Home ದಾವಣಗೆರೆ ದಾವಣಗೆರೆಯಲ್ಲಿ ಭುಗಿಲೆದ್ದ ರೈತರ ಸಿಟ್ಟು: ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಟ್ರ್ಯಾಕ್ಟರ್ ಲೋಡ್ ಸಮೇತ ಪ್ರತಿಭಟನೆ
ದಾವಣಗೆರೆಬೆಂಗಳೂರುವಾಣಿಜ್ಯ

ದಾವಣಗೆರೆಯಲ್ಲಿ ಭುಗಿಲೆದ್ದ ರೈತರ ಸಿಟ್ಟು: ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಟ್ರ್ಯಾಕ್ಟರ್ ಲೋಡ್ ಸಮೇತ ಪ್ರತಿಭಟನೆ

Share
Share

ದಾವಣಗೆರೆ: ಆವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೆಕ್ಕೆಜೋಳ ಖರೀದಿ ನೋಂದಣಿ ಮಾಡಿಸಿದ ರೈತರು ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿಕೊಂಡು ಎಪಿಎಂಸಿ ಪ್ರಾಂಗಣಕ್ಕೆ ತಂದಿದ್ದಾರೆ. ಆದರೆ ಖರೀದಿ ಪ್ರಕ್ರಿಯೆ ನಡೆಸದೆ ಶೋಷಣೆ ಮಾಡಲಾಗುತ್ತಿದೆ ಎಂದು ರೈತರು ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

READ ALSO THIS STORY: ಮುಸ್ಲಿಂ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದ ಹಿಂದೂ ಯುವತಿ: ಇಬ್ಬರನ್ನೂ ಹತ್ಯೆ ಮಾಡಿದ ಮೃತಳ ಸಹೋದರರು!

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳು ಶೇಕಡ 20 ರಷ್ಟು ಮುಂಗಡ ಹಣ ಪಾವತಿಸಿ, 455 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು ಮತ್ತು ಶಾಮನೂರು ಎಸ್ ಎಸ್ ಗಣೇಶ್ ಮಾಲಿಕತ್ವದ ಕುಕ್ಕುವಾಡ ಶುಗರ್ ಡಿಸ್ಟಿಲರಿಯವರು ಶೇಕಡ 50 ರಷ್ಟು ಮುಂಗಡ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

729.5 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳು ಶೇಕಡ 20 ರಷ್ಟು ಮುಂಗಡ ಹಣ ಪಾವತಿಸಿರುವುದರಿಂದ ರೈತರು ಅವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿಯಮಾನುಸಾರ ನೋಂದಣಿ ಮಾಡಿಸಿ, ಮೆಕ್ಕೆಜೋಳ ಟ್ರ್ಯಾಕ್ಟರ್ ಗಳಲ್ಲಿ ಲೋಡ್ ಮಾಡಿಕೊಂಡು ಎಪಿಎಂಸಿ ಪ್ರಾಂಗಣಕ್ಕೆ ತಂದಿದ್ದಾರೆ. ಆದರೆ ಖರೀದಿ ಪ್ರಕ್ರಿಯೆ ನಡೆಸಬೇಕಾದ ಅಧಿಕಾರಿಗಳು ಮತ್ತು ಖರೀದಿಸಬೇಕಾದ ಪಶು/ಕುಕ್ಕುಟ ಆಹಾರ ಉತ್ಪಾದನೆ ಘಟಕಗಳ ಮಾಲೀಕರು ಇಲ್ಲದೆ ರೈತರು ರೋಚಿಗೆದ್ದಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ಖಂಡಿಸಿದರು.

ಕುಕ್ಕುವಾಡ ಶುಗರ್ ಡಿಸ್ಟಿಲರಿ ಮಾಲೀಕರಾದ ಶಾಮನೂರು ಎಸ್ ಎಸ್ ಗಣೇಶ್ ರವರು ಇದುವರೆಗೂ ಶೇಕಡ 50 ರಷ್ಟು ಮುಂಗಡ ಹಣ ಪಾವತಿಸಿಲ್ಲ. ಜಿಲ್ಲಾಡಳಿತ ಅವರಿಗೆ ನೋಟಿಸ್ ನೀಡದೆ ಕಣ್ಮುಚ್ಚಿ ಕುಳಿತಿದೆ ಎಂದು ಸತೀಶ್ ಆರೋಪಿಸಿದರು.

ಟ್ರ್ಯಾಕ್ಟರ್ ಲೋಡ್ ಸಮೇತ ರೈತರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಪಶುಸಂಗೋಪನೆ ಉಪನಿರ್ದೇಶಕ ಡಾ.ಮಹೇಶ್ ಮತ್ತು ಎಪಿಎಂಸಿ ಉಪಕಾರ್ಯದರ್ಶಿ ಹರೀಶನಾಯ್ಕ ರವರು ಬಂದು ರೈತರ ಅಹವಾಲು ಕೇಳಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತುಂಬಿಗೆರೆ ದಿನೇಶ್ ಗೌಡ, ಬುಳ್ಳಾಪುರ ಹನುಮಂತಪ್ಪ, ಪವಾಡರಂಗವ್ವನಹಳ್ಳಿ ಮಲ್ಲೇಶಪ್ಪ ಮುಂತಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *