ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಹೆಲ್ಮೆಟ್ ರಹಿತ ಚಾಲನೆಗೆ 2025ರಲ್ಲಿ ದಾಖಲೆಯ 73,247 ಪ್ರಕರಣಗಳು ದಾಖಲಾಗಿದ್ದು, ₹2.92 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ.
ಮದ್ಯಪಾನ ಮಾಡಿ ಚಾಲನೆ ಮಾಡಿದ ಪ್ರಕರಣಗಳು 2023ರಲ್ಲಿ 31 ಇದ್ದರೆ, 2025ರಲ್ಲಿ 1,104ಕ್ಕೆ ಏರಿಕೆಯಾಗಿರುವುದು ಕಳವಳಕಾರಿ ಸಂಗತಿ. ಸೀಟ್ ಬೆಲ್ಟ್ ಧರಿಸದಿರುವುದು 2025ರಲ್ಲಿ 4,285 ಪ್ರಕರಣಗಳು ದಾಖಲಾಗಿವೆ.
ಅತೀ ವೇಗದ ಚಾಲನೆ 2025ರಲ್ಲಿ 953 ಪ್ರಕರಣಗಳು ದಾಖಲಾಗಿದ್ದು, ₹7.22 ಲಕ್ಷ ದಂಡ ವಿಧಿಸಲಾಗಿದೆ. 2025ರಲ್ಲಿ ಒಟ್ಟು 1,33,213 ಪ್ರಕರಣಗಳನ್ನು ದಾಖಲಿಸಿ ರೂ.6.37 ಕೋಟಿ ದಂಡ ಸಂಗ್ರಹಿಸಲಾಗಿದೆ.
ಅಪಘಾತ ವಲಯಗಳು; ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುವ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ, ಒಟ್ಟು ಗುರುತಿಸಲಾದ ಬ್ಲಾಕ್ ಸ್ಪಾಟ್‍ಗಳು 32, ಸರಿಪಡಿಸಲಾದ ಸ್ಥಳಗಳು 13, ಇನ್ನೂ ಅಪಾಯಕಾರಿಯಾಗಿರುವ ಸ್ಥಳಗಳು 19 ಎಂದು ಗುರುತಿಸಿದ್ದು 2026 ರಲ್ಲಿ ಹೊಸದಾಗಿ 8 ಸ್ಥಳಗಳನ್ನು ಗುರುತಿಸಲಾಗಿದೆ.
ಪ್ರಮುಖ ಅಪಾಯಕಾರಿ ಸ್ಥಳಗಳು:
ಎನ್.ಹೆಚ್ 48 ರ ಬಾಡಾ ಕ್ರಾಸ್, ಎಸ್.ಎಸ್. ಆಸ್ಪತ್ರೆ ಬ್ರಿಡ್ಜ್, ಚೆನ್ನಗಿರಿಯ ನುಗ್ಗೀಹಳ್ಳಿ ಕ್ರಾಸ್ ಮತ್ತು ಜಗಳೂರಿನ ದೊಣ್ಣೆಹಳ್ಳಿ ಗ್ರಾಮದ ಬಳಿ ಹೆಚ್ಚು ಅಪಘಾತಗಳು ವರದಿಯಾಗಿವೆ. ಅಪಘಾತಗಳ ಸಂಖ್ಯೆಯಲ್ಲಿ ದಾವಣಗೆರೆ ಗ್ರಾಮಾಂತರ ಮತ್ತು ಚನ್ನಗಿರಿ ಉಪವಿಭಾಗಗಳು ಮೊದಲ ಸ್ಥಾನದಲ್ಲಿವೆ. 2025ರಲ್ಲಿ ದಾವಣಗೆರೆ ಗ್ರಾಮಾಂತರದಲ್ಲಿ 135 ಮತ್ತು ಚನ್ನಗಿರಿಯಲ್ಲಿ 124 ಪ್ರಾಣಾಪಾಯ ಸಂಭವಿಸಿದ ಅಪಘಾತಗಳು ದಾಖಲಾಗಿವೆ.
ಸಾರ್ವಜನಿಕರಿಗೆ ಮನವಿ:
ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಮಾತ್ರವಲ್ಲದೆ ಜೀವಕ್ಕೆ ಅಪಾಯಕಾರಿ. ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಬೇಕು ಎಂದು ಅಂಕಿಅಂಶಗಳ ಸಹಿತ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.





Leave a comment