ದಾವಣಗೆರೆ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನೋವೆಲ್ ಹೋಪ್ ಫೌಂಡೇಶನ್ ಹಾಗೂ ಜನ ಸೇವಾ ಸಮೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಉಚಿತ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಹಿರೇಮೆಗಳಗೆರೆಯ ಜನತಾ ಪ್ರೌಢ ಶಾಲೆಯಿಂದ ಆರಂಭವಾದ ಈ ಅಭಿಯಾನವು ನಂತರ ಚಿಕ್ಕಮೇಗಳಗೆರೆ ಮತ್ತು ಬಸಾಪುರ ಶಾಲೆಗಳಿಗೂ ವಿಸ್ತರಿಸಿತು. ಒಟ್ಟು 811 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ಗಳನ್ನು ನೀಡಲಾಯಿತು.
ನೋವೆಲ್ ಹೋಪ್ ಫೌಂಡೇಶನ್ನ ಸೀನಿಯರ್ CSR ಎಕ್ಸಿಕ್ಯುಟಿವ್ ದೀಪಕ್ ಆರ್. ಅವರು ಮಾತನಾಡಿ, ಸಂಸ್ಥೆಯ ಸಮಾಜ ಸೇವಾ ಉದ್ದೇಶಗಳು ಮತ್ತು ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ಯಾಮ್ ಸುಂದರ್, SDMC ಅಧ್ಯಕ್ಷ ದೊಡ್ಡಜ್ಜರ ಹನುಮಂತಪ್ಪ, ಟ್ರಸ್ಟ್ ಅಧ್ಯಕ್ಷ ಸಿದ್ದಾರ್ಥ್, ಉಪಾಧ್ಯಕ್ಷ ಮನೋಜ್, ಕಾರ್ಯದರ್ಶಿ ವೀರೇಶ್ ಹಳ್ಳಳ್ಳಿ ಹಾಗೂ ಗ್ರಾಮದ ಮುಖಂಡರು ಮತ್ತು ಶಾಲಾ ಶಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





Leave a comment