ದಾವಣಗೆರೆ: ನಗರದ ಲೇಬರ್ ಕಾಲೋನಿಯಲ್ಲಿರುವ ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಫೆಬ್ರವರಿ 17 ರಿಂದ 20 ರ ವರೆಗೆ ಶ್ರೀ ಕರಿಬಸವೇಶ್ವರ ದೇವರ (ಉಕ್ಕಡಗತ್ರಿ ಅಜ್ಜಯ್ಯ ) ಜಾಗರಣಾ ಮತ್ತು ಜಾತ್ರೆ ಮತ್ತು ಶಿವಾರಾತ್ರಿ ಮೊಹೋತ್ಸವ ನಡೆಯಲಿದೆ.
ಶ್ರೀ ಕರಿಬಸವೇಶ್ವರ ಜಾಗರಣೆ ಮತ್ತು ಜಾತ್ರಾ ಮಹೋತ್ಸವ – 2026
ಸ್ಥಳ: ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನ, ಲೇಬರ್ ಕಾಲೋನಿ, ದಾವಣಗೆರೆ.
ದಿನಾಂಕ: ಫೆಬ್ರವರಿ 17 ರಿಂದ ಫೆಬ್ರವರಿ 20 ರವರೆಗೆ.
ಪ್ರಮುಖ ದಿನಾಂಕಗಳು:
ಫೆ. 17: ಮಹಾರುದ್ರಾಭಿಷೇಕ & ಭಜನಾ ಜಾಗರಣೆ.
ಫೆ. 18: ಸ್ವಾಮಿಯ ಉತ್ಸವ ಮೆರವಣಿಗೆ & ಮಹಾ ದಾಸೋಹ.
ಫೆ. 20: ಮಹಾ ಪೂಜೆ ಮತ್ತು ಪಲಾರ ವಿನಿಯೋಗ
ಫೆಬ್ರವರಿ 17ರಂದು ಬೆಳಿಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ ನಂತರ ಮಹಾ ಮಹಾ ಮಂಗಳಾರತಿ ನಡೆಯಲಿದೆ. ಸಂಜೆ 7 ಗಂಟೆಗೆ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮದಿಂದ ಜಾಗರಣೆ ಪ್ರಾರಂಭವಾಗಲಿದೆ.
ಬುಧುವಾರ 18ರಂದು ಬೆಳಿಗ್ಗೆ, ಮಹಾ ಪೂಜೆ ನಂತರ ವಾದ್ಯ ವೈಭವಗಳೊಂದಿಗೆ. ಸ್ವಾಮಿಯ ಉತ್ಸವ ಮೆರವಣಿಗೆ ನಂತರ ಮದ್ಯಾಹ್ನ ಒಂದು ಗಂಟೆಗೆ ಮಹಾ ಪ್ರಸಾದ ಸಂತರ್ಪಣೆ ನಡೆಯಲಿದೆ.
19 ಗುರುವಾರ ಬೆಳಿಗ್ಗೆ ಪೂಜೆ ಮತ್ತು ಪಲರಾ ಹಾಕಿಸಲಾಗುತ್ತದೆ. 20 ಶುಕ್ರವಾರ ಸಂಜೆ ಮಹಾ ಪೂಜೆ ನಂತರ ಪಲಾರ ಹಂಚಲಾಗುತ್ತದೆ. ಎಲ್ಲಾ ಸದ್ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ. ಎನ್. ಶ್ರೀನಿವಾಸ್ ಮತ್ತು ಕಾರ್ಯದರ್ಶಿ ಹಾಗೂ ಪ್ರಧಾನ ಅರ್ಚಕ ಪಿ. ಎನ್. ಲೊಕೇಶಪ್ಪ ವಿನಂತಿಸಿದ್ದಾರೆ.
- Devotional Events Davanagere.
- Labour Colony Temple Festival
- Mahaprasada Dasoha
- Shivaratri 2026 Davanagere
- Shree Karibasaveshwara Jathre Davanagere
- Temple Fair Karnataka
- Ukkadagatri Ajjayya Jagarane
- ಉಕ್ಕಡಗತ್ರಿ ಅಜ್ಜಯ್ಯ ಜಾಗರಣೆ
- ದಾವಣಗೆರೆ ದೇವಸ್ಥಾನದ ಕಾರ್ಯಕ್ರಮಗಳು
- ದಾವಣಗೆರೆ ಲೇಬರ್ ಕಾಲೋನಿ
- ಮಹಾಪ್ರಸಾದ ಸಂತರ್ಪಣೆ
- ಶಿವರಾತ್ರಿ ಮಹೋತ್ಸವ 2026
- ಶ್ರೀ ಕರಿಬಸವೇಶ್ವರ ಜಾತ್ರೆ
- ಶ್ರೀನಿವಾಸ್ ಮತ್ತು ಲೋಕೇಶಪ್ಪ





Leave a comment