Home ದಾವಣಗೆರೆ ನಿರ್ಮಲಾ ಸೀತಾರಾಮನ್ ದೂರದೃಷ್ಟಿಯ ಬಜೆಟ್: ಶಿವನಗೌಡ ಟಿ. ಪಾಟೀಲ್
ದಾವಣಗೆರೆನವದೆಹಲಿಬೆಂಗಳೂರು

ನಿರ್ಮಲಾ ಸೀತಾರಾಮನ್ ದೂರದೃಷ್ಟಿಯ ಬಜೆಟ್: ಶಿವನಗೌಡ ಟಿ. ಪಾಟೀಲ್

Share
ನಿರ್ಮಲಾ ಸೀತಾರಾಮನ್
Share

ದಾವಣಗೆರೆ: ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ‘ವಿಕಸಿತ ಭಾರತ’ದ ಮಹತ್ವಾಕಾಂಕ್ಷೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭದ್ರವಾದ ಅಡಿಪಾಯ ಹಾಕಿದೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವುದರ ಜೊತೆಗೆ, ದೇಶದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಕೊಂಡಾಡಿದ್ದಾರೆ.

ಈ ಬಜೆಟ್ ಕೇವಲ ಸರ್ಕಾರದ ವಾರ್ಷಿಕ ಲೆಕ್ಕಾಚಾರವಾಗದೆ, ಆಧುನಿಕ ತಂತ್ರಜ್ಞಾನ, ಸುಧಾರಿತ ಮೂಲಸೌಕರ್ಯ ಮತ್ತು ಜನಸಾಮಾನ್ಯರ ಹಿತಾಸಕ್ತಿಯನ್ನು ವಹಿಸಿದೆ. ಅಷ್ಟೇ ಅಲ್ಲದೆ, ಅರವತ್ತು ವರ್ಷಗಳ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ ಸರಳೀಕೃತ ‘ಹೊಸ ಆದಾಯ ತೆರಿಗೆ ಕಾಯ್ದೆ 2025’ ಅನ್ನು ಪರಿಚಯಿಸಿರುವುದು ಆಡಳಿತಾತ್ಮಕ ಸುಧಾರಣೆಯ ದಿಟ್ಟ ನಡೆಯಾಗಿದೆ. ಇದು ತೆರಿಗೆದಾರರಿಗೆ ಕಿರಿಕಿರಿ ತಪ್ಪಿಸುವುದಲ್ಲದೆ, ಪಾರದರ್ಶಕ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ವೈದ್ಯಕೀಯ ಸೀಟುಗಳ ಹೆಚ್ಚಳ ಮತ್ತು ನಗರಾಭಿವೃದ್ಧಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿಕಸಿತ ಭಾರತದ ಫಲ ದೊರೆಯುವಂತೆ ಮಾಡುವಲ್ಲಿ ಸಚಿವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ, ನಿರ್ಮಲಾ ಸೀತಾರಾಮನ್ ಅವರ ಇಂದಿನ ಬಜೆಟ್ ದೇಶದ ಆರ್ಥಿಕತೆಗೆ ಮುನ್ನುಡಿ ಬರೆದಿದೆ ಎಂದು ಶಿವನಗೌಡ ಟಿ. ಪಾಟೀಲ್ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *