ದಾವಣಗೆರೆ: ರಾಜ್ಯದಲ್ಲಿ ಒಪಿಎಸ್ನ್ನು ಜಾರಿಗೊಳಿಸಲು ಸರಕಾರವು ಕ್ರಮವಹಿಸದ್ದಿದ್ದರೆ ಅನಿವಾರ್ಯವಾಗಿ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡುವ ಮೂಲಕ ಹೋರಾಟ ನಡೆಸಲು ಸಿದ್ಧ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ ಗುಡುಗಿದ್ದಾರೆ.
READ ALSO THIS STORY: BIG BREAKING: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿಕೆ: ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ್ ಬಂಧನ!
ದಾವಣಗೆರೆಯಲ್ಲಿ ಕನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಜರುಗಿದ ಅಖಿಲ ಕರ್ನಾಟಕ ಎನ್ ಪಿಎಸ್ ನೌಕರರ ಸಂಘದ ರಾಜ್ಯಮಟ್ಟದ 2ನೇ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಓಪಿಎಸ್ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಸಂಘವು ನೌಕರರ ಹಿತ ಕಾಪಾಡಲು ಅನಿವಾರ್ಯವಾಗಿ ನಿಣಾರ್ಯಯಕ ಹಂತದಲ್ಲಿ ಕೆಲವು ದಿಟ್ಟ ನಿರ್ಧಾರ ಕೈಗೊಳ್ಳುವುದೆಂದರು.
ಸಂಘವು ರಾಜ್ಯ ನೌಕರರಿಗೆ ಕೇಂದ್ರ ಮಾದರಿ ವೇತನ ಶ್ರೇಣಿ ಮತ್ತು ಓಪಿಎಸ್ ಜಾರಿಗೊಳಿಸ ಬೇಕೆಂಬ ಪ್ರಮುಖ 2 ಅಂಶದ ಬೇಡಿಕೆಗಳ ಈಡೇರಿಕೆಗಾಗಿ ಯಾವುದೇ ತೆರನಾದ ಹೋರಾಟಕ್ಕೂ ಸಿದ್ಧವಾಗಿದೆ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ನೌಕರರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುತ್ತಿದ್ದು ಈವರೆಗೂ 7ನೇ ವೇತನ ಆಯೋಗದ ವರದಿ ಅನುಷ್ಟಾನ, ಶಿಶುಪಾಲನಾ ರಜೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ವೇತನ ಪ್ಯಾಕೇಜ್ ಅಕೌಂಟ್ ಮುಂತಾದ ನೌಕರರ ಪರವಾದ ಆದೇಶಗಳನ್ನು ಸರ್ಕಾರದಿಂದ ಮಾಡಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಾದ ವೀರೇಶ್ ಎಸ್. ಒಡೇನಪುರ ಮಾತನಾಡಿ ರಾಜ್ಯದಲ್ಲಿ ನೌಕರರು ಓಪಿಎಸ್ ಜಾರಿಯಾಗುವ ವಿಶ್ವಾಸದಲ್ಲಿದ್ದಾರೆ. ರಾಜ್ಯಾಧ್ಯಕ್ಷ ಷಡಕ್ಷರಿಯವರು ಈ ಸಭೆಯಲ್ಲಿ ಗಟ್ಟಿ ನಿರ್ಧಾರ ಘೋಷಿಸಬೇಕೆಂದು ಒತ್ತಾಯಿಸಿದರು. ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಕನಾಟಕ ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗನಗೌಡ ಸರ್ಕಾರದೊಂದಿಗೆ ಸಂಧಾನವಾದರೂ ಸರಿ, ಸಮರವಾದರೂ ಸರಿ, ಓಪಿಎಸ್ ಜಾರಿಯಾಗಲೇಬೇಕು. ಇದಕ್ಕಾಗಿ ಹೋರಾಟ ನಿರಂತರವಾಗಿರಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಮಿಳುನಾಡು ರಾಜ್ಯದ ಎನ್ ಪಿ ಎಸ್ ನೌಕರರ ಸಂಘದ ಸೆಲ್ವಕುಮಾರ್, ಫ್ರೆಡ್ರಿಕ್ ಏಂಜಲ್, ಅಖಿಲ ಕನಾಟಕ ಎನ್ ಪಿಎಸ್ ನೌಕರರ ಸಂಘದ ಗೌರವ ಸಲಹೆಗಾರರಾದ ರುದ್ರಪ್ಪ, ಕಾರ್ಯಾಧ್ಯಕ್ಷ ಸದಾನಂದ ನೆಲ್ಕುದ್ರಿ, ಕಾರ್ಯದಶ್ರಿ ಚಂದ್ರಶೇಖರ್ ಅಖಿಲ ಕನಾಟಕ ಎನ್ ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಸೇರಿದಂತೆ ಎಲ್ಲಾ ಜಿಲ್ಲಾಧ್ಯಕ್ಷರು ಹಾಗೂ ಸರ್ಕಾರಿ ನೌಕರರ ಸಂಘ ವಿವಿಧ ಹಂತದ ಪದಾಧಿಕಾರಿಗಳು ಹಾಜರಿದ್ದರು.





Leave a comment