Home ಉದ್ಯೋಗ ವಾರ್ತೆ ಅಗ್ನಿವೀರ್ ನೇಮಕಾತಿ 2027: ದಾವಣಗೆರೆ ಸೇರಿ 11 ಜಿಲ್ಲೆಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಅಗ್ನಿವೀರ್ ನೇಮಕಾತಿ 2027: ದಾವಣಗೆರೆ ಸೇರಿ 11 ಜಿಲ್ಲೆಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Share
ದಾವಣಗೆರೆ
Share

ಬೆಂಗಳೂರು: ಭಾರತೀಯ ಸೇನೆಯಲ್ಲಿ ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿಗಾಗಿ ಕರ್ನಾಟಕದ 11 ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಜಿಲ್ಲೆಗಳು:

ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಯುವಕರು ಈ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಕೆ ವಿವರ:

ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ಪೋರ್ಟಲ್ www.joinindianarmy.nic.in ಮೂಲಕ ಏಪ್ರಿಲ್ 01 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠ ತಿಳಿಸಿದ್ದಾರೆ.

ಸಂಪರ್ಕ ಮಾಹಿತಿ:

ಹೆಚ್ಚಿನ ವಿವರಗಳಿಗಾಗಿ ಮಂಗಳೂರು ಸೇನಾ ನೇಮಕಾತಿ ಕಚೇರಿಯ ದೂರವಾಣಿ ಸಂಖ್ಯೆ: 0824-2458376 ಅಥವಾ ಮೊಬೈಲ್: 7411497644 ಅನ್ನು ಸಂಪರ್ಕಿಸಬಹುದು.

ಎಚ್ಚರಿಕೆ:

ಸೇನಾ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳ ದೈಹಿಕ ಕ್ಷಮತೆ ಮತ್ತು ಅರ್ಹತೆಯ ಮೇಲೆ ಮಾತ್ರ ಆಯ್ಕೆ ನಡೆಯುತ್ತದೆ. ಯಾರಾದರೂ ಕೆಲಸ ಕೊಡಿಸುವುದಾಗಿ ಲಂಚದ ಬೇಡಿಕೆ ಇಟ್ಟರೆ ಅಥವಾ ಆಮಿಷ ಒಡ್ಡಿದರೆ ಅಂತಹ ಏಜೆಂಟ್‌ಗಳ ಮಾತಿಗೆ ಮರುಳಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *