ಕೇರಳ: ಕೇರಳದಲ್ಲಿ ಯುವಕನು ಆರೋಪಕ್ಕೆ ಬೇಸತ್ತು ಇಹಲೋಕ ತ್ಯಜಿಸಿದ್ದಾನೆ. ಆರೋಪ ಮಾಡಿದ್ದು ಮುಸ್ಲಿಂ ಯುವತಿ. ಪ್ರಾಣ ಕಳೆದುಕೊಂಡಿದ್ದು ಹಿಂದೂ ಯುವಕ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ವಿಡಿಯೋ ಹರಿಬಿಟ್ಟು ಸಾವಿಗೆ ಕಾರಣಕರ್ತಳಾದ ಯುವತಿ ವಿರುದ್ಧ ಈಗ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದ್ದರೆ, ದೀಪಕ್ ಪರ ನಿಂತಿರುವ ಕೇರಳಿಗರ ನ್ಯಾಯಪ್ರಜ್ಞೆಗೆ ಸಾಕ್ಷಿ ಎಂಬ ಮಾತು ಕೇಳಿ ಬರುತ್ತಿದೆ.
ಧರ್ಮ ಭೇದ ಮರೆತು ಶಿಂಜಿತಾ ಮುಸ್ತಫಾಳ ಳ ವಿರುದ್ಧ ಜನರು ನಿಂತಿದ್ದಾರೆ. ದೀಪಕ್ ನ ಪರ ನಿಂತಿದ್ದಾರೆ. ದೀಪಕ್ ನ ಮನೆಯ ಪಕ್ಕದ ಮುಸ್ಲಿಂ ಯುವಕ ಕಣ್ಣೀರು ಹಾಕಿ ಮೀಡಿಯಾದ ಮುಂದೆ ಮಾತಾಡಿರುವುದು ಚರ್ಚೆಗೆ ಕಾರಣವಾಗಿದೆ.
. ಶಿಂಜಿತಾ ಮುಸ್ತಫಾಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ. ಕೇರಳಕ್ಕೆ ಕೇರಳವೇ ದೀಪಕ್ ನ ಪರವಾಗಿ ಮಾತಾಡುತ್ತಿದೆ. ನ್ಯಾಯದ ವಿಷಯದಲ್ಲಿ ಧರ್ಮ ನೋಡಬಾರದು ಎಂಬುದನ್ನು ಅತ್ಯಂತ ಮುಂಚೂಣಿಯಲ್ಲಿ ನಿಂತು ಕೇರಳದ ಹಿಂದೂ ಮತ್ತು ಮುಸ್ಲಿಮರು ಅತ್ಯಂತ ಪ್ರಬಲವಾಗಿ ಸಾರಿದ್ದಾರೆ.
ಶಿಂಜಿತಾ ಮುಸ್ತಫ ಎಂಬ ಹೆಣ್ಣು ಮಗಳು ಬಸ್ಸಿನಲ್ಲಿ ವಿಡಿಯೋ ಮಾಡಿದ್ದಾಳೆ . ದೀಪಕ್ ಎಂಬ 40 ವರ್ಷದ ವಿವಾಹ ವಿಚ್ಛೇದಿತ ವ್ಯಕ್ತಿಯನ್ನು ಕೇಂದ್ರೀಕರಿಸಿ ಆಕೆ ಈ ವಿಡಿಯೋ ಮಾಡಿದ್ದಾಳೆ. ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬುದನ್ನು ತೋರಿಸುವುದಕ್ಕಾಗಿ ತಾನು ಈ ವಿಡಿಯೋ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಆತ ಆಕೆಯ ವಿರುದ್ಧ ಭಾಗಕ್ಕೆ ಮುಖ ತಿರುಗಿಸಿ ನಿಂತಿದ್ದ. ಆಕೆಯ ದೇಹದ ಮೇಲೆ ಆತನ ತೋಳು ತಾಗುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಚ್ಚರಿ ಏನಂದರೆ, ದೀಪಕ್ ನಿಂದ ಲೈಂಗಿಕ ಕಿರುಕುಳ ಎದುರಿಸಿದ್ದೇನೆ ಎಂದು ಆಕೆ ವಿಡಿಯೋದಲ್ಲಿ ತೋರಿಸುತ್ತಿದ್ದರೂ ಆಕೆಯ ಮುಖಭಾವದಲ್ಲಿ ಇರಬೇಕಾದ ವಿರೋಧ ಕಾಣಿಸುತ್ತಿಲ್ಲ. ಮುಖದಲ್ಲಿಯೂ ಆ ಭಾವನೆಯಾಗಲೀ, ಭಯವಾಗಲೀ ಇರಲಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ವಿಡಿಯೋ ಮಾಡಲಾಗಿತ್ತೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಕೇರಳದ ಪ್ರಮುಖ ನಟಿ ಭಾಗ್ಯಲಕ್ಷ್ಮಿ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಆಕೆ ಸರಿದು ನಿಲ್ಲದೆ ಇರುವುದು ಮತ್ತು ಮುಖಭಾವದಲ್ಲಿ ಬದಲಾವಣೆ ಆಗದೆ ಇರುವುದನ್ನು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋದ ಉದ್ದೇಶ ಏನು ಎಂದೂ ಅವರು ಕೇಳಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು, ಲೈಕ್ಸ್ ಮತ್ತು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುವ ಧಾವಂತವು ಇತರರ ಬದುಕನ್ನೇ ಕಸಿದುಕೊಳ್ಳುವಂತಹ ಪರಿಸ್ಥಿತಿಗೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಗೆ ಈ ಪ್ರಕರಣ ಉತ್ತಮ ನಿದರ್ಶನ.
ಈ ಮುಸ್ತಫಾಳಿಗೆ ಆ ಬಸ್ಸಿನಲ್ಲಿಯೇ ಆತನನ್ನು ಪ್ರಶ್ನಿಸಬಹುದಿತ್ತು. ಆದರೆ ಹಾಗೆ ಮಾಡದೆ instagram ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಇದಾದ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ತಪ್ಪಿತಸ್ಥ ಹೌದೋ ಅಲ್ಲವೋ ಎಂಬ
ಪ್ರಶ್ನೆಗೆ ಉತ್ತರಿಸುವುದಕ್ಕೆ ದೀಪಕ್ ಈಗ ಬದುಕಿಲ್ಲ, ಇದರ ಬದಲು ಈ ವಿಡಿಯೋವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಕ್ರಮ ಕೈಗೊಳ್ಳುವಂತೆ ಮುಸ್ತಫ ಹೇಳಿರುತ್ತಿದ್ದರೂ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಅಥವಾ ಆಕೆಯ ಮೇಲೆ ಆರೋಪಗಳು ಕೇಳಿ
ಬರುತ್ತಿರಲಿಲ್ಲ.
ಸಾಮಾನ್ಯವಾಗಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಮಾಜ ಹೆಣ್ಣನ್ನೇ ಬೆಂಬಲಿಸುತ್ತಾ ಬರುವುದು ರೂಢಿ. ಆದರೆ ಇಲ್ಲಿ ಈ ರೂಢಿಗೆ ವಿರುದ್ಧ ಬೆಳವಣಿಗೆ ನಡೆದಿದೆ. ಸದ್ಯ ಶಿಂಜಿತಾ ತನ್ನ ಇನ್ಸ್ಟಾಗ್ರಾಮ್ ಅಕೌಂಟಿಗೆ ಲಾಕ್ ಮಾಡಿದ್ದಾಳೆ. ತಮ್ಮ ಮನೆಯ
ಏಕೈಕ ಕುಡಿಯನ್ನು ಕಳಕೊಂಡ ದೀಪಕ್ ನ ಹೆತ್ತವರು ಕಣ್ಣೀರಾಗಿದ್ದಾರೆ. ಕೇರಳಿಗರು ಇಂಥ ಸಾವು ನ್ಯಾಯವೇ ಎಂದು ಪ್ರಶ್ನಿಸುತ್ತಿದ್ದಾರೆ. ದೀಪಕ್ ಬದುಕು ಈ ರೀತಿ ಅಂತ್ಯವಾಗಿದ್ದು ದುರಂತವೇ ಸರಿ. ಕಾನೂನು ದುರುಪಯೋಗಪಡಿಸಿಕೊಳ್ಳುವ
ಮುಸ್ತಫಾಳಂಥವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.




Leave a comment