Home ಕ್ರೈಂ ನ್ಯೂಸ್ ಅಬಕಾರಿ ಇಲಾಖೆಯಲ್ಲಿ 2. 5 ಸಾವಿರ ಕೋಟಿ ರೂ. ಅಕ್ರಮದ ಹಿಂದೆ ಸಚಿವರು: ಕಾಂಗ್ರೆಸ್ ಸರ್ಕಾರದ ನೇರ ಕೈವಾಡವಿದೆಯಂತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಅಬಕಾರಿ ಇಲಾಖೆಯಲ್ಲಿ 2. 5 ಸಾವಿರ ಕೋಟಿ ರೂ. ಅಕ್ರಮದ ಹಿಂದೆ ಸಚಿವರು: ಕಾಂಗ್ರೆಸ್ ಸರ್ಕಾರದ ನೇರ ಕೈವಾಡವಿದೆಯಂತೆ!

Share
Share

ಬೆಂಗಳೂರು: ಅಸ್ಸಾಂ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ₹2.5 ಸಾವಿರ ಕೋಟಿ ಅಕ್ರಮದ ಹಿಂದೆ ಕಾಂಗ್ರೆಸ್ ಸರ್ಕಾರದ ನೇರ ಕೈವಾಡವಿದೆ. ಬೃಹತ್‌ ಪ್ರಮಾಣದ ಭ್ರಷ್ಟಾಚಾರದಲ್ಲಿ ಅಬಕಾರಿ ಸಚಿವರು ನೇರ ಭಾಗಿಯಾಗಿದ್ದಾರೆ. ಈ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಅನ್ಯ ರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರ ಎಟಿಎಂನಂತೆ ಕಾರ್ಯಾಚರಿಸುತ್ತಿದೆ. ಈ ಹಿಂದೆ ನಡೆದ ಚುನಾವಣೆಗಳಿಗೂ ರಾಜ್ಯದಿಂದಲೇ ಹಣ ಸಂಗ್ರಹದ ಗುರಿ ನೀಡಲಾಗಿತ್ತು. ಈಗ ಅಸ್ಸಾಂ ಚುನಾವಣೆಗೂ ಅದೇ ರೀತಿ ರಾಜ್ಯದಿಂದ ಅಕ್ರಮ ಹಣ ಸಂಗ್ರಹಿಸಲಾಗುತ್ತಿದೆ ಎಂದು ಕಿಡಿಕಾರಿದೆ.

ಸಿದ್ದರಾಮಯ್ಯ ಅವರೇ, ಅನ್ಯ ರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಅಕ್ರಮ ಹಣ ಸಂಗ್ರಹಿಸಲು ಕಾಂಗ್ರೆಸ್‌ ಹೈಕಮಾಂಡ್‌ ಗುತ್ತಿಗೆ ನೀಡಿದೆಯಾ? ಎಂದು ಪ್ರಶ್ನಿಸಿದೆ.

ಮದ್ಯದ ಬಾಟಲಿಯಲ್ಲಿ ಕಾಣುತ್ತಿದೆ ಹಗರಣದ ಗಬ್ಬುವಾಸನೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಲೂಟಿ ಹಣದ ಕಿಕ್‌ ನೆತ್ತಿಗೆ ಏರಿದೆ ಎಂದು ವಾಗ್ದಾಳಿ ನಡೆಸಿದೆ.

Share

Leave a comment

Leave a Reply

Your email address will not be published. Required fields are marked *