ಭಾರತೀಯ ತೈಲ ನಿಗಮ ನಿಯಮಿತ (IOCL) ತನ್ನ ಪಾಣಿಪತ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ಖಾಲಿ ಇರುವ 637 ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಐಟಿಐ (ITI), ಡಿಪ್ಲೊಮಾ ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.ಉದ್ಯೋಗಾವಕಾಶದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಮುಖ ವಿವರಗಳು:
ಸಂಸ್ಥೆಯ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಒಟ್ಟು ಹುದ್ದೆಗಳು: 637
ಉದ್ಯೋಗ ಸ್ಥಳ:
ಪಾಣಿಪತ್ (ಹರಿಯಾಣ), ದೆಹಲಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2026
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್):
10ನೇ ತರಗತಿ ಜೊತೆಗೆ ಐಟಿಐ (ಫಿಟ್ಟರ್).
ಟೆಕ್ನಿಷಿಯನ್ ಅಪ್ರೆಂಟಿಸ್:
ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ (ಕೆಮಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್).
ಅಟೆಂಡೆಂಟ್ ಆಪರೇಟರ್:
ಬಿ.ಎಸ್ಸಿ (ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ).
ಡೇಟಾ ಎಂಟ್ರಿ ಆಪರೇಟರ್:
12ನೇ ತರಗತಿ ಉತ್ತೀರ್ಣ.
ಅಕೌಂಟೆಂಟ್/ಸೆಕ್ರೆಟೇರಿಯಲ್ ಅಸಿಸ್ಟೆಂಟ್:
ಬಿ.ಕಾಂ/ಬಿ.ಎ/ಬಿ.ಎಸ್ಸಿ ಪದವಿ.
ವಯೋಮಿತಿ (31-01-2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ.
ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಯಾವುದೇ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ, ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.





Leave a comment