Home ದಾವಣಗೆರೆ ಸಿರಿಗೆರೆಯಲ್ಲಿ 6 ಕೋಟಿ ರೂ. ವೆಚ್ಚದ ಶಿವನಾರದ ಮುನಿ ದೇವಾಲಯ..! ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಮೃತಹಸ್ತದಿಂದ ಭೂಮಿ ಪೂಜೆ!
ದಾವಣಗೆರೆನವದೆಹಲಿಬೆಂಗಳೂರು

ಸಿರಿಗೆರೆಯಲ್ಲಿ 6 ಕೋಟಿ ರೂ. ವೆಚ್ಚದ ಶಿವನಾರದ ಮುನಿ ದೇವಾಲಯ..! ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಮೃತಹಸ್ತದಿಂದ ಭೂಮಿ ಪೂಜೆ!

Share
ಶಿವಮೂರ್ತಿ ಶಿವಾಚಾರ್ಯ ಶ್ರೀ
Share

ದಾವಣಗೆರೆ: ‘ಚಿಗಟೇರಿ ಎಂಬ ಊರಿಲ್ಲ, ನಾರಪ್ಪನೆಂಬ ದೇವರಿಲ್ಲ’ ಎಂಬ ಗಾದೆ ಪ್ರಚಲಿತ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿರುವ ಈ ಪ್ರಸಿದ್ಧ ಚಿಗಟೇರಿ ಪುರಾಧೀಶ ಶಿವನಾರದಮುನಿಯ ನೂತನ ದೇವಾಲಯ ನಿರ್ಮಾಣ ಕಾರ್ಯದ ಭೂಮಿ ಪೂಜೆ ಕಾರ್ಯಕ್ರಮವು ಸಿರಿಗೆರೆಯಲ್ಲಿ ಜನವರಿ 19 ಸೋಮವಾರ ಬೆಳಗ್ಗೆ 10.15 ಕ್ಕೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದೆ.

READ ALSO THIS STORY: BIG BREAKING: ದಾವಣಗೆರೆಯ ಆನಗೋಡು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವು: ವೀಕ್ಷಣೆ ತಾತ್ಕಾಲಿಕ ಬಂದ್!

ಮಧ್ಯ ಕರ್ನಾಟಕದಲ್ಲಿ ಅಪಾರ ಭಕ್ತರನ್ನು ಹೊಂದಿರುವ ದೈವ ಶಿವನಾರದಮುನಿ. ದೇವರಿಗೆ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ ಜಿಲ್ಲೆಗಳು ಸೇರಿ ಅಪಾರ ಭಕ್ತರು ನಡೆದುಕೊಳ್ಳುವರು. ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ವೆಂಬ ಪ್ರತೀತಿಯೊಂದಿಗೆ ಸ್ವಾಮಿ, ಮಹರ್ಷಿ ತಪೋನಿಧಿಗಳಿಗೆ ನೆಲೆಕೊಟ್ಟ ಸ್ಥಳ -‘ಚಿನ್ನದ ಚಿಗಟೇರಿ’. ‘ದಂಡಗಂಟೆಯ ನಾರದ’ ಎಂಬ ಖ್ಯಾತಿ ಪಡೆದ ದೈವ ಶಿವನಾರದಮುನಿ.

ಎಂಟನೇ ಶತಮಾನದಲ್ಲಿ ಉತ್ತರ ಭಾರತದಿಂದ ಬಂದು ಮಧ್ಯ ಕರ್ನಾಟಕದಲ್ಲಿ ನೆಲೆನಿಂತು, ತಪಗೈದ ‘ಭೈರೇಶ’ ತನ್ನ ತಪಶಕ್ತಿಯಿಂದ ಭಕ್ತನ ಮೈಮೇಲಿನ ‘ನಾರುಹುಣ್ಣು’(ಚರ್ಮದ ಮೇಲಿನ ಗಂಟು) ನಿವಾರಣೆ ಮಾಡಿದರು. ಭೈರೇಶರು ಶಿವನಾರದ ಮುನಿಯಾಗಿ ಚಿಗಟೇರಿ ಗ್ರಾಮದ ಕ್ಷಾಮ ನೀಗಿದ್ದರು, ಪವಾಡ ಗೈದಿದ್ದರು ಎಂಬುದು ಇತಿಹಾಸ. ಅಂದು ಕ್ಷಾಮದಿಂದ ಕಂಗಾಲಾಗಿದ್ದ ಜನರ ಬಾಳಿಗೆ ಬೆಳಕಾಗಿ ಬಂದಿದ್ದ ನಾರದ ಮುನಿಗೆ, ಇಂದು ನಾಡಿನೆಲ್ಲೆಡೆ ಲಕ್ಷಾಂತರ ಭಕ್ತರಿದ್ದಾರೆ. ಅಂದಿನಿಂದ ನಾರನ್ಮುನಿ, ಶಿವನಾರದಮುನಿ ಎಂದು ಪ್ರಚಲಿತರಾದರು. ಹುಲ್ಲೂರಿನಿಂದ ಚಿಗಟೇರಿ ಗ್ರಾಮದ ಕ್ಷಾಮ ನಿವಾರಣೆಗೆ ಬಂದು ನೆಲೆಸಿದರು. ಅಲ್ಲಿ ನಾಡಗೌಡರು ದೇವಸ್ಥಾನ ನಿರ್ಮಿಸಿದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಭಕ್ತರ ಸಹಕಾರದಿಂದ ಅಂದಾಜು 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಯನ ಮನೋಹರ ಚಾಲುಕ್ಯ ಶೈಲಿಯಲ್ಲಿ ಕಲ್ಲಿನಲ್ಲಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಶಿವನಾರದ ಮುನಿ ದೇವಸ್ಥಾನ ಟ್ರಸ್ಟ್ ಸಂಕಲ್ಪಿಸಿ, ನೀಲನಕ್ಷೆಯೊಂದಿಗೆ ಭೂಮಿ ಪೂಜೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Share

Leave a comment

Leave a Reply

Your email address will not be published. Required fields are marked *