ಬೆಂಗಳೂರು: ಸಮವಸ್ತ್ರದಲ್ಲಿ ಕಚೇರಿಯಲ್ಲಿಯೇ ಯುವತಿಯರು ಮತ್ತು ಮಹಿಳೆಯರ ಜೊತೆ ರಾಸಲೀಲೆ ವಿಡಿಯೋಗಳ ಬಿಡುಗಡೆ ಆಗಿದ್ದು, ಡಿಜಿಪಿ ರಾಮಚಂದ್ರರಾವ್ ಅವರ ಈ ಕಾಮಕಾಂಡ ಬಟಾಬಯಲಾಗಿದೆ.
ಈ ಹಿಂದೆ ಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿಜಿಪಿ ರಾಮಚಂದ್ರರಾವ್ ಅವರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆಗೆ ಭಾರೀ ಮುಜುಗರವಾಗಿದೆ.
ಪೊಲೀಸ್ ಕಚೇರಿಯಲ್ಲಿ ಬೇರೆ ಬೇರೆ ಡ್ರೆಸ್ ನಲ್ಲಿರುವ ಯುವತಿಯರು ಮತ್ತು ಮಹಿಳೆಯರ ಜೊತೆ ಅಸಭ್ಯವಾಗಿ, ಅಶ್ಲೀಲವಾಗಿ ರಾಮಚಂದ್ರರಾವ್ ವರ್ತಿಸಿರುವ ವಿಡಿಯೋಗಳು ಬಿಡುಗಡೆ ಆಗಿವೆ. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಗೃಹ ಸಚಿವರನ್ನು ಭೇಟಿಯಾಗಲು ಹೋಗಿದ್ದ ರಾಮಚಂದ್ರರಾವ್ ಅವರನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿಗೆ ಅವಕಾಶ ನೀಡಿಲ್ಲ. ಜ್ವರದಿಂದ ಬಳಲುತ್ತಿರುವ ಕಾರಣದಿಂದ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.
ರಾಮಚಂದ್ರರಾವ್ ಅವರ ಇನ್ನಷ್ಟು ರಾಸಲೀಲೆ ವಿಡಿಯೋಗಳು ಇವೆ ಎಂಬ ಅನುಮಾನವೂ ಗರಿಗೆದರಿದೆ. ಯಾಕೆಂದರೆ ಈ ವಿಡಿಯೋಗಳು ಈಗಿನವಲ್ಲ. ಕಳೆದೊಂದು ವರ್ಷದ ಹಿಂದೆ ವಿಡಿಯೋ ಮಾಡಿರಬಹುದು. ಕಚೇರಿಯಲ್ಲಿ ಅಳವಡಿಸಿದ್ದ ಸೀಕ್ರೇಟ್
ಕ್ಯಾಮೆರಾದಲ್ಲಿ ಸೆರೆಯಾಗಿದೆಯೋ ಅಥವಾ ಬೇರೆ ಯಾರೋ ಇದನ್ನು ವಿಡಿಯೋ ಮಾಡಿ ಇಟ್ಟುಕೊಂಡು ಈಗ ವೈರಲ್ ಮಾಡಿದ್ದಾರೆಯೋ ಎಂಬುದು ಸ್ಪಷ್ಟವಾಗಿಲ್ಲ.
ಕರ್ನಾಟಕ ಪೊಲೀಸ್ ಇಲಾಖೆ ಮಾನ, ಮರ್ಯಾದೆ ಹರಾಜು ಹಾಕುವ ರೀತಿಯಲ್ಲಿ ನಡೆದುಕೊಂಡಿರುವ ರಾಮಚಂದ್ರರಾವ್ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಪ್ರಸ್ತುಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿರುವ ರಾಮಚಂದ್ರರಾವ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ ನಾನು ತಪ್ಪು ಮಾಡಿಲ್ಲ ಎಂದು ಬಡಾಬಡಾಯಿಸಿದ್ದಾರೆ. ಮಾತ್ರವಲ್ಲ, ಮುಖದಲ್ಲಿನ ತಪ್ಪು ಭಾವನೆಯೂ
ಎದ್ದು ಕಣುತಿತ್ತು.
ಪೊಲೀಸ್ ಇಲಾಖೆಯ ಶಿಸ್ತು, ಘನತೆ, ಗೌರವಕ್ಕೆ ಧಕ್ಕೆ ತರುವ ವಿಷಯ. ಮಹಿಳೆಯರನ್ನು ಬಲವಂತ ಮಾಡಿಲ್ಲದೇ ಇದ್ದರೂ, ಕಚೇರಿಯ ವೇಳೆಯಲ್ಲಿ ಪೊಲೀಸ್ ಡ್ರೆಸ್ ಧರಿಸಿ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ರಾಮಚಂದ್ರರಾವ್





Leave a comment