ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಂದು ಮುಸ್ಲಿಂ ಬಾಂಧವರು ಈದ್-ಈ-ಮಿಲಾದ್-ಉನ್-ನಬಿ ಹಬ್ಬ ವಿಜೃಂಭಣೆಯಿಂದ ಆಚರಣೆ

On: September 16, 2024 10:01 AM
Follow Us:
---Advertisement---

ಇಂದು ಮುಸ್ಲಿಂ ಬಾಂಧವರು ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ದಿನವು ಮುಸ್ಲಿಂ ಸಮುದಾಯದವರಿಗೆ ಮಹತ್ವಪೂರ್ಣ ದಿನವಾಗಿದೆ. ಈ ದಿನ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದರು. ಮತ್ತು ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು. ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ. ಭಾರತ ಹಾಗೂ ಪ್ರಪಂಚದ ಹಲವು ದೇಶಗಳಲ್ಲಿ ಇದನ್ನು ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ಮುಹಮ್ಮದ್ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ.

ಈದ್- ಎ- ಮಿಲಾದ್ ಮಹತ್ವ: ಈದ್- ಎ- ಮಿಲಾದ್ ಮುಸ್ಲಿಂ ಸಮುದಾಯದ ಜನರಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈದ್ ಮಿಲಾದ್ ಉನ್ ನಬಿಯನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಮೂರನೇ ತಿಂಗಳಾದ ರಬಿ ಉಲ್ ಅವ್ವಾಲ್ ನ 12 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಈ ದಿನವು ಪವಿತ್ರ ಪ್ರವಾದಿಯ ದಯೆ, ಸಹಾನುಭೂತಿ ಮತ್ತು ಬೋಧನೆಗಳನ್ನು ನೆನಪಿಸುವುದರಿಂದ ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಶಿಯಾ ಮತ್ತು ಸುನ್ನಿ ಮುಸ್ಲಿಮರು ವಿಭಿನ್ನ ದಿನಾಂಕಗಳಲ್ಲಿ ಆಚರಿಸುತ್ತಾರೆ. ಸುನ್ನಿ ಮುಸ್ಲಿಮರು ಇಸ್ಲಾಮಿಕ್ ಧರ್ಮದ 12 ನೇ ದಿನದಂದು ಈ ದಿನವನ್ನು ಆಚರಿಸಿದರೆ, ಶಿಯಾ ಮುಸ್ಲಿಮರು ರಬಿ ಉಲ್ ಅವ್ವಾಲ್ ನ 17 ನೇ ದಿನದಂದು ಈ ದಿನವನ್ನು ಆಚರಿಸುತ್ತಾರೆ. ಈದ್ ಮಿಲಾದ್ ಉನ್ ನಬಿಯನ್ನು ಹೇಗೆ ಆಚರಿಸುತ್ತಾರೆ? ಜನರು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ತಯಾರಿಯನ್ನು ಪ್ರಾರಂಭಿಸುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರ ವರ್ಣರಂಜಿತ ದೀಪಗಳು ಮತ್ತು ಧ್ವಜಗಳಿಂದ ಅಲಂಕರಿಸುತ್ತಾರೆ. ಅಲ್ಲದೆ ಈ ದಿನವನ್ನು ಬಹಳ ಆಡಂಭರದಿಂದ ಆಚರಿಸುತ್ತಾರೆ, ಹಸಿರು ಬಣ್ಣವು ಇಸ್ಲಾಂ ಅನ್ನು ಸೂಚಿಸುವುದರಿಂದ ಅವರು ತಮ್ಮ ಕೈಯಲ್ಲಿ ಹಸಿರು ಬ್ಯಾಂಡ್ಗಳನ್ನು ಕಟ್ಟುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುವುದು, ಸಿಹಿ ತಿಂಡಿಗಳನ್ನು ವಿತರಿಸುವುದು ಮತ್ತು ಮಸೀದಿಗೆ ಭೇಟಿ ನೀಡುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಮುಸ್ಲಿಂ ಜನರು ಈ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ಅಲ್ಲಾಹನ ಆಶೀರ್ವಾದವನ್ನು ಪಡೆಯುತ್ತಾರೆ. ಮಹಿಳೆಯರು ಶೀರ್ ಖುರ್ಮಾ ಮತ್ತು ಸೇವಾಯನ್ ನಂತಹ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಜೊತೆಗೆ ತಮ್ಮ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಅವರೊಂದಿಗೆ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಅಲ್ಲಾಹನನ್ನು ಪೂಜಿಸಲು ಮತ್ತು ಆಶೀರ್ವಾದ ಪಡೆಯಲು ಹಾಜಿ ಅಲಿ ದರ್ಗಾ, ಜಮಾ ಮಜ್ಜಿದ್, ನಿಜಾಮುದ್ದೀನ್ ಔಲಿಯಾ, ಅಜ್ಮೀರ್ ಶರೀಫ್ ನಂತಹ ಪ್ರಮುಖ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಪವಿತ್ರ ದಿನದಂದು ದಾನ ಮಾಡುವುದು ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ದಯೆ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು ಹಾಗಾಗಿ ಅಲ್ಲಾಹನಿಗೆ ನಿಜವಾಗಿಯೂ ಸಮರ್ಪಿತರಾಗಿರುವ ಜನರು, ದೇಣಿಗೆಗಳನ್ನು ನೀಡುತ್ತಾರೆ ಮತ್ತು ಅಗತ್ಯವಿರುವ ಬಡ ಜನರಿಗೆ ದಾನ ಮಾಡುತ್ತಾರೆ.

Join WhatsApp

Join Now

Join Telegram

Join Now

Leave a Comment