ದಾವಣಗೆರೆ: ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಟೋನಿಲ್ದಾಣದ ಬಳಿ ನಡೆದ ಗಲಾಟೆ ಮತ್ತು ಚಿಗಟೇರಿ ಜಿಲ್ಲಾಸ್ಪತ್ರೆ ಬಳಿಯ ಘರ್ಷಣೆ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 4ಕ್ಕೇರಿದೆ.
ಕಾಂಗ್ರೆಸ್ ಮುಖಂಡ ಹಾಗೂ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸೇನ್ ಪೈಲ್ವಾನ್ ಹಾಗೂ ಪೈಜಾನ್ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳಾದ ಅಬ್ರಾರ್ ಹಾಗೂ ಅಯಾನ್ ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.
ಶೀಘ್ರದಲ್ಲೇ ಉಳಿದ ಆರೋಪಿಗಳ ಬಂಧನ:
ಅಯೂಪ್ ಪೈಲ್ವಾನ್ ಮತ್ತೊಬ್ಬ ಪುತ್ರ ಹುಸೇನ್ ಪೈಲ್ವಾನ್ ಸೇರಿದಂತೆ ಇತರೆ ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಕ್ರಿಕೆಟ್ ಕಾರಣಕ್ಕೆ ಕಿರಿಕ್:
ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಆಟೋ ನಿಲ್ದಾಣದ ಬಳಿ ಗಲಾಟೆಯಾಗಿತ್ತು. ಮತ್ತೆ ಚಿಗಟೇರಿ ಆಸ್ಪತ್ರೆಯಲ್ಲಿ ಮುಖಾಮುಖಿಯಾದಾಗ ಮತ್ತೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ವೃತ್ತ ನಿರೀಕ್ಷಕಿ ಗಾಯತ್ರಿ, ಪೊಲೀಸ್ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಮೊಬೈಲ್ ಕಸಿದುಕೊಂಡು ದುರ್ವರ್ತನೆ, ಗೂಂಡಾಗಿರಿ ಪ್ರದರ್ಶಿಸಿದ್ದ ಅಯೂಬ್ ಪೈಲ್ವಾನ್ ಪುತ್ರ ಹಸೇನ್ ಪೈಲ್ವಾನ್ ನನ್ನು ಈಗಾಗಲೇ ಬಂಧಿಸಲಾಗಿದೆ.
ಕ್ರಿಕೆಟ್ ಆಟದಲ್ಲಿನ ಸೋಲಿಗೆ ಸಂಬಂಧಿಸಿದಂತೆ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಾಕಿತ್ತು. ಇದಕ್ಕೆ ಪ್ರತಿಕ್ರಿಯಾಗಿ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದಲ್ಲಿ ಆರಂಭವಾದ ಗಲಾಟೆ ಇಲ್ಲಿಯವರೆಗೆ ಬಂದು ನಿಂತಿದೆ. ಆರೋಪಿತರ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
- assault on police officers
- Ayub Pailwan son arrested
- Azad Nagar police station clash
- Chigateri hospital violence
- Davanagere cricket fight
- Davanagere crime news today.
- Davanagere Police attack case
- DAVANAGERE SP UMA PRASHANTH
- Hasen Pailwan arrest
- ಅಯೂಬ್ ಪೈಲ್ವಾನ್ ಪುತ್ರರ ಬಂಧನ
- ಆಜಾದ್ ನಗರ ಪೊಲೀಸ್ ಠಾಣೆ
- ಉಮಾ ಪ್ರಶಾಂತ್ ಎಸ್ಪಿ
- ಚಿಗಟೇರಿ ಆಸ್ಪತ್ರೆ ಘರ್ಷಣೆ
- ದಾವಣಗೆರೆ ಕ್ರಿಕೆಟ್ ಗಲಾಟೆ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಪೊಲೀಸ್ ಹಲ್ಲೆ
- ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ
- ಹಸೇನ್ ಪೈಲ್ವಾನ್ ಬಂಧನ





Leave a comment