ಭದ್ರಾವತಿ: ಮುಂದಿನ ತರಳಬಾಳು ಹುಣ್ಣಿಮೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿರಿಗೆರೆ ತರಳಬಾಳು ಮಠಾಧಿಪತಿ ಸಿರಿಗೆರೆ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಘೋಷಿಸಿದರು.
ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಎಲ್ಲಿ ನಡೆಸಬೇಕು ಎಂಬ ಕುರಿತು ಅನೇಕ ಭಕ್ತರು ಅರ್ಜಿ ಸಲ್ಲಿಸಿದ್ದರು. ರಾಣೆಬೆನ್ನೂರು, ಹರಿಹರ ಹಾಗೂ ದುಬೈ ಭಾಗದ ಭಕ್ತರು ಕೂಡ ಆಹ್ವಾನ ನೀಡಿದ್ದರು. ಆದರೆ, ನಿಮ್ಮೆಲ್ಲರ ನಿರೀಕ್ಷೆ ಮೀರಿ ದಾಟಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ.
‘ಸಿದ್ದರಾಮೇಶ್ವರರು ಕೆರೆ ಕಟ್ಟಿಸಿದ ಪವಿತ್ರ ಸ್ಥಳವಾದ ಸೊಲ್ಲಾಪುರದಲ್ಲಿ ಮುಂದಿನ ತರಳಬಾಳು ಹುಣ್ಣಿಮೆ. ನಮ್ಮ ಗುರುಗಳು ರಾಜ್ಯದ ಹೊರಗೂ ಧರ್ಮ ಪ್ರಚಾರ ಮಾಡಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ಶ್ರೀಗಳು ಪ್ರಕಟಿಸಿದ್ದಾರೆ. ಈ ಘೋಷಣೆ ಕೇಳುತ್ತಿದ್ದಂತೆ ಭಕ್ತ ಸಮೂಹ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿತು.
- Cultural Integration
- Dr. Shivamurthy Shivacharya Swamiji.
- Sirigere Hunnime
- Sirigere Mutt
- Taralabalu Hunnime
- Taralabalu Jagadguru Brihanmath
- ಗಡಿ ಭಾಗದ ಉತ್ಸವ. Taralabalu in Maharashtra
- ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
- ತರಳಬಾಳು ಜಗದ್ಗುರು ಬೃಹನ್ಮಠ
- ತರಳಬಾಳು ಹುಣ್ಣಿಮೆ
- ಮರಾಠಿ ನೆಲದಲ್ಲಿ ತರಳಬಾಳು
- ಮಹಾರಾಷ್ಟ್ರ
- ಸಿರಿಗೆರೆ ಮಠ
- ಸಿರಿಗೆರೆ ಹುಣ್ಣಿಮೆ
- ಸ್ಥಳ ಸೊಲ್ಲಾಪುರ





Leave a comment