Home ದಾವಣಗೆರೆ ಈ ಬಾರಿ ಭಾರೀ ಬೇಸಿಗೆ: ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಮಹತ್ವದ ಸಲಹೆ
ದಾವಣಗೆರೆಬೆಂಗಳೂರು

ಈ ಬಾರಿ ಭಾರೀ ಬೇಸಿಗೆ: ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಮಹತ್ವದ ಸಲಹೆ

Share
ಬೇಸಿಗೆ
Share

ದಾವಣಗೆರೆ: ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಬೇಸಿಗೆಯ ತಾಪಮಾನ ಹಾಗೂ ಶಾಖದ ಅಲೆ (Heatwave) ಹೆಚ್ಚಾಗುವ ಸಂಭವವಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನಿಗೆ ಸೂಚನೆಗಳನ್ನು ನೀಡಿದ್ದಾರೆ.

ಶಾಖಾಘಾತದಿಂದ (Heatstroke) ಪಾರಾಗಲು ಸಡಿಲವಾದ ಹತ್ತಿ ಬಟ್ಟೆ ಧರಿಸುವುದು, ಹೆಚ್ಚಿನ ಪ್ರಮಾಣದ ನೀರು, ಮಜ್ಜಿಗೆ ಹಾಗೂ ಎಳೆನೀರು ಸೇವಿಸುವುದು ಮತ್ತು ಮಧ್ಯಾಹ್ನದ ವೇಳೆಯಲ್ಲಿ ಅನಗತ್ಯವಾಗಿ ಹೊರಹೋಗುವುದನ್ನು ತಪ್ಪಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ. ಒಂದು ವೇಳೆ ಅತಿಯಾದ ಸುಸ್ತು, ವಾಂತಿ ಅಥವಾ ಪ್ರಜ್ಞೆ ತಪ್ಪುವ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ 104 ಸಹಾಯವಾಣಿ ಅಥವಾ ಹತ್ತಿರದ ವೈದ್ಯರನ್ನು ಸಂಪರ್ಕಿಸಲು ಕೋರಿದ್ದಾರೆ.

ಏನು ಮಾಡಬೇಕು?:

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮತ್ತು ದೇಹವನ್ನು ತಂಪಾಗಿರಿಸಲು ಈ ಕ್ರಮಗಳನ್ನು ಅನುಸರಿಸಿ:

ಉಡುಪು:

ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಗಾಳಿಯಾಡುವ ಪಾದರಕ್ಷೆಗಳನ್ನು ಬಳಸಿ.

ಜಲಸಂಚಯನ (Hydration):

ಬಾಯಾರಿಕೆಯಾಗದಿದ್ದರೂ ಆಗಾಗ್ಗೆ ನೀರು ಕುಡಿಯಿರಿ. ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ, ಮಜ್ಜಿಗೆ ಮತ್ತು ಎಳೆನೀರು

ಉತ್ತಮ ಆಹಾರ:

ಮನೆಯಲ್ಲಿ ತಯಾರಿಸಿದ ತಾಜಾ, ಸಾತ್ವಿಕ ಮತ್ತು ಮಸಾಲೆ ರಹಿತ ಆಹಾರ ಸೇವಿಸಿ.

ಶುಚಿತ್ವ:

ಊಟಕ್ಕೆ ಮೊದಲು ಕೈಗಳನ್ನು 45 ಸೆಕೆಂಡ್‌ಗಳ ಕಾಲ ಸಾಬೂನಿನಿಂದ ತೊಳೆಯಿರಿ. ಕುದಿಸಿ ಆರಿಸಿದ ಅಥವಾ ಶುದ್ಧೀಕರಿಸಿದ ನೀರನ್ನೇ ಕುಡಿಯಿರಿ.

ಪ್ರಥಮ ಚಿಕಿತ್ಸೆ:

ಯಾರಾದರೂ ಬಿಸಿಲಿನಿಂದ ಸುಸ್ತಾದರೆ, ಅವರನ್ನು ನೆರಳಿನಲ್ಲಿ ಮಲಗಿಸಿ, ಕಾಲುಗಳನ್ನು ಮೇಲಕ್ಕೆತ್ತಿ, ಒದ್ದೆ ಬಟ್ಟೆಯಿಂದ ಮೈ ಒರೆಸಿ.

ಏನು ಮಾಡಬಾರದು?:

ಆರೋಗ್ಯದ ದೃಷ್ಟಿಯಿಂದ ಈ ಕೆಳಗಿನವುಗಳನ್ನು ತಪ್ಪಿಸುವುದು ಒಳ್ಳೆಯದು:

ಪಾನೀಯಗಳು:

ಅತಿಯಾದ ಕಾಫಿ, ಟೀ, ಮದ್ಯಪಾನ ಮತ್ತು ಸೋಡಾ ಯುಕ್ತ ತಂಪು ಪಾನೀಯಗಳನ್ನು ಸೇವಿಸಬೇಡಿ.

ಆಹಾರ:

ರಸ್ತೆ ಬದಿಯ ತೆರೆದಿಟ್ಟ ಆಹಾರ, ಕತ್ತರಿಸಿದ ಹಣ್ಣುಗಳು, ಮಾಂಸಾಹಾರ ಮತ್ತು ಅತಿಯಾದ ಮಸಾಲೆಯುಕ್ತ ಪದಾರ್ಥಗಳನ್ನು ವರ್ಜಿಸಿ.

ಉಡುಪು:

ಬಿಗಿಯಾದ, ಗಾಢ ಬಣ್ಣದ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬೇಡಿ.

ಬಿಸಿಲಿನಿಂದ ಸುಸ್ತಾದಾಗ ಅತಿಯಾದ ತಣ್ಣೀರು ಅಥವಾ ಐಸ್ ನೀರಿನಿಂದ ಮೈ ಒರೆಸಬೇಡಿ (ಇದು ದೇಹದ ಒಳಗಿನ ಉಷ್ಣತೆಯನ್ನು ಹಾಗೆಯೇ ಹಿಡಿದಿಟ್ಟು ಅಂಗಾಂಗಗಳಿಗೆ ಹಾನಿ ಮಾಡಬಹುದು).

ಶಾಖಾಘಾತದ (Heatstroke) ಲಕ್ಷಣಗಳು ಮತ್ತು ಚಿಕಿತ್ಸೆ:

ಪ್ರಜ್ಞೆ ತಪ್ಪುವುದು ಅಥವಾ ಮಂಕು ಕವಿಯುವುದುಬಟ್ಟೆಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ. ತೀವ್ರ ಉಸಿರಾಟ ಮತ್ತು ಚರ್ಮ ಕೆಂಪಾಗುವುದು ಸಾಮಾನ್ಯ. ನೀರಿನಿಂದ ಮೈ ಒರೆಸಿ (ಐಸ್ ನೀರು ಬೇಡ). ಬೆವರು ನಿಂತು ದೇಹದ ಉಷ್ಣತೆ ಏರುವುದುಕೂಡಲೇ 104 ಕ್ಕೆ ಕರೆ ಮಾಡಿ ಅಥವಾ ವೈದ್ಯರನ್ನು ಸಂಪರ್ಕಿಸಿ.

Share

Leave a comment

Leave a Reply

Your email address will not be published. Required fields are marked *