ದಾವಣಗೆರೆ: ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಕಡ್ಡಾಯವಾಗಿ ನಾಡಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಂದ ಹಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ದಾವಣಗೆರೆ ಜಿಲ್ಲಾ ಶಿಕ್ಷಣ ಇಲಾಖೆಯ ಪ್ರಮುಖ ಸೂಚನೆಗಳು:
ನಾಡಗೀತೆ ಕಡ್ಡಾಯ: ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸಂಪೂರ್ಣ ನಾಡಗೀತೆಯನ್ನು ಮಕ್ಕಳಿಂದ ಹಾಡಿಸುವುದು.
ಕನ್ನಡ ನಾಮಫಲಕಗಳು: ಶಾಲಾ ವಾಹನಗಳು ಹಾಗೂ ಶಾಲೆಯ ಮುಖ್ಯ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗಬೇಕು.
ಪಾರದರ್ಶಕತೆ: ಶಾಲಾ ಶುಲ್ಕದ ವಿವರಗಳನ್ನು ಪ್ರವೇಶದ್ವಾರದಲ್ಲೇ ಪ್ರದರ್ಶಿಸುವುದು ಪೋಷಕರಿಗೆ ಅನುಕೂಲಕರವಾಗಲಿದೆ.
ಕನ್ನಡ ಕಲಿಕೆ ಮತ್ತು ಬಳಕೆ: ಮಕ್ಕಳು ಕನ್ನಡದಲ್ಲಿ ಓದುವುದು, ಬರೆಯುವುದು ಮಾತ್ರವಲ್ಲದೆ, ಶಾಲಾ ಆವರಣದಲ್ಲಿ ಕನ್ನಡದಲ್ಲೇ ಮಾತನಾಡುವುದನ್ನು ರೂಢಿಸಿಕೊಳ್ಳಲು ಒತ್ತು ನೀಡಲಾಗಿದೆ.
ಎಲ್ಲಾ ಅನುದಾನಿತ ಹಾಗೂ ಅನುದಾನಿತ ರಹಿತ ಶಾಲಾ ಮಕ್ಕಳ ವಾಹನಗಳ ಮೇಲೆ ಕನ್ನಡದಲ್ಲಿ ನಾಮಫಲಕ ಹಾಕುವುದು, ಶಾಲೆಗಳ ನಾಮಫಲಕಗಳು ಕನ್ನಡದಲ್ಲಿ ಇರತಕ್ಕದ್ದು ಹಾಗೂ ಶಾಲಾ ಶುಲ್ಕ ವಿವರಗಳ ಬಗ್ಗೆ ಶಾಲೆಯ ಪ್ರವೇಶದ್ವಾರದಲ್ಲಿ ದೊಡ್ಡದಾಗಿ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವುದು, ಪ್ರತಿಯೊಬ್ಬ ಮಗುವು ಕನ್ನಡವನ್ನು ಕಡ್ಡಾಯವಾಗಿ ಓದುವುದು, ಬರೆಯುವುದನ್ನು ರೂಢಿಸುವುದು, ಶಾಲಾ ಆವರಣದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ
ಮಾತನಾಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಗೌರವ ಹೆಚ್ಚಿಸುವ ಅಭಿಮಾನ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಶಾಲಾ ಹಂತದಲ್ಲಿ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೊಟ್ರೇಶ್ ತಿಳಿಸಿದ್ದಾರೆ.
- Davanagere Education Department.
- Davanagere School Rules
- DDPI Davanagere
- Kannada Compulsory Speaking
- Kannada Language Promotion
- Kannada Signboards Schools
- Mandatory Nadageethe
- School Bus Kannada Plates
- School Fee Display Policy
- ಕನ್ನಡ ನಾಮಫಲಕ
- ಕನ್ನಡ ಭಾಷೆ ಮತ್ತು ಸಂಸ್ಕೃತಿ
- ಕನ್ನಡ ಮಾತು ಕಡ್ಡಾಯ
- ಜಿ. ಕೊಟ್ರೇಶ್ ಆದೇಶ
- ದಾವಣಗೆರೆ ಶಾಲೆಗಳು
- ದಾವಣಗೆರೆ ಶಿಕ್ಷಣ ಇಲಾಖೆ
- ನಾಡಗೀತೆ ಕಡ್ಡಾಯ
- ಶಾಲಾ ವಾಹನ ನಿಯಮ
- ಶಾಲಾ ಶುಲ್ಕ ಪ್ರದರ್ಶನ





Leave a comment