Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಸಚಿವರು, ಸಂಸದರ ಆಪ್ತರದ್ದೇ ದರ್ಬಾರ್! ಡ್ರಗ್ಸ್ ಮಾಫಿಯಾ, ಬಡವರ ‘ಅನ್ನಭಾಗ್ಯ’ದ ಅಕ್ಕಿ ಲೂಟಿ: ಬಿಜೆಪಿ ಗಂಭೀರ ಆರೋಪ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಸಚಿವರು, ಸಂಸದರ ಆಪ್ತರದ್ದೇ ದರ್ಬಾರ್! ಡ್ರಗ್ಸ್ ಮಾಫಿಯಾ, ಬಡವರ ‘ಅನ್ನಭಾಗ್ಯ’ದ ಅಕ್ಕಿ ಲೂಟಿ: ಬಿಜೆಪಿ ಗಂಭೀರ ಆರೋಪ

Share
ದಾವಣಗೆರೆ
Share

ಬೆಂಗಳೂರು: ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಪ್ತರದ್ದೇ ದರ್ಬಾರ್ ಆಗಿದೆ. ಅಂದು ಡ್ರಗ್ಸ್ ಮಾಫಿಯಾ, ಇಂದು ಬಡವರ ಅನ್ನಭಾಗ್ಯದ ಅಕ್ಕಿ ಲೂಟಿ ಮಾಡಲಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಸುದ್ದಿಯನ್ನೂ ಓದಿ: BIG BREAKING: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿಕೆ: ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ್ ಬಂಧನ!

ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಅಕ್ಕಪಕ್ಕದಲ್ಲಿ ಪೋಸ್ ಕೊಡುವ ಮೊಹಮ್ಮದ್ ಜಮೀರ್ ಎಂಬಾತನ ಮನೆಯಲ್ಲಿ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿದೆ. ಇದಕ್ಕಿಂತ ನಿದರ್ಶನ ಬೇಕಾ? ಎಂದು ಪ್ರಶ್ನಸಿದೆ.

ಬಡವರ ಹೊಟ್ಟೆ ಮೇಲೆ ಹೊಡೆಯುವ ಈ ದಂಧೆಕೋರರಿಗೆ ಸಚಿವರೇ ರಕ್ಷಣೆ ನೀಡುತ್ತಿದ್ದಾರೆ. ‘ಕೈ’ ಪಾಳಯದ ಕೃಪಾಕಟಾಕ್ಷವಿಲ್ಲದೆ ಇಂತಹ ಅಕ್ರಮ ನಡೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ.

ದಾವಣಗೆರೆ ಅಕ್ರಮ ದಂಧೆಗಳ ಅಡ್ಡೆಯಾಗಿಸಿದ ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರಿಸಲೇಬೇಕು ಎಂದು ಬಿಜೆಪಿಯು ಒತ್ತಾಯಿಸಿದೆ.

ಇನ್ನು ದಾವಣಗೆರೆಯಲ್ಲಿ ಡ್ರಗ್ಸ್ ಮಾಫಿಯಾ ಮತ್ತು ಅನ್ನಭಾಗ್ಯ ಅಕ್ಕಿ ಕಳ್ಳತನ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಫೋಟೋ ತೆಗೆಸಿಕೊಂಡಾಕ್ಷಣ ಅಕ್ರಮಕ್ಕೆ ಬೆಂಬಲ ಇದೆ ಆರೋಪ ಸತ್ಯಕ್ಕೆ ದೂರವಾದದ್ದು. ಯಾರು ಏನೇ ಮಾಡಿದರೂ ಅದಕ್ಕೆ ನಾನು ಹೊಣೆ ಹೊರಲು ಆಗುತ್ತದೆಯಾ? ಯಾರ್ಯಾರು ಫೋಟೋ ತೆಗೆಸಿಕೊಂಡು ಹೋಗಿರುತ್ತಾರೆ. ಅವರಿಗೆಲ್ಲಾ ನಾವೇ ಸಹಕಾರ ಕೊಡ್ತೇವೆಂದು ಆರೋಪ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದರು.

ನ್ಯಾಯಯುತವಾಗಿ ಬದುಕುವಂತೆ ನಾನೇ ಹೇಳಿದ್ದೇನೆ. ಟ್ರ್ಯಾಕ್ಟರ್, ಲಾರಿ ಸೇರಿದಂತೆ ನಾನೇ ಒಳ್ಳೆ ದಾರಿಯಲ್ಲಿ ನಡೆಯುವಂತೆ ಧನ ಸಹಾಯವನ್ನೂ ಮಾಡುತ್ತೇನೆ. ಅಕ್ರಮಗಳಿಗೆ ಸಹಕಾರ ಕೊಡುವ ಪ್ರಶ್ನೆಯೇ ಇಲ್ಲ. ಜಿಲ್ಲಾ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಇದರಲ್ಲಿ ಹಸ್ತಕ್ಷೇಪ ಎಂದಿಗೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *