ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ 19 ವರ್ಷದ ಹಿಂದೂ ಯುವತಿ ಮತ್ತು ಆಕೆ 27 ವರ್ಷದ ಮುಸ್ಲಿಂ ಗೆಳೆಯನ ಶವಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ಮೂವರು ಸಹೋದರರು ಇಬ್ಬರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ ಅಂತರ್ಧರ್ಮೀಯ ದಂಪತಿಯ ಶವ ಪತ್ತೆಯಾಗಿದ್ದು, ಆಕೆಯ ಸಹೋದರರು ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು 19 ವರ್ಷದ ಕಾಜಲ್ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿಯನ್ನು 27 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೊರಾದಾಬಾದ್‌ನ ಉಮ್ರಿ ಸಬ್ಜಿಪುರ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ವಿದ್ಯಾರ್ಥಿನಿಯಾಗಿದ್ದಳು. ಕಾಜಲ್ ಅವರ ಮೂವರು ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ಮನೆಗಳಿಂದ ನಾಪತ್ತೆಯಾಗಿದ್ದರು. ಇಬ್ಬರೂ ವಾಪಸ್ ಬಂದಿರಲಿಲ್ಲ. ಎರಡು ಕುಟುಂಬಗಳು ನಾಪತ್ತೆ ಕೇಸ್ ದಾಖಲಿಸಿದ್ದರು. ಇಬ್ಬರೂ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿ ಸತ್ಪಾಲ್ ಆಂಟಿಲ್ ಮಾತನಾಡಿ, ಆ ವ್ಯಕ್ತಿಯ ಕುಟುಂಬ ಬುಧವಾರ ದೂರು ದಾಖಲಿಸಿದ್ದು, ಇಂದು ಬೆಳಿಗ್ಗೆ ಮಹಿಳೆಯ ಕಡೆಯಿಂದ ದೂರು ದಾಖಲಾಗಿದೆ. ಕೆಲವು ಗಂಟೆಗಳ ನಂತರ, ಅವರಿಬ್ಬರ ಶವಗಳು ಕಾಡಿನಲ್ಲಿ ಪತ್ತೆಯಾಗಿವೆ.
“ಎರಡೂ ಕುಟುಂಬಗಳಿಂದ ವ್ಯಕ್ತಿಗಳು ಕಾಣೆಯಾದ ವರದಿಯ ನಂತರ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಮಹಿಳೆಯ ಸಹೋದರರು ಇಬ್ಬರನ್ನೂ ಕೊಲೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ಸಹೋದರರನ್ನು ಬಂಧಿಸಲಾಗಿದೆ, ಮತ್ತು ಅವರ ನಿರ್ದೇಶನದ ಮೇರೆಗೆ, ದಂಪತಿ ಶವಗಳು ಗ್ರಾಮದಿಂದ ಕೆಲವು ಮೀಟರ್ ದೂರದಲ್ಲಿರುವ ದೇವಾಲಯದ ಹಿಂದಿನ ಕಾಡಿನಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಎರಡೂ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.





Leave a comment