹುಣಸೆ–ಆನಗೋಡು ಹಾಗೂ ಆನಗೋಡು– ಹೆಬ್ಬಾಳು ಸಂಪರ್ಕ ಮಾರ್ಗಗಳ ಸ್ಥಳ ಪರಿಶೀಲನೆ ಕೈಗೊಳ್ಳಲಾಯಿತು.

ದಾವಣಗೆರೆ–ತುಮಕೂರು ಹೊಸ ರೈಲು ಮಾರ್ಗ ಯೋಜನೆಯ ಹಿನ್ನೆಲೆಯಲ್ಲಿ ಮೋಟಾರ್ ಟ್ರ್ಯಾಲಿ ಮೂಲಕ ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಮಾರ್ಗ ಪರಿಶೀಲನೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠಲರಾವ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳು:

ಹೊಸ ಸೇವೆಗಳು:

 ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಆರಂಭಿಸಬೇಕು.

ಕರ್ನಾಟಕದಿಂದ ಜಮ್ಮು-ಕಾಶ್ಮೀರದವರೆಗೆ (ಬೆಂಗಳೂರು–ಹುಬ್ಬಳ್ಳಿ ಮೂಲಕ ಕತ್ರಾಕ್ಕೆ) ದೀರ್ಘದೂರದ ರೈಲು ಸಂಚಾರ ಆರಂಭಿಸಬೇಕು.

ರೈಲು ನಿಲುಗಡೆ ಮತ್ತು ವಿಸ್ತರಣೆ:

ಮಾಯಕೊಂಡ ನಿಲ್ದಾಣದಲ್ಲಿ ರೈಲು ಸಂಖ್ಯೆ 12725/26 ಮತ್ತು 17325/26 ಗಳಿಗೆ ನಿಲುಗಡೆ ನೀಡಬೇಕು.

ಹುಬ್ಬಳ್ಳಿ-ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ವರೆಗೆ ವಿಸ್ತರಿಸಬೇಕು.

ಬೆಳಗಾವಿ-ಮೈಸೂರು ರೈಲು (17302) ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು.

ಮೂಲಸೌಕರ್ಯ ಮತ್ತು ಸುಧಾರಣೆ:

ದಾವಣಗೆರೆ-ಹರಿಹರ-ಬಳ್ಳಾರಿ ಡೆಮು (DEMU) ರೈಲಿನಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು.

ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ಮೇಲ್ಛಾವಣಿ ಮತ್ತು ಪ್ಲಾಟ್‌ಫಾರ್ಮ್ ವಿಸ್ತರಣೆ ಮಾಡಬೇಕು.

ದಾವಣಗೆರೆ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಯನ್ನು ವೇಗಗೊಳಿಸಬೇಕು.

ಹರಿಹರ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಬೇಕು.

ಮಾನವೀಯ ನೆಲೆಯ ಬೇಡಿಕೆ: ರೈಲ್ವೆಗೆ ಭೂಮಿ ನೀಡಿದ ಸಂತ್ರಸ್ತೆ ಶ್ರೀಮತಿ ರೇಣುಕಾ ಅವರಿಗೆ ದಯಾಪಾಲನಾ ಆಧಾರದ ಮೇಲೆ ಉದ್ಯೋಗ ನೀಡಬೇಕು.

ಜಲಶಕ್ತಿ ಇಲಾಖೆಗೆ (ನೀರಾವರಿ) ಸಂಬಂಧಿಸಿದ ಬೇಡಿಕೆಗಳು:

ಭದ್ರಾ ನಾಲೆಗಳ ಆಧುನೀಕರಣದ ಬಗ್ಗೆ ಸಂಸದರು ವಿಶೇಷ ಒತ್ತು ನೀಡಿದ್ದಾರೆ:

ಹೂಳು ತೆಗೆಯುವುದು: ಕಾಲುವೆಗಳಲ್ಲಿ ಜಮಾವಣೆಗೊಂಡಿರುವ ಹೂಳನ್ನು ತೆಗೆಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಬೇಕು.

ಕೊನೆಯ ಭಾಗದ ರೈತರಿಗೆ ನೆರವು: ಸಮರ್ಪಕ ನಿರ್ವಹಣೆ ಇಲ್ಲದೆ ನೀರು ತಲುಪದ ಸುಮಾರು 14,086 ಎಕರೆ ಭೂಮಿಗೆ (Tail-end ಪ್ರದೇಶ) ನೀರಾವರಿ ಸೌಲಭ್ಯ ಸಿಗುವಂತೆ ಮಾಡಬೇಕು.

ದುರಸ್ತಿ ಕಾರ್ಯ: 60 ವರ್ಷ ಹಳೆಯದಾದ ಮತ್ತು ಜೀರ್ಣಾವಸ್ಥೆಯಲ್ಲಿರುವ ನೀರು ನಿಯಂತ್ರಣ ಕಾಮಗಾರಿಗಳನ್ನು ಸರಿಪಡಿಸಿ, ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು.

ನಂತರ ಆನಗೋಡು ಗ್ರಾಮದಲ್ಲಿ ಆಯೋಜಿಸಲಾದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ವಿಷಯಗಳ ಕುರಿತಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles