ದಾವಣಗೆರೆ: ಮಹಿಳಾ ಪೊಲೀಸ್ ಇನ್ ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಪುತ್ರ ಸೇರಿ ಇಬ್ಬರು ಬಂಧನಕ್ಕೊಳಗಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೂ ಬಿಡಬೇಡಿ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ನಾನು ಹಸ್ತಕ್ಷೇಪ ಮಾಡಿಲ್ಲ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಚಪಡಿಸಿದರು.
ವೈಯಕ್ತಿಕ ವಿಚಾರಕ್ಕೆ ಗಲಾಟೆಯಾಗಿದೆ ಎಂಬ ಮಾಹಿತಿ ಇದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದವರು ಯಾರೇ ಆದರೂ ಸರಿ. ಒದ್ದು ಮೊದಲು ಒಳಗೆ ಹಾಕಿ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಹಲ್ಲೆಗೆ ಒಳಗಾಗಿದ್ದ ಪೊಲೀಸರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಹೇಳಿದರು.
ಹರೀಶ್ ವಿರುದ್ಧ ಕಿಡಿ:
ಯಾವುದೋ ಜಿಲ್ಲೆಯಿಂದ ಬಂದು ಇಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿರುತ್ತಾರೆ. ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಮಹಿಳಾ ಅಧಿಕಾರಿ ಎಂದು ನೋಡದೇ ಮಾತನಾಡಿದರೆ ಅಂಥವರನ್ನು ಶಾಸಕನೆಂದು ಕರೆಯುತ್ತಾರಾ? ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಕಿಡಿಕಾರಿದರು.
ಗೆದ್ದಿದ್ದು ಹೇಗೆ?
ಹರಿಹರ ವಿಧಾನಸಭಾ ಕ್ಷೇತ್ರದ ಜನರು ಇಂಥ ವ್ಯಕ್ತಿಯನ್ನು ಚುನಾವಣೆಯಲ್ಲಿ ಹೆೇಗೆ ಗೆಲ್ಲಿಸಿದರೋ ಗೊತ್ತಿಲ್ಲ. ನಮ್ಮ ತಪ್ಪಿನಿಂದ ಹರಿಹರದಲ್ಲಿ ಬಿಜೆಪಿ ಗೆಲ್ಲುವಂತಾಗಿದೆ. ಬಿ. ಪಿ. ಹರೀಶ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಬಲಿಷ್ಠ ಅಭ್ಯರ್ಥಿ ಕಣ್ಕಕಿಳಿಸಿದ್ದರೆ ಅಂದೇ ಸೋಲುತ್ತಿದ್ದರು. ಮೊದಲು ಹರಿಹರ ಕ್ಷೇತ್ರದಲ್ಲಿ ದಾವಣಗೆರೆಯಲ್ಲಿ ನಿರ್ಮಾಣ ಮಾಡಿರುವಂಥ ರಸ್ತೆಗಳು, ವೃತ್ತಗಳನ್ನು ಅಭಿವೃದ್ಧಿಪಡಿಸಲಿ ಎಂದು ಸವಾಲು ಹಾಕಿದರು.
- Ayub Pailwan Son Arrest
- Davanagere crime news
- Davanagere District In-charge Minister.
- Davanagere Police Assault
- Karnataka Minister Warning
- Lady Inspector Gayatri Attack
- Police Assault Case
- SS Mallikarjun Statement
- ಅಯೂಬ್ ಪೈಲ್ವಾನ್ ಪುತ್ರ ಅರೆಸ್ಟ್
- ಕರ್ನಾಟಕ ರಾಜಕೀಯ
- ದಾವಣಗೆರೆ ಕ್ರೈಂ ನ್ಯೂಸ್
- ದಾವಣಗೆರೆ ಪೊಲೀಸ್ ಹಲ್ಲೆ
- ಪೊಲೀಸ್ ಸಿಬ್ಬಂದಿ ಹಲ್ಲೆ ಪ್ರಕರಣ.
- ಬಿ ಪಿ ಹರೀಶ್ ಟೀಕೆ
- ಮಹಿಳಾ ಇನ್ಸ್ಪೆಕ್ಟರ್ ಗಾಯತ್ರಿ ಹಲ್ಲೆ
- ಸಚಿವ ಎಸ್. ಎಸ್. ಮಲ್ಲಿಕಾರ್ಜುನ್





Leave a comment