ದಾವಣಗೆರೆ: ಆಟೋ ರಿಕ್ಷಾಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿ ದ್ವಿಚಕ್ರ ವಾಹನ ಸವಾರರು ಮತ್ತು ಎಲೆಕ್ಟ್ರಿಕ್ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ನಗರದ ಸ್ವಚ್ಛತೆ ಮತ್ತು ಸಿಸಿಟಿವಿ ಅಳವಡಿಕೆ: ದಾವಣಗೆರೆ ನಗರದ ಪ್ರವೇಶ ದ್ವಾರಗಳಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮತ್ತು ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಘಾತ ತಡೆಗೆ ಕ್ರಮ:
2030ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಪೊಲೀಸರು ಅಥವಾ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮತ್ತು ನಗದು ರಹಿತ ಉಚಿತ ಚಿಕಿತ್ಸಾ ಸೌಲಭ್ಯವನ್ನು ರಸ್ತೆ ಅಪಘಾತವಾದಾಗ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಚರ್ಚಿಸಿ ಇದು ಅನುಷ್ಟಾನವಾಗುವ ರೀತಿ ಕುರಿತು ಚರ್ಚಿಸಲಾಯಿತು.
ಗುಂಡಿ ಮುಕ್ತ ರಸ್ತೆಗಳು: ನಗರದ ಬಹುತೇಕ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಬ್ಲಿಂಕರ್ ಲೈಟ್ಸ್ ಮತ್ತು ವೇಗಮಿತಿ ಬೋರ್ಡ್ಗಳನ್ನು ಹಾಕಲು ನಿರ್ಧರಿಸಲಾಯಿತು.
ಪ್ರಮುಖ ಚರ್ಚೆಗಳು ಮತ್ತು ಸಮಸ್ಯೆಗಳು:
ಮ್ಯಾನ್ ಹೋಲ್ ಸಮಸ್ಯೆ: ಗಣಪತಿ ದೇವಸ್ಥಾನದ ಬಳಿ ಮ್ಯಾನ್ ಹೋಲ್ ಮೇಲೆ ಅಳವಡಿಸಿರುವ ಸ್ಟೀಲ್ ಶೀಟ್ನಿಂದ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿರುವ ಬಗ್ಗೆ ಚರ್ಚೆಯಾಯಿತು.
ಖಾಸಗಿ ಲೇಔಟ್ ಸಮಸ್ಯೆಗಳು:
ಸರಿಯಾದ ರಸ್ತೆ, ಯುಜಿಡಿ ಮತ್ತು ಬೀದಿ ದೀಪಗಳ ಸೌಲಭ್ಯ ನೀಡದ ಡೆವಲಪರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅವರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಯಿತು.
ಗಮನಾರ್ಹ ಅಂಶ: 2024ಕ್ಕೆ ಹೋಲಿಸಿದರೆ 2025ರಲ್ಲಿ ಪ್ರಾಣಾಪಾಯ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಸಲ್ಪ ಏರಿಕೆ ಕಂಡುಬಂದಿದೆ. ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.
ದಾವಣಗೆರೆಗೆ ಬರಲಿವೆ 50 ರಿಂದ 100 ಎಲೆಕ್ಟ್ರಿಕಲ್ ಬಸ್!
ದಾವಣಗೆರೆ: ದಾವಣಗೆರೆಗೆ ಸುಮಾರು 50 ರಿಂದ 100 ಹೊಸ ಎಲೆಕ್ಟ್ರಿಕಲ್ ಬಸ್ಸುಗಳು ಬರಲಿದ್ದು, ಇವುಗಳನ್ನು ನಗರ ಮತ್ತು ಹರಿಹರದ ನಡುವಿನ ಸಂಚಾರಕ್ಕೆ ಬಳಸಲಾಗುತ್ತದೆ.





Leave a comment