ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯ ನಿರ್ವಹಿಸಿದ್ದ ಉಮಾ ಪ್ರಶಾಂತ್ ಅವರದ್ದು ಸಹಜ ವರ್ಗಾವಣೆ.
ಉಮಾ ಪ್ರಶಾಂತ್ ಅವರ ಗಮನಾರ್ಹ ಸಾಧನೆಗಳು
ದಾವಣಗೆರೆಯಲ್ಲಿ ಅವರ ಅಧಿಕಾರಾವಧಿಯು ಸಾಕಷ್ಟು ಚರ್ಚೆಗೆ ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು.
ಡ್ರಗ್ಸ್ ಮಾಫಿಯಾ ವಿರುದ್ಧ ಸಮರ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ಸಿಂಥೆಟಿಕ್ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.
ರಾಜಕೀಯ ಪ್ರಭಾವಕ್ಕೆ ಮಣಿಯದ ಕ್ರಮ: ಡ್ರಗ್ಸ್ ಕೇಸ್ ಹಾಗೂ ಪೊಲೀಸ್ ಅಧಿಕಾರಿಯ ಮೇಲೆ ನಡೆದ ಹಲ್ಲೆ ಪ್ರಕರಣಗಳಲ್ಲಿ ರಾಜಕೀಯ ಮುಖಂಡರ ಆಪ್ತರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿದಿದ್ದರು.
ಅಯೂಬ್ ಪೈಲ್ವಾನ್ ಪುತ್ರರ ಬಂಧನ: ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಗಾಯತ್ರಿ ಅವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳ ಪುತ್ರರನ್ನು ಜೈಲಿಗಟ್ಟುವ ಮೂಲಕ ಅವರು ಸುದ್ದಿಯಾಗಿದ್ದರು.
ನ್ಯಾಮತಿಯ ಎಸ್ ಬಿಐ ಬ್ಯಾಂಕ್ ದರೋಡೆ ಸಂಬಂಧಿಸಿದಂತೆ ಬರೋಬ್ಬರಿ 17 ಕೋಟಿ ರೂಪಾಯಿಗೂ ಹೆಚ್ಚು ಚಿನ್ನಾಭರಣ ವಶಪಡಿಸಿಕೊಂಡಿದ್ದು ಅತಿ ದೊಡ್ಡ ಬೇಟೆಯಾಗಿತ್ತು. ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನೂ ಸೆದೆಬಡಿಯಲ್ಲಿ ಯಶಸ್ವಿಯಾಗಿದ್ದರು.
ರೌಡಿಶೀಟರ್ ಕಣ್ಮ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಕೇಸ್ ನಲ್ಲಿ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು ಸಹ ರಾಜ್ಯದ ಗಮನ ಸೆಳೆದಿತ್ತು.
ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶೇಖರ್ ಹೆಚ್. ಟೆಕ್ಕಣ್ಣನವರ್ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಉಮಾ ಪ್ರಶಾಂತ್ ಅವರಿಗೆ ಸ್ಥಳ ತೋರಿಸಿಲ್ಲ.
ರಾಜ್ಯ ಸರ್ಕಾರವು ಇಂದು ಆದೇಶ ಹೊರಡಿಸಿದ್ದು, ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಡ್ರಗ್ಕ್ ಮಾಫಿಯಾ ವಿರುದ್ಧ ಸಮರ ಸಾರಿದ್ದ ಉಮಾ ಪ್ರಶಾಂತ್ ಅವರು ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಿದ್ದರು.
ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಗಾಯತ್ರಿ ಅವರ ಮೇಲೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ, ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರ ಮೂವರು ಪುತ್ರರನ್ನು ಎಳೆದುಕೊಂಡು ಜೈಲಿಗಟ್ಟಲಾಗಿತ್ತು.
- Ayub Pailwan Case
- Davanagere New SP
- Davanagere SP Transfer
- Drug Mafia Davanagere
- Intelligence SP.
- Karnataka Government Order
- Karnataka Police Transfer
- Shekar H Tekkannavar
- Uma Prashanth IPS
- ಅಯೂಬ್ ಪೈಲ್ವಾನ್
- ಉಮಾ ಪ್ರಶಾಂತ್ ವರ್ಗಾವಣೆ
- ಕರ್ನಾಟಕ ಪೊಲೀಸ್ ವರ್ಗಾವಣೆ
- ಡ್ರಗ್ಸ್ ಮಾಫಿಯಾ
- ದಾವಣಗೆರೆ
- ದಾವಣಗೆರೆ ಹೊಸ ಎಸ್ಪಿ
- ಪೊಲೀಸ್ ಇಲಾಖೆ
- ರಾಜ್ಯ ಸರ್ಕಾರ
- ಶೇಖರ್ ಹೆಚ್ ಟೆಕ್ಕಣ್ಣನವರ್





Leave a comment